twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿಯಲ್ಲಿ 'ಡಿ-ಬಾಸ್' ಚಿತ್ರಕ್ಕೆ ಬೇಡಿಕೆ ಹೆಚ್ಚಲು ಕಾರಣ ಇದಿರಬಹುದು.!

    |

    Recommended Video

    Kurukshetra Movie: ಹಿಂದಿಯಲ್ಲಿ 'ಡಿ-ಬಾಸ್' ಚಿತ್ರಕ್ಕೆ ಬೇಡಿಕೆ ಹೆಚ್ಚಲು ಕಾರಣ ಇದಿರಬಹುದು.!

    ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗ್ತಿದೆ. ಆದರೆ, ಹಿಂದಿಯಲ್ಲಿ ಮಾತ್ರ ಒಂದು ವಾರ ಮುಂದಕ್ಕೆ ಹೋಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಚಿತ್ರಕ್ಕೆ ಸೆನ್ಸಾರ್ ಆಗದ ಕಾರಣ ಆಗಸ್ಟ್ 15ಕ್ಕೆ ಕುರುಕ್ಷೇತ್ರ ಹಿಂದಿ ಬರಬಹುದು ಎಂಬ ಟಾಕ್ ಇದೆ.

    ಕುರುಕ್ಷೇತ್ರ ಸಿನಿಮಾ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಅಂದಾಜು 3 ಸಾವಿರ ಸ್ಕ್ರೀನ್ ಕುರುಕ್ಷೇತ್ರವನ್ನ ಬರಮಾಡಿಕೊಳ್ಳಲು ಸಿದ್ಧವಾಗಿದೆಯಂತೆ. ಕೆಜಿಎಫ್ ನಂತರ ಕನ್ನಡ ಚಿತ್ರವೊಂದಕ್ಕೆ ಬಾಲಿವುಡ್ ನಲ್ಲಿ ಈ ಮಟ್ಟದ ಓಪನಿಂಗ್ ಸಿಗುತ್ತಿದೆ.

    ಸೌತ್ ಇಂಡಿಯಾದ ಚಿತ್ರಗಳಲ್ಲಿ 'ದರ್ಶನ್ ಕುರುಕ್ಷೇತ್ರ' ನಂ-2, ಏಕೆ? ಸೌತ್ ಇಂಡಿಯಾದ ಚಿತ್ರಗಳಲ್ಲಿ 'ದರ್ಶನ್ ಕುರುಕ್ಷೇತ್ರ' ನಂ-2, ಏಕೆ?

    ಅಷ್ಟಕ್ಕೂ, ಕುರುಕ್ಷೇತ್ರವನ್ನ ಯಾಕೆ ಬಾಲಿವುಡ್ ಮಂದಿ ಆಯ್ಕೆ ಮಾಡಿಕೊಂಡರು? ಅತಿ ಹೆಚ್ಚು ಸ್ಕ್ರೀನ್ ನಲ್ಲಿ ರಿಲೀಸ್ ಮಾಡಲು ಧೈರ್ಯ ಮಾಡಿದ್ದು ಯಾಕೆ? ಚೊಚ್ಚಲ ಬಾರಿಗೆ ಹಿಂದಿ ಪ್ರೇಕ್ಷಕರೆದುರು ಬರುತ್ತಿರುವ ಡಿ ಬಾಸ್ ಚಿತ್ರಕ್ಕೆ ಇಷ್ಟೊಂದು ಬೇಡಿಕೆ ಬರಲು ಹೇಗೆ ಸಾಧ್ಯ? ಮುಂದೆ ಓದಿ.....

    9 ಕೋಟಿಗೆ ಹಿಂದಿ ಹಕ್ಕು ಖರೀದಿ

    9 ಕೋಟಿಗೆ ಹಿಂದಿ ಹಕ್ಕು ಖರೀದಿ

    ಕುರುಕ್ಷೇತ್ರ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಬರೋಬ್ಬರಿ 9 ಕೋಟಿ ಖರೀದಿಸಿದ್ದರು ಎಂದು ಸ್ವತಃ ನಿರ್ಮಾಪಕ ಮುನಿರತ್ನ ಅವರೇ ಹೇಳಿದ್ದರು. ಸಾಮಾನ್ಯವಾಗಿ ಕನ್ನಡ ಸಿನಿಮಾಗಳ ಹಿಂದಿ ಡಬ್ಬಿಂಗ್ ಬೆಲೆ 2 ರಿಂದ 4 ಕೋಟಿವರೆಗೂ ಕೊಟ್ಟಿರುವ ಉದಾಹರಣೆ ಇದೆ. ಆದರೆ, ಕುರುಕ್ಷೇತ್ರಕ್ಕೆ 9 ಕೋಟಿ ಕೊಡಲು ಕಾರಣವೇನು ಎಂದು ಪ್ರಶ್ನೆ ಕಾಡುತ್ತದೆ. ಬಹುಶಃ ಅದಕ್ಕೆ ನಾಲ್ಕೈದು ಕಾರಣಗಳಿವೆ.

    'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.! 'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.!

    ದರ್ಶನ್ ಗೆ ಬೇಡಿಕೆ ಹೆಚ್ಚಿದೆ

    ದರ್ಶನ್ ಗೆ ಬೇಡಿಕೆ ಹೆಚ್ಚಿದೆ

    ಕನ್ನಡ ನಟ ದರ್ಶನ್ ಇದುವರೆಗೂ ಯಾವುದೇ ಹಿಂದಿ ಸಿನಿಮಾದಲ್ಲಿ ನೇರವಾಗಿ ನಟಿಸಿಲ್ಲ. ಆದ್ರೆ, ದರ್ಶನ್ ಅಭಿನಯದ ಚಿತ್ರಗಳು ಹಿಂದಿಗೆ ಡಬ್ ಆಗಿದೆ. ದರ್ಶನ್ ಅವರ ಡಬ್ ಚಿತ್ರಗಳಿಗೆ ಹಿಂದಿ ಮಾರುಕ್ಟಟ್ಟೆಯಲ್ಲಿ ಮಾರ್ಕೆಟ್ ಹೆಚ್ಚಿದೆ. ಯೂಟ್ಯೂಬ್ ನಲ್ಲು ದರ್ಶನ್ ಡಬ್ ಸಿನಿಮಾಗಳನ್ನ ಹೆಚ್ಚು ಜನರು ನೋಡಿದ್ದಾರೆ. ಹೀಗಾಗಿ, ದರ್ಶನ್ ಯಾರು ಎಂಬುದು ಬಿಟೌನ್ ಮಂದಿಗೆ ಪರಿಚಯ ಇದೆ.

    ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

    ಪೌರಾಣಿಕ ಚಿತ್ರ ಎಂಬ ಕಾರಣ

    ಪೌರಾಣಿಕ ಚಿತ್ರ ಎಂಬ ಕಾರಣ

    ಕುರುಕ್ಷೇತ್ರ ಪೌರಾಣಿಕ ಚಿತ್ರ. ಯಾವುದೋ ಒಂದು ಸಮುದಾಯಕ್ಕೆ, ಒಂದು ರಾಜ್ಯಕ್ಕೆ ಸೀಮಿತವಾದ ಕತೆಯಲ್ಲ. ಮಹಾಭಾರತದ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ. ಎಲ್ಲದಕ್ಕಿಂತ ಮಿಗಿಲಾಗಿ ಹಿಂದಿಯಲ್ಲಿ ಇಂತಹ ಸಿನಿಮಾ ಬಹಳ ಕಮ್ಮಿ. ಸೋ, ಪೌರಾಣಿಕ ಚಿತ್ರವನ್ನ ನೋಡಲು ಬಾಲಿವುಡ್ ಮಂದಿ ಕೂಡ ಇಂಟ್ರೆಸ್ಟ್ ಕೊಡ್ತಾರೆ.

    ಸೋನು ಸೂದ್, ಡ್ಯಾನಿಶ್

    ಸೋನು ಸೂದ್, ಡ್ಯಾನಿಶ್

    ಕುರುಕ್ಷೇತ್ರದಲ್ಲಿ ಬರಿ ಕನ್ನಡ ಸಿನಿಮಾ ಕಲಾವಿದರು ಮಾತ್ರ ಇಲ್ಲ. ಬಾಲಿವುಡ್ ಗೆ ಸೇರಿದ ಇಬ್ಬರು ಸ್ಟಾರ್ ನಟರಿದ್ದಾರೆ. ಹಿಂದಿಯಲ್ಲಿ ಹೀರೋ ಮತ್ತು ವಿಲನ್ ಆಗಿ ಮಿಂಚಿರುವ ಸೋನು ಸೂದ್ ಮತ್ತು ಹಿಂದಿ ಕುರುತೆರೆಯಲ್ಲಿ ಮಿಂಚಿರುವ ಡ್ಯಾನಿಶ್ ಅಖ್ತರ್ ಸೈಫ್ ಇಬ್ಬರ ಬಲ ಇದೆ. ಹಾಗಾಗಿ, ಹಿಂದಿ ಚಿತ್ರಾಭಿಮಾನಿಗಳಿಗೆ ಇದು ಹತ್ತರದ ಸಿನಿಮಾ. ಅಷ್ಟೇ ಅಲ್ಲ ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಶ್ ಅಂತಹ ಪರಿಚಯಸ್ಥ ನಟರಿದ್ದಾರೆ.

    'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್ 'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್

    ಕೆಜಿಎಫ್ ಯಶಸ್ಸು ಇರಬಹುದು

    ಕೆಜಿಎಫ್ ಯಶಸ್ಸು ಇರಬಹುದು

    ಈ ಹಿಂದೆ ಕನ್ನಡದಿಂದ ಬಂದ ಕೆಜಿಎಫ್ ಸಿನಿಮಾ ಹಿಂದಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಶಾರೂಖ್ ಅಂತಹ ಸಿನಿಮಾದ ಎದುರು ಬಂದು, ಬಾಕ್ಸ್ ಆಫೀಸ್ ರೂಲ್ ಮಾಡಿತ್ತು. ಕೆಜಿಎಫ್ ಗೆ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತ್ತು. ಅದೇ ಇಂಡಸ್ಟ್ರಿಯಿಂದ ಬರುತ್ತಿರುವ ಇನ್ನೊಂದು ಚಿತ್ರ ಇದು ಎಂಬ ಕಾರಣಕ್ಕೆ ನಿರೀಕ್ಷೆ ಹೆಚ್ಚಿದೆ.

    English summary
    Why Hindi Industry Gives More Importance to Kannada movie Kurukshetra.
    Saturday, August 3, 2019, 12:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X