Don't Miss!
- News
Breaking; ಕನ್ನಡದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಯಾಕೆ ಪ್ರಾಣಿಗಳ ಮೇಲೆ ಸಿನಿಮಾ ಮಾಡ್ತಿಲ್ಲ? ಅಂಬಿಯ ಮೃಗಾಯಲ ಕಥೆ ಹೇಳಿದ್ದೇಕೆ?
ಕನ್ನಡದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ಸಿನಿಮಾಗಳು ಬಂದಿವೆ. ಅವೆಲ್ಲವೂ ಕನ್ನಡಿಗರಿಗೆ ಇಷ್ಟನೂ ಆಗಿವೆ. ಬಾಕ್ಸಾಫೀಸ್‌ನಲ್ಲಿಸ ಸೂಪರ್ ಹಿಟ್ ಕೂಡ ಆಗಿದೆ. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಎಲ್ಲರೂ ಪ್ರಾಣಿ, ಕಾಡುಗಳಿಗೆ ಸಂಬಂಧಿಸಿದ ಕಥೆಗಳಿಗೆ ಸಿನಿಮಾ ಮಾಡಿ ಗೆದ್ದಿದ್ದಾರೆ.
'ಅದೃಷ್ಟ
ದೇವತೆಯ
ಬಟ್ಟೆ
ಬಿಚ್ಚಿ
ರೂಮ್‌ನಲ್ಲಿ
ಕೂರಿಸಿಕೊಳ್ಳಬೇಕು';
ದರ್ಶನ್
ಹೇಳಿಕೆಗೆ
ಆಕ್ರೋಶ,
ಫ್ಯಾನ್ಸ್
ಬೆಂಬಲ!
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕಾಡು, ಪ್ರಾಣಿಗಳು ಅಂದರೆ ಪಂಚಪ್ರಾಣ. ಹೀಗಿದ್ದರೂ ಯಾಕೆ ಅವುಗಳ ಮೇಲೆ ಸಿನಿಮಾ ಮಾಡಿಲ್ಲ ಅನ್ನೋ ಅನುಮಾನವಂತೂ ಅಭಿಮಾನಿಗಳಿಗೆ ಈಗಾಗಲೇ ಕಾಡಿದೆ.
"ನಮ್ಮಪ್ಪನ
ಸಂಭಾವನೆ
10
ಸಾವಿರ
ಅಷ್ಟೇ..
ವಿಲನ್‌ಗಳ
ಮಕ್ಕಳಿಗೆ
ಬೇರೆ
ಯಾರೂ
ಸಪೋರ್ಟ್
ಮಾಡಿಲ್ಲ"-ದರ್ಶನ್
ದರ್ಶನ್ ಯಾಕೆ ಪ್ರಾಣಿಗಳ ಮೇಲೆ ಸಿನಿಮಾ ಮಾಡಿಲ್ಲ ಅನ್ನೋದಕ್ಕೆ ಈಗ ಉತ್ತರ ಸಿಕ್ಕಿದೆ. ತಾವೇ ನಟಿಸಿದ 'ಸಾರಥಿ', ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯಿಸಿದ್ದ 'ಮೃಗಾಯಲ' ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ಪ್ರಾಣಿಗಳ ಮೇಲೆ ಸಿನಿಮಾ ಯಾಕೆ ಮಾಡಿಲ್ಲ ಅನ್ನೋದಕ್ಕೆ ಉತ್ತರ ಕೊಟ್ಟಿದ್ದಾರೆ.
ಕನ್ನಡ
ಸರ್ಕಾರಿ
ಶಾಲೆಗಳ
ಕಥೆ
ಪ್ಯಾನ್
ಇಂಡಿಯಾ
ಸಿನಿಮಾ
ಹೇಗೆ?
'ಧರಣಿ'
ಹಾಡಿನಲ್ಲೇ
ಸಿಕ್ತು
ಉತ್ತರ!

ಎನಿಮಲ್ ಬೋರ್ಡ್‌ನಿಂದ ಪರ್ಮಿಷನ್ ಬೇಕು
ದರ್ಶನ್ ಪ್ರಾಣಿಗಳನ್ನು ಅಷ್ಟೊಂದು ಪ್ರೀತಿ ಮಾಡುತ್ತಿದ್ದರೂ ಯಾಕೆ ಅವುಗಳ ಮೇಲೆ ಸಿನಿಮಾ ಮಾಡಿಲ್ಲ ಅನ್ನೋದನ್ನು ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ತಿಳಿಸಿದ್ದಾರೆ. "ಇವತ್ತು ಓಪನ್ ಚಾಲೆಂಜ್ ಹಾಕುತ್ತೇನೆ. ಎನಿಮಲ್ ಬೋರ್ಡ್‌ನಿಂದ ಒಂದು ರೈಟ್ಸ್ ತಂದು ಕೊಡಿ ಖಂಡಿತಾ ಮಾಡುತ್ತೇನೆ. ಈಗ ಏನಾಗಿದೆ ಅಂದರೆ, ಚಿತ್ರರಂಗಕ್ಕೆ ಕಡಿವಾಣಗಳು ಜಾಸ್ತಿಯಾಗಿದೆ. ಈ ಒಂದು ನಾಯಿ ಮರಿಯನ್ನೂ ನಾವು ಬಳಸುವುದಕ್ಕೆ ಆಗುವುದಿಲ್ಲ. ಯಾವುದೋ ಸಿನಿಮಾಗೆ ಮೇಲಕ್ಕೆ ಕಾಗೆ ಹಾರಿದೆಯಂತೆ. ಅದಕ್ಕೊಂದು ಪರ್ಮಿಷನ್ ತೆಗೆದುಕೊಂಡು ಬನ್ನಿ ಅಂತಾರಂತೆ. ಅದು ಹಾರಿ ಹೋಗಿರೋ ಕಾಗೆಯನ್ನು ಹಿಡ್ಕೊಂಡು ಬರೋಕೆ ಆಗುತ್ತಾ? ಹೀಗಿದ್ದಾಗ ಏನು ಮಾಡೋಕೆ ಆಗುತ್ತೆ." ಎಂದು ಹೇಳಿದ್ದಾರೆ.

'ಸಾರಥಿ'ಗೆ ನನಗಿಂತ ಹೆಚ್ಚು ವಿಶಲ್ ಬಿದ್ದಿದೆ'
'ಸಾರಥಿ' ಸಿನಿಮಾದಲ್ಲಿ ಬಿಳಿ ಕುದುರೆಯ ಪಾತ್ರವು ಪ್ರಮುಖವಾಗಿತ್ತು. ಇಲ್ಲಿ ದರ್ಶನ್ ಈ ಸಿನಿಮಾವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. "ಸಾರಥಿ ಮಾಡುವಾಗ ಕುದುರೆಯನ್ನು ತುಂಬಾನೇ ಕೇರ್ ಮಾಡಿದ್ದೆವು. ಈಗ ಸಾರಥಿ ಅಂತಹ ಸಿನಿಮಾ ಏನಕ್ಕೆ ತುಂಬಾ ಕನೆಕ್ಟ್ ಆಗುತ್ತೆ ಅಂದ್ರೆ, ಸಾರಥಿ ಸಿನಿಮಾದಲ್ಲಿ ಹಸು ಎಲ್ಲಾ ಓಡಿ ಬರುತ್ತೆ. ನಾನು ಹೋಗಿ ಮರದ ಮೇಲೆ ನಿಂತಿರುತ್ತೇನೆ. ಆಗ ಕುದುರೆ ಎಗರಿದ್ದಾಗ ನನ್ನ ಸ್ನೇಹಿತರೇ ಹೇಳಿದ್ರು. ದರ್ಶನ್ ನಿನಗಿಂತ ಕುದುರೆಗೆ ಹೆಚ್ಚು ವಿಶಲ್ ಬಿದ್ದಿದೆ ಎಂದಿದ್ದರು." ಎಂದು ಸಿನಿಮಾದಲ್ಲಿ ಪ್ರಾಣಿಗಳ ಮಹತ್ವವನ್ನು ವಿವರಿಸಿದ್ದಾರೆ.

'ಕುದುರೆ ನಾವು ಹೇಳಿದ ಹಾಗೆ ಕೇಳೋದು'
" ಸ್ಟ್ಯಾನ್ಲಿ ಅಂತ ನಮ್ಮೋನೆ. ಅದೆಷ್ಟು ಟ್ರೈನ್ ಮಾಡಿಕೊಂಡಿದ್ವಿ ಅಂದರೆ, ನಾನು ಅವನನ್ನು ಎಲ್ಲೂ ಕಟ್ಟುತ್ತಿರಲಿಲ್ಲ. ಬಾ ಅಂದರೆ ಬರೋನು. ಕೂರು ಅಂದರೆ ಕೂರೋನು. ಅವನನ್ನು ಟ್ರೈನ್ ಮಾಡೋಕೆ ಬಂದೋರೆ ಹೇಳುತ್ತಿದ್ದರು. ಇಷ್ಟು ಒಳ್ಳೆ ಕುದುರೆಯನ್ನು ನೋಡಿಲ್ಲ ಅಂತ. ಇವತ್ತು ನಾವು ಮಾಡೋಕೆ ಆಗುತ್ತಾ?" ಎಂದು ಸಾರಥಿಯಲ್ಲಿ ಕುದುರೆಯನ್ನು ಹೇಗೆ ನೋಡಿಕೊಂಡೆವು ಅನ್ನೋದನ್ನು ಹೇಳಿದ್ದಾರೆ.

'ಮೃಗಾಲಯ' ನೆನಪಿಸಿಕೊಂಡ ದರ್ಶನ್
"ಮೃಗಾಲಯ ಸಿನಿಮಾ ಮಾಡುವಾಗ ಕಪಿಲ್ ಅಂತ ಕುದುರೆ ಹೆಸರು. ಅಂಬರೀಶ್ ಪರ್ಮಿಷನ್ ತಗೊಂಡು ಅವನಿಗೋಸ್ಕರ ಲಿಲಿತ್ ಮಹಲ್‌ನಲ್ಲಿ ರೂಮ್ ಹಾಕಿ, ರಾತ್ರಿ ಎಲ್ಲ ಅವನ ಜೊತೆ ಇರುತ್ತಿದ್ದರಂತೆ. ಅಂದರೆ, ಅಷ್ಟು ಚೆನ್ನಾಗಿ ಅವರ ಜೊತೆ ಇತ್ತು. ಕೇರ್ ಟೇಕರ್ ಇರೋ ತನಕ ಸುಮ್ಮನೆ ಇರೋದಂತೆ. ಅವನು ಹೋದ ಮೇಲೆ ಅಂಬರೀಶ್ ಕೈಯಲ್ಲಿ ಸಿಗರೇಟ್ ಇದ್ದರೆ ಅದನ್ನು ಕಿತ್ತುಕೊಳ್ಳೋಕೆ ಹೋಗುತ್ತಿತ್ತಂತೆ. ಅದನ್ನು ನೋಡುವುದಕ್ಕೆ ಚಂದ." ಎಂದು ಅಂಬಿ ಹೇಳಿದ ಮೃಗಾಲಯದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.