»   » ಎಲ್ಲಾ ಓಕೆ ಐಟಂಗೆ ಪೂನಂ ಪಾಂಡೆ ಯಾಕೆ?

ಎಲ್ಲಾ ಓಕೆ ಐಟಂಗೆ ಪೂನಂ ಪಾಂಡೆ ಯಾಕೆ?

By: ಜೀವನರಸಿಕ
Subscribe to Filmibeat Kannada

ಇದಪ್ಪ ವಿಚಿತ್ರ ಅನ್ನಿಸೋದು ಗಾಂಧಿನಗರದ ಮಂದಿಯ ಬುದ್ಧಿ. ಈ ಗಾಂಧಿನಗರದ ಜನರಿಗೆ ಪೂಜಾ ಬೆನ್ನು ತೋರಿಸಿದ್ರೆ ಅಸಹ್ಯ ಅಶ್ಲೀಲ ಅಂತೆ. ಆದ್ರೆ ಬಾಲಿವುಡ್, ಬಾಂಬೆಯಿಂದ ಬರೋ ಬ್ಯೂಟಿಗಳು ಇನ್ನೂ ಎನೇನೋ ತೋರಿಸಿದ್ರೂ ಓಕೆ. ಇದ್ಯಾಕೆ ಅಂತಿದ್ದಾರೆ ಗಾಂಧಿನಗರದ ರಸಿಕಮಂದಿ.

ಇಲ್ಲಿರೋರು ಬೇರೆ ಅಲ್ಲಿರೋರು ಬೇರೆ ಏನು? ಎಲ್ಲರ್ಗೂ ಅದೇ ಗ್ಲಾಮರ್ರು ಅದೇ ಫಿಗರ್ರು. ಆದ್ರೂ ಯಾಕೆ ಈ ತಾರತಮ್ಯ. ಮಳೆ ಹುಡುಗಿ ಪೂಜಾ ದಂಡುಪಾಳ್ಯದಲ್ಲಿ ಬೆನ್ನು ತೋರಿಸಿದ್ರೆ ಪ್ರತಿಭಟನೆಗಳಾಗ್ತವೆ. ಪೂನಂ ಪಾಂಡೆ ಇನ್ನೂ ಏನೇನೋ ತೋರಿಸಿದ್ರೂ ಎಲ್ಲರೂ ಕಣ್ಣು ಬಾಯಿಬಿಟ್ಕೊಂಡ್ ನೋಡ್ತಾರೆ. ಯಾಕೆ ಹಿಂಗೆ?

ಒಟ್ಟಾರೆ ಕನ್ನಡದ ಖತರ್ನಾಕ್ ಬ್ಯೂಟಿಗಳನ್ನ ಬಳಸಿಕೊಳ್ಳದ ಗಾಂಧಿನಗರ ಅವರಿಗೆ ಸಂಪ್ರದಾಯದ ಸೆರಗು ಹೊದಿಸಿ ಪರಭಾಷೆಯವರನ್ನು ಒನಪು ಒಯ್ಯಾರಕ್ಕೆ ಕೋಟಿಗಟ್ಟಲೆ ಸುರೀತಿದೆ ಅನ್ನೋದು ಸ್ಯಾಂಡಲ್ ವುಡ್ ಬಿಂದಾಸ್ ಬೆಡಗಿಯರ ಅಳಲು.

ರಮ್ಯಾಗೆ ಬೇಕಿತ್ತಾ ಐಟಂ ಸಾಂಗ್?

ಊರಿಗೊಬ್ಳೆ ಪದ್ಮಾವತಿ ಅಂದ್ರೆ ರಮ್ಯಾಗೆ ಬೇಕಿತ್ತಾ ಐಟಂ ಸಾಂಗು ಅಂತಾರೆ. ಸ್ಕಾರ್ಲೆಟ್ ಅನ್ನೋ ಹುಡ್ಗಿ ಪ್ರೇಮ್ ಅಡ್ಡಾಗೆ ಕುಣಿದ್ರೆ ಮಿಕ ಮಿಕ ನೋಡ್ತಾರೆ.

ಐಂದ್ರಿತಾ ಅಂದ್ರೆ ಎಲ್ರ ಕಿವಿ ನೆಟ್ಟಗಾಗ್ತವೆ?

ಐಂದ್ರಿತಾ ಐಟಂ ಡಾನ್ಸ್ ಮಾಡ್ತಾಳೆ ಅಂದ್ರೆ ಎಲ್ರ ಕಿವಿ ನೆಟ್ಟಗಾಗ್ತವೆ. ಸನ್ನಿ ಲಿಯೋನ್ ಸೊಂಟ ತಿರುಗಿಸ್ತಾಳೆ ಅಂದ್ರೆ ಒಳಗೊಳಗೆ ಮಂಡಿಗೆ ಮೆಲ್ತಾರೆ.

ಬಾಂಬೆ ಐಟಂ ಗರ್ಲ್ ಅಂದ್ರೆ ಯಾಕೆ ಹಿಂಗೆ?

ರೂಪಾ ನಟರಾಜ್ ಹಾಟ್ ಆಗಿ ಕಾಣಿಸಿಕೊಂಡ್ರೆ ಕಾಲ ಕೆಟ್ಟೋಯ್ತಪ್ಪ ಈ ರೇಂಜಿಗೆ ಗ್ಲಾಮರ್ರಾ ಅಂತಾರೆ. ಅದೇ ಜನ ಬಾಂಬೆ ಐಟಂ ಗರ್ಲ್ ಅಂದ್ರೆ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಅಂತಾರೆ.

ರಾಗಿಣಿ ಅಂದ್ರೆ ಯಾಕೆ ಮೂಗು ಮುರೀತಾರೆ?

ರಾಗಿಣಿ ಗ್ಲಾಮರ್ ಡಾಲ್ ಆಗಿದ್ರೆ ಸಾಕು ಅಂದಿದ್ದ ಮಂದಿ ತುಪ್ಪಾ ಬೇಕಾ ತುಪ್ಪ ಅಂದಾಗ ಮೂಗು ಮುರಿದಿದ್ರು. ಆದ್ರೆ ರಾಕಿ ಸಾವಂತ್ ಮಲ್ಲಿಕಾ ಶೆರಾವತ್ ರಂತಹಾ ಬ್ಯೂಟಿಗಳ ಮೈಮಾಟಕ್ಕೆ ಮನಸೋತಿದ್ರು.

ಸಂಜನಾ ಬಿಚ್ಚಮ್ಮ ಆಗಿ ಹಲವರ ಕೆಂಗಣ್ಣಿಗೆ ಗುರಿ

ಅಷ್ಟೇ ಯಾಕೆ ಗಂಡ ಹೆಂಡತಿಯ ಸಂಜನಾ ಸ್ಯಾಂಡಲ್ ವುಡ್ ನಲ್ಲಿ ಬಿಚ್ಚಮ್ಮ ಆಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ರು.

English summary
Why Sandalwood actresses are not considering for item numbers? Kannada films prepares only bollywood stars like Poona Pandey, Veena Malik, Sunny Leone, Rakhi Sawant, Mallika Sherawat etc. Why Pooja Gandhi, Aindrita Ray aren't looking so hot? Why Gandhinagar turns nose up at Sandalwood actresses?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada