»   » 'ಸಾಫ್ಟ್ ವೇರ್ ಗಂಡ'ನಿಗೆ ಕೈ ಕೊಟ್ಟ ಜಗ್ಗೇಶ್

'ಸಾಫ್ಟ್ ವೇರ್ ಗಂಡ'ನಿಗೆ ಕೈ ಕೊಟ್ಟ ಜಗ್ಗೇಶ್

Subscribe to Filmibeat Kannada

'ಸಾಫ್ಟ್ ವೇರ್ ಗಂಡ' ನಿಗೆ ಮದುವೆಯಾಗುವುದಕ್ಕಿಂತ ಮುನ್ನವೇ ಹೆಂಡತಿಯ ಮೇಲೆ ಮುನಿಸು ಬಂದಿದೆ! ಡಿಸೆಂಬರ್ 5 ಕ್ಕೆ ತೆರೆಗೆ ಬರಲಿರುವ 'ಸಾಫ್ಟ್ ವೇರ್ ಗಂಡ' ಚಿತ್ರದ ನಾಯಕ ಜಗ್ಗೇಶ್ ಚಿತ್ರತಂಡದ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬ ಗುಲ್ಲು ಗಾಂಧಿನಗರದಲ್ಲಿ ಎದ್ದಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರತಂಡ ಇತ್ತೀಚೆಗೆ ಕರೆದಿದ್ದ ಪತ್ರಿಕಾಗೋಷ್ಠಿಗೂ ಜಗ್ಗೇಶ್ ಗೈರಾಗಿದ್ದರು. ಚಿತ್ರದ ಪ್ರಮೋಶನ್ ಗೂ ಕೈ ಕೊಟ್ಟಿದ್ದರು. ಈ ಬಗ್ಗೆ ನಾಯಕಿ ನಿಖಿತಾ ಬಳಿ ಕೇಳಿದಾಗ ' ಅವರು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಬಂದಿಲ್ಲ' ಎಂದು ಜಾರಿಕೊಂಡರು.[ನವರಸ ನಾಯಕ ಜಗ್ಗೇಶ್ ಈಗ ಸಾಫ್ಟ್ ವೇರ್ ಗಂಡ]

jaggesh

ಜಗ್ಗೇಶ್ ಅಸಮಮಾಧಾನಕ್ಕೇನು ಕಾರಣ?
ಚಿತ್ರವನ್ನು ನವೆಂಬರ್ ಮೊದಲ ಭಾಗದಲ್ಲೇ ಬಿಡುಗಡೆ ಮಾಡಬೇಕು ಎಂಬುದು ಜಗ್ಗೇಶ್ ಇರಾದೆಯಾಗಿತ್ತು. ಈ ಬಗ್ಗೆ ನಿರ್ಮಾಪಕರ ಬಳಿ ಹೇಳಿಕೊಂಡಿದ್ದರು. ಆದರೆ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿ ಈಗ ಕಾಲ ಕೂಡಿಬಂದಿದೆ. ಕೆಲ ತಾಂತ್ರಿಕ ಕಾರಣದಿಂದ ಚಿತ್ರಕ್ಕೆ ಬಿಡುಗಡೆ ಭಾಗ್ಯ ನೀಡಲಾಗಲಿಲ್ಲ ಎಂಬುದು ನಿರ್ಮಾಪಕರ ಸಮಜಾಯಿಷಿ.[ಪತ್ರಿಕಾ ಗೋಷ್ಠಿಯ ಚಿತ್ರಗಳು]

ಡಿಸೆಂಬರ್ 12 ಕ್ಕೆ ಬಹುನೀರಿಕ್ಷಿತ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಲಿಂಗಾ' ಬಿಡುಗಡೆಯಾಗಲಿದೆ. 'ಗಂಡ 'ಥಿಯೇಟರಿಗೆ ಬಂದು ಅಲ್ಲಿಗೆ ಕೇವಲ ಒಂದು ವಾರ ಆಗಿರುತ್ತದೆ. ದೊಡ್ಡ ಬಜೆಟ್ ಚಿತ್ರದ ಎದುರು ಗಂಡನಿಗೆ ಮನೆ(ಥಿಯೇಟರ್) ಸಿಗಲ್ಲ. ಇದ್ದ ಪ್ರದರ್ಶನಗಳಿಗೂ ಕೊಕ್ಕೆ ಬೀಳಬಹುದು. ಕಲೆಕ್ಷನ್ ಚೆನ್ನಾಗಿದ್ದರೂ ಪ್ರಮುಖ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಬಹುದು ಎಂಬ ಆತಂಕ ಜಗ್ಗೇಶ್ ಅವರದ್ದು.

English summary
Navarasanayaka Jaggesh will be on the silver screen again after a gap of many months. His upcoming movie Software Ganda will be released on December 5th all over the state. Jaggesh has been paired with actress Nikitha Thukral for the first time in this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada