Don't Miss!
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಮೈಸೂರ್ ಲೋಕೇಶ್ ಎಲ್ಲರಿಗೂ ಚಿರಪರಿಚಿತ. ಇವರ ಮಗಳೇ ಪವಿತ್ರಾ ಲೋಕೇಶ್. ಹೌದು, ಪವಿತ್ರಾ ಲೋಕೇಶ್ ಸ್ಫೂರದ್ರೂಪಿ ಸುಂದರಿಯಾಗಿದ್ದರು. ನೋಡಲು ಅಪ್ಸರೆಯಂತೆ ಇದ್ದರು. ಆದರೂ ಕೂಡ ಹೀರೊಯಿನ್ ಆಗಿ ಪವಿತ್ರಾ ಲೋಕೇಶ್ ಮಿಂಚಲಿಲ್ಲ.
ಅದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ನಟಿ ಪವಿತ್ರಾ ಲೋಕೇಶ್ ಅವರು ಸಿನಿಮಾರಂಗಕ್ಕೆ ಬರುವ ಮುನ್ನವೇ ಅವರ ತಂದೆಯವರು ಸಾವನ್ನಪ್ಪಿದ್ದರು. ಅಂದಿನ ಕಷ್ಟದ ದಿನಗಳಲ್ಲಿಯೇ ತಮ್ಮ ಮತ್ತು ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಪವಿತ್ರಾ ಲೋಕೇಶ್ ಅವರ ಮೇಲೆ ಬಿದ್ದಿತ್ತು.
ಪವಿತ್ರಾ
ಲೋಕೇಶ್
ಮತ್ತು
ನರೇಶ್
ಮೇಲೆ
ಕಿಡಿಕಾರಿದ
ತೆಲುಗು
ನಟಿ
ಶ್ರೀರೆಡ್ಡಿ!
ಖ್ಯಾತ ನಟನ ಮಗಳಾದರೂ ಕನ್ನಡ ಚಿತ್ರರಂಗಕ್ಕೆ ಬರುವುದಕ್ಕೆ ಪವಿತ್ರಾ ಲೋಕೇಶ್ ಅವರು ತುಂಬಾನೇ ಹರಸಾಹಸ ಪಡಬೇಕಾಯಿತು.

7 ಸಿನಿಮಾ ಮಾಡಿದರು ಯಶಸ್ಸು ಸಿಗಲಿಲ್ಲ!
ಪವಿತ್ರಾ ಲೋಕೇಶ್ ಮುಂದೆ ಇದ್ದದ್ದು ಸಿನಿಮಾ ರಂಗದ ಆಯ್ಕೆ. ಆದರೆ ಚಿತ್ರರಂಗಕ್ಕೆ ಬಂದ ಪವಿತ್ರಾ ಲೋಕೇಶ್ ಅವರಿಗೆ ಆರಂಭದಲ್ಲಿ ಅಷ್ಟಾಗಿ ಸಿನಿಮಾ ಆಫರ್ ಗಳು ಸಿಗಲಿಲ್ಲವಂತೆ. ಬಳಿಕ ರೆಬೆಲ್ ಸ್ಟಾರ್ ಅಂಬರೀಶ್ ಅವರು 1995ರಲ್ಲಿ 'ಮಿಸ್ಟರ್ ಅಭಿಷೇಕ್' ಚಿತ್ರದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಕೊಟ್ಟರು. ಆದರೆ ಇದು ಅಷ್ಟು ಯಶಸ್ಸು ಪವಿತ್ರಾ ಲೋಕೇಶ್ ಅವರಿಗೆ ತಂದು ಕೊಡಲಿಲ್ಲ. ತದನಂತರ ಏಳು ಸಿನಿಮಾಗಳನ್ನು ಮಾಡಿದರೂ ಅಲ್ಲಿಯೂ ಯಶಸ್ಸು ಸಿಗಲಿಲ್ಲವಂತೆ.

'ಜನುಮದ ಜೋಡಿ' ಮೂಲಕ ಕಮ್ ಬ್ಯಾಕ್!
ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ ಬಳಿಕವೂ ಸಿನಿಮಾದಲ್ಲಿ ದೊಡ್ಡ ಮಟ್ಟದ ಯಶಸ್ಸು ಇವರಿಗೆ ಸಿಗಲಿಲ್ಲ. ಹಾಗಾಗಿ ಕೆಲವು ವರ್ಷ ಸಿನಿಮಾರಂಗ ಬಿಟ್ಟು ದೂರ ಉಳಿದರು. ಪವಿತ್ರಾ ಲೋಕೇಶ್ ಬೆಂಗಳೂರಿನಲ್ಲಿ ಒಂದು ವರ್ಷ ಹೆಚ್ ಆರ್ ಆಗಿ ಕೆಲಸ ಕೂಡ ಮಾಡಿದ್ದಾರೆ. ಮತ್ತೆ 'ಜನುಮದ ಜೋಡಿ' ಮೂಲಕ ಸಿನಿಮಾದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪವಿತ್ರಾ ಲೋಕೇಶ್ ಗೆಳತಿಯರ ಪಾತ್ರದಲ್ಲಿ, ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ.

ಕುಟುಂಬ ನಡೆಸುವ ಜವಾಬ್ದಾರಿ!
ಇನ್ನು ಪವಿತ್ರಾ ಲೋಕೇಶ್ ಮೇಲೆ ಕುಟುಂಬ ನಡೆಸುವ ಜವಾಬ್ದಾರಿ ಇತ್ತು. ಇದೇ ಉದ್ದೇಶದಿಂದ ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದರು ಎನ್ನಲಾಗಿದೆ. ಪವಿತ್ರಾ ಲೋಕೇಶ್ ಪೋಷಕ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಒಬ್ಬ ಸ್ಟಾರ್ ನಟಿಯಾಗಿ ಮೆರೆಯುವುದಕ್ಕೆ ಎಲ್ಲಾ ಅರ್ಹತೆ ಇದ್ದರೂ ಅದು ನೆರವೇರಲಿಲ್ಲ.

ಸ್ಟಾರ್ ನಟರ ತಾಯಿ ಪಾತ್ರಗಳಲ್ಲಿ ಪವಿತ್ರಾ!
ಪವಿತ್ರಾ ಲೋಕೇಶ್ ಅಪ್ಸರೆಯಂತಿದ್ದರೂ, ಪ್ರತಿಭೆ ಇದ್ದರೂ ಹೆಚ್ಚು ಅವಕಾಶ ಸಿಗದ ಕಾರಣಕ್ಕಾಗಿ ಹಿಂದುಳಿದು ಬಿಟ್ಟರು ಎಂದು ಹೇಳಲಾಗುತ್ತಿದೆ. ಆದರೆ ಇಂದು ತೆಲುಗು ಚಿತ್ರರಂಗದ ಸ್ಟಾರ್ ನಟರ ಅಮ್ಮನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪವಿತ್ರಾ ಲೋಕೇಶ್. ಹಾಗೆ ಪೋಷಕ ಪಾತ್ರದಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅವರ ನಟನೆಯ 'ವೆಡ್ಡಿಂಗ್ ಗಿಫ್ಟ್' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.