For Quick Alerts
  ALLOW NOTIFICATIONS  
  For Daily Alerts

  'ಅಯೋಗ್ಯ' ನಿರ್ದೇಶಕರಿಗೆ ಭಾರಿ ಡಿಮ್ಯಾಂಡ್: 'ಮದ ಗಜ' ಆಗ್ತಾರಾ ಧ್ರುವ ಸರ್ಜಾ.?

  |

  'ಅಯೋಗ್ಯ' ಸಿನಿಮಾ ಸೂಪರ್ ಹಿಟ್ ಆದ್ಮೇಲೆ ನಿರ್ದೇಶಕ ಮಹೇಶ್ ಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. 'ಅಯೋಗ್ಯ' ಚಿತ್ರ ಹತ್ತು ಕೋಟಿ ಕ್ಲಬ್ ಸೇರಿದ್ಮೇಲೆ, ಮಹೇಶ್ ನಿರ್ದೇಶನ ಮಾಡುವ ಮುಂದಿನ ಚಿತ್ರಕ್ಕೆ ಬಂಡವಾಳ ಹಾಕಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ.

  ಚೊಚ್ಚಲ ಚಿತ್ರ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ, ನಿರ್ದೇಶಕ ಮಹೇಶ್ ಗೆ ಜವಾಬ್ದಾರಿ ಜಾಸ್ತಿ ಆಗಿದೆ. ಎರಡನೇ ಚಿತ್ರವನ್ನೂ ಚೆನ್ನಾಗಿ ತೆರೆಗೆ ತರಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ಈಗಾಗಲೇ ಮಾಸ್ ಎಂಟರ್ ಟೇನರ್ ಕಥೆಯನ್ನ ರೆಡಿ ಮಾಡಿಕೊಂಡಿರುವ ಮಹೇಶ್, ಚಿತ್ರಕ್ಕೆ 'ಮದ ಗಜ' ಅಂತ ಶೀರ್ಷಿಕೆ ಫಿಕ್ಸ್ ಮಾಡಿದ್ದಾರೆ. ಮಹೇಶ್ ಆಕ್ಷನ್ ಕಟ್ ಹೇಳುವ 'ಮದ ಗಜ' ಚಿತ್ರಕ್ಕೆ ಹೀರೋ ಯಾರಾಗುತ್ತಾರೆ ಅನ್ನೋದೇ ಸದ್ಯದ ಪ್ರಶ್ನೆ. ಮುಂದೆ ಓದಿರಿ...

  'ಮದ ಗಜ' ಆಗ್ತಾರಾ ಧ್ರುವ ಸರ್ಜಾ.?

  'ಮದ ಗಜ' ಆಗ್ತಾರಾ ಧ್ರುವ ಸರ್ಜಾ.?

  ಧ್ರುವ ಸರ್ಜಾ ಅವರಿಗೆ ನಿರ್ದೇಶಕ ಮಹೇಶ್ 'ಮದ ಗಜ' ಕಥೆ ಹೇಳಿದ್ದಾಗಿದೆ. 'ಮದ ಗಜ' ಕಥೆ ಕೇಳಿ ಧ್ರುವ ಸರ್ಜಾ ಇಷ್ಟ ಪಟ್ಟಿದ್ದಾರೆ. ಹಾಗಾದ್ರೆ, 'ಮದ ಗಜ' ಚಿತ್ರಕ್ಕೆ ಧ್ರುವ ಸರ್ಜಾ ಹೀರೋ ಆಗುತ್ತಾರಾ.? ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ ಇನ್ನೂ ಏಳು ದಿನ ಕಾಯಬೇಕು.

  'ಅಯೋಗ್ಯ'ನ ಆನಂದದಲ್ಲಿ ಭಾಗಿಯಾದ ಧ್ರುವ ಸರ್ಜಾ'ಅಯೋಗ್ಯ'ನ ಆನಂದದಲ್ಲಿ ಭಾಗಿಯಾದ ಧ್ರುವ ಸರ್ಜಾ

  ಡೇಟ್ಸ್ ಹೊಂದಾಣಿಕೆ ಆಗಬೇಕು.!

  ಡೇಟ್ಸ್ ಹೊಂದಾಣಿಕೆ ಆಗಬೇಕು.!

  'ಪೊಗರು' ಚಿತ್ರದ ಶೂಟಿಂಗ್ ನಲ್ಲಿ ನಟ ಧ್ರುವ ಸರ್ಜಾ ಬಿಜಿಯಿದ್ದಾರೆ. ಹೀಗಾಗಿ, ಡೇಟ್ಸ್ ಕ್ಲ್ಯಾಶ್ ಆಗದೇ ಇದ್ದರೆ, 'ಮದ ಗಜ' ಚಿತ್ರವನ್ನ ಧ್ರುವ ಸರ್ಜಾ ಒಪ್ಪಿಕೊಳ್ಳುವ ಸಾಧ್ಯತೆ ಇದೆ.

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.?ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.?

  ಚೆನ್ನೈನಲ್ಲಿದ್ದಾರೆ ಧ್ರುವ ಸರ್ಜಾ

  ಚೆನ್ನೈನಲ್ಲಿದ್ದಾರೆ ಧ್ರುವ ಸರ್ಜಾ

  ಸದ್ಯ ಧ್ರುವ ಸರ್ಜಾ ಚೆನ್ನೈನಲ್ಲಿದ್ದಾರೆ. ಅಲ್ಲಿಂದ ಅವರು ವಾಪಸ್ ಬರುವುದು ಸೆಪ್ಟೆಂಬರ್ 20 ರಂದು. 'ಮದ ಗಜ' ಚಿತ್ರಕ್ಕೆ ಧ್ರುವ ಸರ್ಜಾ ಡೇಟ್ಸ್ ಕೊಡ್ತಾರಾ, ಇಲ್ವಾ ಅನ್ನೋದು ಇದೇ ತಿಂಗಳ 20 ರಂದು ಪಕ್ಕಾ ಆಗಲಿದೆ.

  'ಬಹದ್ದೂರ್' ಧ್ರುವ ಸರ್ಜಾ ಗಡ್ಡ ಬಿಟ್ಟಿರುವುದರ ಹಿಂದಿನ ಗುಟ್ಟೇನು.?'ಬಹದ್ದೂರ್' ಧ್ರುವ ಸರ್ಜಾ ಗಡ್ಡ ಬಿಟ್ಟಿರುವುದರ ಹಿಂದಿನ ಗುಟ್ಟೇನು.?

  ಎಲ್ಲವೂ ಸಸ್ಪೆನ್ಸ್

  ಎಲ್ಲವೂ ಸಸ್ಪೆನ್ಸ್

  'ಮದ ಗಜ' ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಟಾಪ್ ಹೀರೋಯಿನ್ ನಾಯಕಿ ಆಗಲು ಒಪ್ಪಿಕೊಂಡಿದ್ದಾರಂತೆ. ದಕ್ಷಿಣ ಭಾರತದ ಪ್ರಖ್ಯಾತ ವಿಲನ್ 'ಮದ ಗಜ' ಚಿತ್ರಕ್ಕಾಗಿ ಗಾಂಧಿನಗರಕ್ಕೆ ಬರ್ತಿದ್ದಾರೆ. ಯಾರು ಆ ವಿಲನ್, ನಾಯಕಿ ಯಾರು ಎಂಬ ಗುಟ್ಟನ್ನ ನಿರ್ದೇಶಕ ಮಹೇಶ್ ಬಿಟ್ಟು ಕೊಟ್ಟಿಲ್ಲ. 'ಮದ ಗಜ' ಚಿತ್ರದ ಬಗ್ಗೆ ಲೇಟೆಸ್ಟ್ ಅಪ್ ಡೇಟ್ಸ್ ಕೊಡ್ತಾಯಿರ್ತೀವಿ, 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಭೇಟಿ ನೀಡುತ್ತಲಿರಿ..

  English summary
  Will Dhruva Sarja board in for Mahesh directorial 2nd movie 'Madha Gaja'.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X