»   » ಅಣ್ಣಾವ್ರ ಮನೆಯಲ್ಲಿ ರಾಹುಲ್ ಗಾಂಧಿ: ಗೀತಾ ಶಿವರಾಜ್ ಕುಮಾರ್ ಗೆ ಕಾಂಗ್ರೆಸ್ ಗಾಳ.?

ಅಣ್ಣಾವ್ರ ಮನೆಯಲ್ಲಿ ರಾಹುಲ್ ಗಾಂಧಿ: ಗೀತಾ ಶಿವರಾಜ್ ಕುಮಾರ್ ಗೆ ಕಾಂಗ್ರೆಸ್ ಗಾಳ.?

Posted By:
Subscribe to Filmibeat Kannada

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಭೇಟಿ ಆಗಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ನಿನ್ನೆ (ಜೂನ್ 12) ಬೆಂಗಳೂರಿಗೆ ಬಂದಿದ್ದರು.

ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ, ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ, ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಡಾ.ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದರು.

ಪಾರ್ವತಮ್ಮ ರಾಜ್ ಕುಮಾರ್ ನಿಧನರಾದ ಹಿನ್ನಲೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಡಾ.ರಾಜ್ ನಿವಾಸಕ್ಕೆ ರಾಹುಲ್ ಗಾಂಧಿ ತೆರಳಿದ್ದರೂ, ರಾಜಕೀಯ ವಲಯದಲ್ಲಿ ಅದಕ್ಕೆ ಬೇರೆಯದ್ದೇ ವ್ಯಾಖ್ಯಾನ ನೀಡಲಾಗುತ್ತಿದೆ. ಮುಂದೆ ಓದಿರಿ....

ಗೀತಾ ಶಿವರಾಜ್ ಕುಮಾರ್ ರವರಿಗೆ ಕಾಂಗ್ರೆಸ್ ಗಾಳ.?

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಪುತ್ರಿ ಆಗಿರುವ ಗೀತಾ ಶಿವರಾಜ್ ಕುಮಾರ್ ರವರಿಗೆ ಗಾಳ ಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ

ರಾಹುಲ್ ಗಾಂಧಿಗೆ ಗೀತಾ ರವರನ್ನು ಪರಿಚಯಿಸಿದ ಡಿ.ಕೆ.ಶಿ

ಡಾ.ರಾಜ್ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ, ಶಿವರಾಜ್ ಕುಮಾರ್ ಪತ್ನಿ ಗೀತಾ ರವರನ್ನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ರಾಹುಲ್ ಗಾಂಧಿಗೆ, ''ಇವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಪುತ್ರಿ'' ಎಂದು ಪರಿಚಯಿಸಿದರಂತೆ. ಸಾಲದಕ್ಕೆ ''ಬಂಗಾರಪ್ಪ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಮುಖ್ಯಮಂತ್ರಿ'' ಎಂದೂ ಡಿ.ಕೆ.ಶಿ ಉದ್ಗಾರ ಮಾಡಿದರಂತೆ. ಇದನ್ನ ಕೇಳಿ ರಾಹುಲ್ ಗಾಂಧಿ 'ಓಕೆ' ಎಂದು ಕಣ್ಣರಳಿಸಿದರಂತೆ.

ಅಲ್ಲಿಗೆ...

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರೆ, ಪಕ್ಷಕ್ಕೆ ಬಲ ಬರುವುದು ಖಚಿತ ಎಂಬ ಲೆಕ್ಕಾಚಾರ ಶುರು ಆಗಿದೆ.

ಮುಂಬರುವ ಚುನಾವಣೆಯಲ್ಲಿ ಟಿಕೆಟ್.?

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೀತಾ ಶಿವರಾಜ್ ಕುಮಾರ್ ರವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ರಾಜಕೀಯ ಸಹವಾಸ ಸಾಕಾಗಿ ಹೋಗಿದೆ: ಶಿವಣ್ಣ

ಸೋತಿದ್ದ ಗೀತಾ ಶಿವರಾಜ್ ಕುಮಾರ್

ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆ.ಡಿ.ಎಸ್ ಸ್ಪರ್ಧಿಯಾಗಿ ಗೀತಾ ಶಿವರಾಜ್ ಕುಮಾರ್ ಸೋಲು ಅನುಭವಿಸಿದ್ದರು. ಬಳಿಕ 'ರಾಜಕೀಯ ಸಹವಾಸ ನಮಗೆ ಸಾಕಾಗಿ ಹೋಗಿದೆ' ಎಂದು ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದರು. ಹೀಗಿರುವಾಗ, ಮತ್ತೆ ಗೀತಾ ಶಿವರಾಜ್ ಕುಮಾರ್ ರಾಜಕೀಯಕ್ಕೆ ಧುಮುಕುತ್ತಾರಾ ಎಂಬ ಪ್ರಶ್ನೆಗೆ ಸದ್ಯ ಉತ್ತರ ಇಲ್ಲ.

'ನೀತಿ ಸಂಹಿತೆ ಉಲ್ಲಂಘನೆ': ಕೋರ್ಟ್ ಗೆ ಹಾಜರಾದ ಶಿವಣ್ಣ ದಂಪತಿ

ಶಿವರಾಜ್ ಕುಮಾರ್ ಏನಂತಾರೆ.?

''ನಮಗೆ ಯಾವ ರಾಜಕೀಯ ಪಕ್ಷ ಸೇರುವ ಉದ್ದೇಶ ಇಲ್ಲ. ಇದೊಂದು ಸೌಜನ್ಯಯುತವಾದ ಭೇಟಿ. ಅಮ್ಮನನ್ನು ಕಳೆದುಕೊಂಡು ಎರಡು ವಾರ ಆಗಿದೆ. ಇಂತಹ ಸಂದರ್ಭದಲ್ಲಿ ಯಾರು ರಾಜಕೀಯ ಮಾತನಾಡುತ್ತಾರೆ'' ಎಂದು ರಾಹುಲ್ ಗಾಂಧಿ ಭೇಟಿ ಕೊಟ್ಟ ಬಳಿಕ ನಟ ಶಿವರಾಜ್ ಕುಮಾರ್ ಹೇಳಿದರು.

English summary
Will Geetha Shiva Rajkumar, Wife of Kannada Actor Shiva Rajkumar, Daughter of EX CM Bangarappa contest from Congress in Coming Election.? Read the article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada