Just In
Don't Miss!
- Automobiles
ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- News
ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್ಡಿಕೆ
- Sports
ಬಾಂಗ್ಲಾ vs ವಿಂಡೀಸ್: ಒಂದೇ ಪಂದ್ಯದಲ್ಲಿ ವಿಂಡೀಸ್ ತಂಡಕ್ಕೆ 6 ಆಟಗಾರರು ಪದಾರ್ಪಣೆ
- Lifestyle
ಗರ್ಭಾವಸ್ಥೆಯಲ್ಲಿ ಮಧುಮೇಹ: ಪ್ರಾರಂಭದಲ್ಲಿಯೇ ವ್ಯಾಯಾಮದಿಂದ ತಡೆಗಟ್ಟಲು ಸಾಧ್ಯ
- Finance
ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಚಿತ್ರ ಮಾಡಿದ್ರೆ, ಯಶ್ ಇಮೇಜ್ ಕಂಪ್ಲೀಟ್ ಬದಲಾಗುತ್ತಂತೆ.!
ರಾಕಿಂಗ್ ಸ್ಟಾರ್ ಯಶ್ ಗೆ ತಮ್ಮದೇ ಆದ ಇಮೇಜ್ ಇದೆ. ಡಿಫ್ರೆಂಟ್ ಸ್ಟೈಲ್, ಮ್ಯಾನರಿಸಂ, ಡೈಲಾಗ್ ನಿಂದ ಎಲ್ಲ ರೀತಿಯ ಪಾತ್ರಗಳಿಗೂ, ಎಲ್ಲ ರೀತಿಯ ಚಿತ್ರಗಳಿಗೂ ಹೊಂದಿಕೊಳ್ಳುವ ನಟ.
ಇಂತಹ ನಟನಿಗೆ ಇಮೇಜ್ ಬದಲಿಸುವ ಚಿತ್ರವೊಂದು ಸಿದ್ದವಾಗುತ್ತಿದೆ. ಈ ಚಿತ್ರವನ್ನ ಯಶ್ ಮಾಡಿದರೇ ಸ್ಯಾಂಡಲ್ ವುಡ್ ನಲ್ಲಿ ಅವರ ಇಮೇಜ್ ಕಂಪ್ಲೀಟ್ ಬದಲಾಗುತ್ತಂತೆ. ಅಂದ್ಹಾಗೆ, ಈ ಚಿತ್ರ ತೆಲುಗಿನ ರೀಮೇಕ್. ಈಗಾಗಲೇ ಕನ್ನಡದ ರೀಮೇಕ್ ಹಕ್ಕು ಪಡೆದಿರುವ ನಿರ್ಮಾಪಕರು, ಈ ಚಿತ್ರವನ್ನ ಯಶ್ ಮಾಡಬೇಕು ಎನ್ನುತ್ತಿದ್ದಾರೆ.
ಅಷ್ಟಕ್ಕೂ, ಯಶ್ ಇಮೇಜ್ ಬದಲಿಸುವ ಸಿನಿಮಾ ಯಾವುದು? ಈ ಚಿತ್ರದ ರೀಮೇಕ್ ರೈಟ್ಸ್ ಪಡೆದುಕೊಂಡಿರುವ ನಿರ್ಮಾಪಕ ಯಾರು? ಮುಂದೆ ಓದಿ....

ಯಶ್ ಇಮೇಜ್ ಬದಲಿಸುವ ಚಿತ್ರ ಇದೇ...
ಇತ್ತೀಚೆಗಷ್ಟೇ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಸವಾರಿ ಮಾಡುತ್ತಿರುವ ತೆಲುಗಿನ 'ಅರ್ಜುನ್ ರೆಡ್ಡಿ' ಚಿತ್ರವನ್ನ ಕನ್ನಡಕ್ಕೆ ತರುವ ಪ್ಲಾನ್ ನಡೆದಿದೆ. ಈ ಚಿತ್ರಕ್ಕೆ ಯಶ್ ನಾಯಕನಾಗಬೇಕು ಎಂಬ ಬಯಕೆ ನಿರ್ಮಾಪಕರದ್ದು. ವಿಜಯ ದೇವರಕೊಂಡ ಮತ್ತು ಶಾಲಿನಿ ಪಾಂಡೆ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ರಾಕಿಂಗ್ ಸುದ್ದಿ: ಟಿವಿ ಆಂಕರ್ ಆಗಿ ಕಿರುತೆರೆ ಕಡೆ ಮುಖ ಮಾಡಿದ ಯಶ್

'ರಾ' ಸ್ಟೈಲ್ ಸಿನಿಮಾ
ಇದೊಂದು ಲವ್ ಸ್ಟೋರಿ ಕಥೆಯಾಗಿದ್ದು, ಪ್ರೇಮ ವೈಫಲ್ಯದ ನಂತರ ನಾಯಕನ ಕಥೆ ಈ ಚಿತ್ರ ಹೊಂದಿದೆ. ಈ ಚಿತ್ರದ ನಾಯಕ ರಫ್ ಅಂಡ್ ಟಫ್ ವ್ಯಕ್ತಿತ್ವ ಹೊಂದಿರುತ್ತಾರೆ. ಮತ್ತು ಭಾವನಾತ್ಮಕ ಮನೋಭಾವದಿಂದಲೂ ಅಭಿನಯಿಸಿದ್ದಾರೆ.
ಸೊಸೆ ರಾಧಿಕಾ ಪಂಡಿತ್ ಗೆ ಪ್ರೀತಿಯ ಅತ್ತೆ ಕಡೆಯಿಂದ ಸಿಕ್ಕಿದೆ ಅದ್ಧೂರಿ ಗಿಫ್ಟ್!

ಚಿತ್ರದ ಬಗ್ಗೆ ವಿಶೇಷ ಸೂಚನೆ
'ಅರ್ಜುನ್ ರೆಡ್ಡಿ' ಸಿನಿಮಾ ರೊಮ್ಯಾಂಟಿಕ್ ಹಾಗೂ ಬೋಲ್ಡ್ ಸಿನಿಮಾ. ನಾಯಕ ಮತ್ತು ನಾಯಕಿಯ ಮಧ್ಯೆ ಅತಿಯಾದ ಹಸಿಬಿಸಿ ದೃಶ್ಯಗಳಿಂದ ಕೂಡಿದೆ. ಅದಕ್ಕಾಗಿ, ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಿದೆ. ಹೀಗಾಗಿ, ಇಂತಹ ಸಿನಿಮಾವನ್ನ ಕನ್ನಡದಲ್ಲಿ ಹೇಗೆ ಮಾಡ್ತಾರೆ ಎಂಬುದು ಈಗ ಕುತೂಹಲ.

ಯಶ್ ಸೂಕ್ತ ಎನ್ನುತ್ತಿದೆ ಸ್ಯಾಂಡಲ್ ವುಡ್
ಇನ್ನು ಈ ಚಿತ್ರವನ್ನ ಕನ್ನಡಕ್ಕೆ ತಂದಿದ್ದೇ ಆದರೆ, ವಿಜಯ ದೇವರಕೊಂಡ ಅವರ ಪಾತ್ರಕ್ಕೆ ಯಶ್ ಅವರೇ ಸೂಕ್ತ ಎನ್ನುತ್ತಿದ್ದಾರೆ ಸ್ಯಾಂಡಲ್ ವುಡ್ ನ ಕೆಲವು ಸಿನಿಮಾ ಮೇಕರ್ ಗಳು.

ಯಾರು ಆ ನಿರ್ಮಾಪಕ?
ಅರ್ಜುನ್ ರೆಡ್ಡಿ ಚಿತ್ರವನ್ನ ಕನ್ನಡಕ್ಕೆ ತರಲು ಚಿಂತನೆ ನಡೆಸಿರುವುದು ಬೇರೆ ಯಾರೂ ಅಲ್ಲ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಈ ಚಿತ್ರಕ್ಕಾಗಿ ಯಶ್ ಅವರನ್ನ ಕರೆತರುವ ಬಗ್ಗೆ ಚಿಂತನೆ ನಡೆಸಿದ್ದು, ಅಪ್ರೋಚ್ ಮಾಡಬೇಕಿದೆ. ಮತ್ತು ಕನ್ನಡಕ್ಕೆ ತಕ್ಕಂತೆ ಬದಲಾವಣೆಗಳೊಂದಿಗೆ ಸಿನಿಮಾ ಮಾಡಲಿದ್ದಾರಂತೆ.

ತಮಿಳಿನಲ್ಲಿ ಧನುಷ್, ಹಿಂದಿಯಲ್ಲಿ ರಣ್ವೀರ್!
ಇನ್ನು 'ಅರ್ಜುನ್ ರೆಡ್ಡಿ' ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತಮಿಳು ಹಾಗೂ ಹಿಂದಿಯಲ್ಲೂ ಭಾರಿ ಡಿಮ್ಯಾಂಡ್ ಹೊಂದಿದೆ. ತಮಿಳಿನಲ್ಲಿ ಧನುಷ್ ಹಾಗೂ ಬಾಲಿವುಡ್ ನಲ್ಲಿ ರಣ್ವೀರ್ ಸಿಂಗ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ.