»   » ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ರವರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು.!

ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ರವರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು.!

Posted By:
Subscribe to Filmibeat Kannada

'ಯು-ಟರ್ನ್' ಸಿನಿಮಾ ಮೂಲಕ ಕರುನಾಡ ಜನತೆಗೆ ಪರಿಚಯವಾದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ಕಂಡುಕೊಂಡಿದ್ದಾರೆ.

ಸದ್ಯ ಶ್ರದ್ಧಾ ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಆಪರೇಷನ್ ಅಲಮೇಲಮ್ಮ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇನ್ನೂ ದುನಿಯಾ ವಿಜಯ್ ಹಾಗೂ ಪ್ರೀತಂ ಗುಬ್ಬಿ ಕಾಂಬಿನೇಷನ್ ನಲ್ಲಿ ಅನೌನ್ಸ್ ಆಗಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ಆಯ್ಕೆ ಆಗಿದ್ದಾರೆ.

Will Shraddha Srinath play lead opposite Dhruva Sarja in 'Hayagreeva'?

'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದ ಮೂಲಕ 'ಬ್ಲ್ಯಾಕ್ ಕೋಬ್ರಾ' ದುನಿಯಾ ವಿಜಯ್ ಗೆ ಶ್ರದ್ಧಾ ಶ್ರೀನಾಥ್ ಮೊದಲ ಬಾರಿಗೆ ನಾಯಕಿ ಆಗಲಿದ್ದಾರೆ.

ಟಾಲಿವುಡ್ ಕಡೆ ಮುಖ ಮಾಡಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್

ಹೀಗಿರುವಾಗಲೇ, ಮತ್ತೊಂದು ಕನ್ನಡ ಚಿತ್ರಕ್ಕೂ ಶ್ರದ್ಧಾ ನಾಯಕಿ ಆಗುವ ಕುರಿತು ಮಾತುಕತೆ ನಡೆಯುತ್ತಿದೆ.

ನಟ ಧ್ರುವ ಸರ್ಜಾ ಅಭಿನಯಿಸಲಿರುವ ನಂದಕಿಶೋರ್ ಆಕ್ಷನ್ ಕಟ್ ಹೇಳಲಿರುವ 'ಹಯಗ್ರೀವ' ಚಿತ್ರಕ್ಕೂ ಶ್ರದ್ಧಾ ಶ್ರೀನಾಥ್ ನಾಯಕಿ ಆದರೆ ಚೆನ್ನ ಎನ್ನುವುದು ಚಿತ್ರತಂಡ ಅಭಿಪ್ರಾಯ.

ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬಿಜಿ ಆಗಿರುವ ಶ್ರದ್ಧಾ ಶ್ರೀನಾಥ್ 'ಹಯಗ್ರೀವ' ಚಿತ್ರಕ್ಕಾಗಿ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುತ್ತಾರಾ.? ಕಾದು ನೋಡೋಣ....

English summary
Will Shraddha Srinath play lead opposite Dhruva Sarja in 'Hayagreeva'?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada