»   » 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ಮುತ್ತುಲಕ್ಷ್ಮಿ ನಕ್ರಾ?

'ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ಮುತ್ತುಲಕ್ಷ್ಮಿ ನಕ್ರಾ?

Posted By:
Subscribe to Filmibeat Kannada

ಇಡೀ ಸತ್ಯಮಂಗಲದ ಕಾಡಿನ ರುದ್ರರಮಣೀಯ ಪರಿಸರದಲ್ಲಿ ಚಿತ್ರೀಕರಿಸಿದ್ದ ನಿರ್ದೇಶಕ ಎ.ಎಂ.ಆರ್.ರಮೇಶ್ ಅವರ ಕಾಡುಗಳ್ಳ ವೀರಪ್ಪನ್ ಜೀವನ ಚರಿತ್ರೆಯಾಧರಿತ 'ಅಟ್ಟಹಾಸ' ಚಿತ್ರ ಸಾಕಷ್ಟು ವಿವಾದಗಳ ನಂತರ ಕೊನೆಗೆ ಅದ್ಹೇಗೋ 2013 ರಲ್ಲಿ ತೆರೆ ಕಂಡು ಉತ್ತಮ ರೆಸ್ಪಾನ್ಸ್ ಗಳಿಸಿರುವ ವಿಚಾರ ನಿಮಗೆ ತಿಳಿದೇ ಇದೆ.

'ಅಟ್ಟಹಾಸ' ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಕಾಡುಗಳ್ಳ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ನಿರ್ದೇಶಕ ಎ.ಎಂ.ಆರ್.ರಮೇಶ್ ಅವರನ್ನು ನ್ಯಾಯಾಲಯಕ್ಕೆ ಎಳೆದೊಯ್ದು 25 ಲಕ್ಷ ಪರಿಹಾರ ನೀಡುವಂತೆ ವಾದಿಸಿ ಗೆಲುವು ಕಂಡಿದ್ದರು.[ಫ್ಲ್ಯಾಶ್ ನ್ಯೂಸ್: 3000 ಥಿಯೇಟರ್ ಗಳಲ್ಲಿ ಶಿವಣ್ಣ, ಕಿಲ್ಲಿಂಗ್ ವೀರಪ್ಪನ್]

ಇದೀಗ ನವೆಂಬರ್ 6 ರಂದು ತೆರೆ ಕಾಣುತ್ತಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ನಿರ್ದೇಶನದಲ್ಲಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾರುಲ್ ಯಾದವ್, ಸಂದೀಪ್ ಭಾರದ್ವಾಜ್ ಲೀಡ್ ರೋಲ್ ನಲ್ಲಿ ಮಿಂಚಿರುವ 'ಕಿಲ್ಲಿಂಗ್ ವೀರಪ್ಪನ್', ಚಿತ್ರಕ್ಕೂ ಇದೇ ಕಂಟಕ ಎದುರಾಗಲಿದೆಯೇ ಅಂತ ಪ್ರಶ್ನೆ ಎದ್ದಿದೆ. ಮುಂದೆ ಓದಿ..

'ಕಿಲ್ಲಿಂಗ್ ವೀರಪ್ಪನ್' ಚಿತ್ರದ ನಿರ್ಮಾಪಕರಿಂದ ತಡೆ ಅರ್ಜಿ

'ಅಟ್ಟಹಾಸ' ಚಿತ್ರಕ್ಕೆ ಒದಗಿದ ಪರಿಸ್ಥಿತಿ ಇದೀಗ ತಮಗೂ ಒದಗಿ ಬರಬಾರದೆಂಬ ಮುಂದಾಲೋಚನೆಯಿಂದ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ನಿರ್ಮಾಪಕರಾದ ಬಿ.ವಿ.ಮಂಜುನಾಥ್, ಬಿ.ಎಸ್.ಸುಧೀಂದ್ರ ಹಾಗೂ ಶಿವಪ್ರಕಾಶ್ ಅವರು ಮುಂದಿನವಾರ ತಡೆ ಅರ್ಜಿ ಒಂದನ್ನು ಸಲ್ಲಿಸಲಿದ್ದಾರೆ.[ಅಟ್ಟಹಾಸ : ನಿಸ್ಸಂದೇಹವಾಗಿ ಒಳ್ಳೆ ಸಿನಿಮಾ]

ಮುತ್ತುಲಕ್ಷ್ಮಿಗೆ ವಿಷಯ ತಿಳಿದಿದ್ದರೂ ವಿಚಾರಿಸಿಕೊಂಡಿಲ್ಲ

ಬಲ್ಲ ಮೂಲಗಳ ಪ್ರಕಾರ ಆರ್.ಜಿ.ವಿ ಆಕ್ಷನ್-ಕಟ್ ಹೇಳಿರುವ 'ಕಿಲ್ಲಿಂಗ್ ವೀರಪ್ಪನ್' ಬಗ್ಗೆ ಮುತ್ತುಲಕ್ಷ್ಮಿಗೆ ತಿಳಿದಿದ್ದರೂ ಕೂಡ ಯಾವುದೇ ರೀತಿ ವಿಚಾರಿಸಿಕೊಂಡಿಲ್ಲವಂತೆ. ಅಲ್ಲದೇ ಈ ಸಿನಿಮಾ ಮಾಡಬೇಕೆಂದು ನಿರ್ದೇಶಕ ಆರ್ ಜಿ ವಿ ನಿರ್ಧರಿಸಿದಾಗ ಮುತ್ತುಲಕ್ಷ್ಮಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಗೆ ಸ್ವಲ್ಪ ಹಣ ಕೂಡ ನೀಡಿದ್ದರಂತೆ.[ಪೂಜಾಗಾಂಧಿ 'ಮುತ್ತುಲಕ್ಷ್ಮಿ'ಯ ಅಸಲಿ ಕಥೆ ಏನು?]

ಸ್ವಹಿತಾಸಕ್ತಿಗಾಗಿ ಕಾನೂನು ಮಾರ್ಗ

ನಿರ್ದೇಶಕ ಆರ್ ಜಿ ವಿ ಅವರು ಮುತ್ತುಲಕ್ಷ್ಮಿ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ವಾಯಿದೆ ಮುಗಿದಿದ್ದು, ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಸಿನಿಮಾದ ವಿರುದ್ದ ನಿಂತುಕೊಳ್ಳಬಹುದು ಎಂಬ ಊಹೆಯ ಮೇರೆಗೆ ಚಿತ್ರತಂಡ ಹಾಗೂ ಚಿತ್ರದ ಹಿತಾಸಕ್ತಿಗಾಗಿ ನಿರ್ಮಾಪಕರು ಕಾನೂನು ಮಾರ್ಗ ಹಿಡಿಯಲಿದ್ದಾರೆ. ಪರಿಹಾರ ನೀಡಬೇಕಾಗಿ ಬಂದರೂ ಅದು ಕಾನೂನು ಮಾರ್ಗದಲ್ಲೇ ನಡೆಯಲಿವೆ.[ನಟಿ ಪೂಜಾ ಗಾಂಧಿ ನಸೀಬು ನೆಟ್ಟಗಿಲ್ಲ ಕಣ್ರೀ..]

ಮಳೆ ಹುಡುಗಿ ಪೂಜಾಗೂ ಮುತ್ತುಲಕ್ಷ್ಮಿ ಕಂಟಕವಾಗಿದ್ದರು

ನಟಿ ಪೂಜಾ ಗಾಂಧಿ ಅವರು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅವರ ನಿಜ ಜೀವನಾಧರಿತ ಕಥೆಯನ್ನು ಸಿನಿಮಾ ಮಾಡುವ ಯೋಚನೆಯಲ್ಲಿದ್ದ ಸಂದರ್ಭದಲ್ಲೂ ಮುತ್ತುಲಕ್ಷ್ಮಿ ಹಣದ ಖ್ಯಾತೆ ತೆಗೆದಿದ್ದರು. ಆದುದರಿಂದ ಪೂಜಾ ಗಾಂಧಿ ನಿರ್ಮಾಣ ಮಾಡಬೇಕಿದ್ದ ಚಿತ್ರ ಮುತ್ತುಲಕ್ಷ್ಮಿಯಿಂದಾಗಿ ಅರ್ಧಕ್ಕೆ ನಿಂತುಹೋಗಿದೆ.

'ಅಟ್ಟಹಾಸ' ಚಿತ್ರಕ್ಕೂ ಮುತ್ತುಲಕ್ಷ್ಮಿ ತಡೆಯಾಗಿದ್ದರು

ನಿರ್ದೇಶಕ ಎ.ಎಂ.ಆರ್.ರಮೇಶ್ ನಿರ್ದೇಶನದ 'ಅಟ್ಟಹಾಸ' ಚಿತ್ರದಲ್ಲಿ ಮುತ್ತುಲಕ್ಷ್ಮಿ ಪಾತ್ರವನ್ನು ಕೆಟ್ಟದಾಗಿ ಬಿಂಬಿಸಲಾಗಿತ್ತು ಅಂತ ವೀರಪ್ಪನ್ ಪತ್ನಿ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಚಿತ್ರತಂಡದ ವಿರುದ್ದ ಕೇಸು ದಾಖಲಿಸಿದ್ದರು. ನಂತರ ಕೋರ್ಟಿನಲ್ಲಿ ವಾದಿಸಿ ನಿರ್ದೇಶಕರಿಂದ ಹಣ ಕೂಡ ಪಡೆದುಕೊಂಡಿದ್ದರು.

English summary
Looking at the problems that director AMR Ramesh went through because of Veerappan's wife Muthulakshmi during the release of his film Attahasa in 2013, the makers of Killing Veerappan, directed by Ramgopal Varma, are taking precautionary measures before the film sees its release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada