»   » ದೊರೆ ದುಬೈಗೆ, 'ಬಾಹುಬಲಿ' ಥಿಯೇಟರ್‌ಗೆ, 'ರಾಗ' ಮನೆಗೆ

ದೊರೆ ದುಬೈಗೆ, 'ಬಾಹುಬಲಿ' ಥಿಯೇಟರ್‌ಗೆ, 'ರಾಗ' ಮನೆಗೆ

Posted By:
Subscribe to Filmibeat Kannada

ಎಲ್ಲಾ ಅಂದು ಕೊಂಡಂತೆ ಆಗಿದ್ರೆ ಕರ್ನಾಟಕದ 'ಮಲ್ಟಿಪ್ಲೆಕ್ಸ್'ಗಳಲ್ಲಿ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂಪಾಯಿ ನೀತಿ ಆದೇಶ ಚಲನಚಿತ್ರ ವಾಣಿಜ್ಯ ಮಂಡಳಿ ಕೈಸೇರಿ ಏಕರೂಪ ಟಿಕೆಟ್ ದರ ಜಾರಿಯಾಗಬೇಕಿತ್ತು. ಆದರೆ ಅದು ಆಗಿಲ್ಲ.[''ಸತ್ತಂತಿಹರನು ಬಡಿದೆಚ್ಚರಿಸು ಕನ್ನಡಾಂಬೆ'' ಇಂತಿ ವಿ.ನಾಗೇಂದ್ರ ಪ್ರಸಾದ್!]

ಇತ್ತ 'ಬಾಹುಬಲಿ 2' ಚಿತ್ರ ಬಿಡುಗಡೆಗಾಗಿ ಕನ್ನಡ ನಾಡಿನಲ್ಲಿ ಕನ್ನಡ ಸಿನಿಮಾ 'ರಾಗ'ವನ್ನು ಹೇಳದೆ ಕೇಳದೆ ಎತ್ತಂಗಡಿ ಮಾಡಿದ್ದು, ಸಿನಿಮಾಗೆ ಅನ್ಯಾಯ ಆಗಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ನೋವನ್ನು ತೋಡಿಕೊಂಡರೂ ಅವರಿಗೆ ನ್ಯಾಯ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಧ್ವನಿ ಎತ್ತಿದರು 'ಬಾಹುಬಲಿ' ಮುಂದೆ ಕನ್ನಡದ ಅತ್ಯುತ್ತಮ ಸಿನಿಮಾವೊಂದು ಕರಗಿ ಹೋಗಿರುವುದು ಕನ್ನಡಿಗರಿಗೆ ಬೇಸರ ತರಿಸಿದೆ.['ರಾಗ' ಚಿತ್ರಕ್ಕೆ ಅನ್ಯಾಯ, ಸಿಡಿದೆದ್ದ ಕನ್ನಡಿಗರು.!]

ಇದೇ ವಿಷಯಕ್ಕೆ ಸಂಬಂಧ ಪಟ್ಟಂತೆ ನೊಂದು ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್ ತಮ್ಮ ಅಭಿಪ್ರಾಯ ತಿಳಿಸಿದ್ದರು. ಈಗ ಸಾಹಿತಿ ಮತ್ತು ಪತ್ರಕರ್ತರಾದ ಜೋಗಿ ರವರು 200 ರೂಪಾಯಿ ಏಕರೂಪ ಟಿಕೆಟ್ ದರ ಇನ್ನೂ ಜಾರಿಯಾಗದ ಮತ್ತು 'ರಾಗ' ಚಿತ್ರ ಪ್ರದರ್ಶನಕ್ಕೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಕುರಿತು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಮುಂದೆ ಓದಿರಿ...

ಏಕರೂಪ ಟಿಕೆಟ್ ದರ ಜಾರಿ ಹೊತ್ತಿಗೆ 'ಬಾಹುಬಲಿ' ಗೆದ್ದು ಮನೆಗೆ ಹೋಗಿರುತ್ತಾನೆ

"ಸಿನಿಮಾ ಹಾಲ್ ಗಳ ಗರಿಷ್ಠ ಪ್ರವೇಶ ದರ 200 ರೂಪಾಯಿ ನಿಗದಿ ಮಾಡ್ತೀವಿ ಅಂತ ಹೇಳಿದ ಸಿದ್ದರಾಮಯ್ಯ ಮೂರು ದಿನದ ಪ್ರವಾಸಕ್ಕೆಂದು ಸಿಂಗಾಪುರಕ್ಕೆ ಹೋದರು. ಅವರು ಬಂದು ಮೊಹರು ಒತ್ತುವ ಹೊತ್ತಿಗೆ ಬಾಹುಬಲಿ ಗೆದ್ದು ವಾಪಸ್ಸು ಹೋಗಿರುತ್ತಾರೆ" - ಜೋಗಿ, ಸಾಹಿತಿ-ಪತ್ರಕರ್ತ

ಬರಗಾಲ ಎಂದವರೆಲ್ಲ 500-1000 ಕೊಟ್ಟು 'ಬಾಹುಬಲಿ' ಕಣ್ತುಂಬಿಕೊಳ್ಳುತ್ತಿದ್ದಾರೆ

"ಬರ, ಕಾಸಿಲ್ಲ, ಡಿಮಾನಿಟೈಸೇಷನ್ ಅಂತ ಕೊರಗುತ್ತಿದ್ದವರು, ಗುರುವಾರ ರಾತ್ರಿಯೇ 500, 700, 1000 ರೂಪಾಯಿ ಕೊಟ್ಟು ಬಾಹುಬಲಿ ನೋಡಿದರು. ಶುಕ್ರವಾರದ ಪ್ರದರ್ಶನದ ಟಿಕೆಟ್ಟುಗಳು ಅದೇ ರೀತಿ ಮಾರಾಟ ಆಗಿವೆ" - ಜೋಗಿ, ಸಾಹಿತಿ-ಪತ್ರಕರ್ತ

ಪರಭಾಷೆ ದುಬಾರಿ

"ಹೈದರಾಬಾದಿನ ಮಂದಿ 120 ರುಪಾಯಿಗೆ ನೋಡುವ ಸಿನಿಮಾವನ್ನು ನಾವು 1000 ರುಪಾಯಿ ಕೊಟ್ಟು ನೋಡುತ್ತಿದ್ದೇವೆ. ಪರಭಾಷೆ ಕೊಂಚ ದುಬಾರಿ" - ಜೋಗಿ, ಸಾಹಿತಿ-ಪತ್ರಕರ್ತ

ಕ್ಷಮೆಯ ಬೆಲೆ 45 ಕೋಟಿ

"ಕಟ್ಟಪ್ಪನ ಕ್ಷಮೆಯಿಂದಾಗುವ ಲಾಭ 45 ಕೋಟಿ ಎಂದು ಅಂದಾಜು ಮಾಡಲಾಗಿದೆ" - ಜೋಗಿ, ಸಾಹಿತಿ-ಪತ್ರಕರ್ತ

'ರಾಗ' ಚಿತ್ರ ನೋಡಿದ್ರೆ 3 ಕೋಟಿ

" 'ರಾಗ' ಚಿತ್ರದ ನಿರ್ದೇಶಕ ತನ್ನ ಸಿನಿಮಾ ನೋಡಿ ಅಂತ ನೊಂದುಕೊಂಡ ವಿಡಿಯೋವನ್ನು 3 ಲಕ್ಷ ಮಂದಿ ನೋಡಿದರು. ಅವರೆಲ್ಲ ಆ ವಿಡಿಯೋ ಬದಲು 'ರಾಗ' ಸಿನಿಮಾ ನೋಡಿದ್ರೆ 3 ಕೋಟಿ ಗಳಿಕೆ ರಾಗ ನಿರ್ಮಾಪಕರಿಗೆ ಸಿಗುತ್ತಿತ್ತು" - ಜೋಗಿ, ಸಾಹಿತಿ-ಪತ್ರಕರ್ತ

ಈ ಜಗತ್ತೇ ಹೀಗೆ...

" ಯಾರೇನೇ ಅಂದರೂ ನಮಗೆ ಬೇಕಾದ್ದನ್ನು ಮಾತ್ರ ಖರೀದಿಸುತ್ತೇವೆ. ಬೆಲೆ ಎಷ್ಟಾದರೂ ಖರೀದಿಸತ್ತೇವೆ. ಅನುಕಂಪಕ್ಕೆ ಬೆಲೆ ಕಡಿಮೆ. ಅಭಿಲಾಶೆ ದುಬಾರಿ ಮತ್ತು ಆಕರ್ಷಕ. ಶುಭವಾಗಲಿ' - ಜೋಗಿ, ಸಾಹಿತಿ-ಪತ್ರಕರ್ತ

English summary
Writer and Journalist Jogi written his views on related 'Raaga' movie fighting for theaters agaist 'Baahubali 2' and Rs 200 ticket rate notification issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada