For Quick Alerts
  ALLOW NOTIFICATIONS  
  For Daily Alerts

  6 ನಿಮಿಷದಲ್ಲಿ ಹಳೆ ದಾಖಲೆ ಉಡೀಸ್ ಮಾಡಿದ ಯಜಮಾನ ಟೈಟಲ್ ಹಾಡು.!

  |
  Yajamana movie : ಹಳೆ ದಾಖಲೆ ಉಡೀಸ್ ಮಾಡಿದ ಯಜಮಾನ ಟೈಟಲ್ ಹಾಡು.! | Filmibeat Kannada

  ಫೆಬ್ರವರಿ 5 ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ರು ಕನ್ನಡ ಸಿನಿಪ್ರೇಕ್ಷಕರು. ಯಾಕಂದ್ರೆ, ಸಂಜೆ 5 ಗಂಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಟೈಟಲ್ ಹಾಡು ರಿಲೀಸ್ ಆಗ್ತಿತ್ತು.

  ಅದರಂತೆ 'ನಿಂತ ನೋಡೋ ಯಜಮಾನ' ಹಾಡು ಬಂದಿದ್ದು, ಬಿಡುಗಡೆಯಾದ 6 ನಿಮಿಷದಲ್ಲಿ ಈ ಹಿಂದಿನ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದೆ. ಸಂತೋಷ್ ಆನಂದ್ ರಾಮ್ ಸಾಹಿತ್ಯ, ವಿಜಯ್ ಪ್ರಕಾಶ್ ಗಾಯನ, ಹರಿಕೃಷ್ಣ ಅವರ ಸಂಗೀತ ಸೇರಿ ಇನ್ನೊಂದು ಸೂಪರ್ ಹಿಟ್ ಹಾಡಿಗೆ ಕಾರಣವಾಗಿದ್ದಾರೆ.

  ದರ್ಶನ್ ದಾಖಲೆಯನ್ನ ಸ್ವತಃ ದರ್ಶನ್ ಬ್ರೇಕ್ ಮಾಡಿದ್ರು.!

  ಕ್ಷಣ ಕ್ಷಣಕ್ಕೂ ಹಾಡಿನ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಯಜಮಾನನ ಸಂಭ್ರಮ ಹೆಚ್ಚಾಗುತ್ತಿದೆ. ಬಹುಶಃ ಈ ಹಾಡಿನ ಮೂಲಕ ಯಜಮಾನ ಚಿತ್ರದ ಎಲ್ಲ ಹಾಡುಗಳು ಹಿಟ್ ಲಿಸ್ಟ್ ಗೆ ಸೇರಿಕೊಂಡಿದೆ. ಅಷ್ಟಕ್ಕೂ, ಯಜಮಾನ ಟೈಟಲ್ ಹಾಡಿನ ದಾಖಲೆಗಳೇನು? ಮುಂದೆ ಓದಿ....

  6 ನಿಮಿಷದಲ್ಲಿ ಒಂದು ಲಕ್ಷ

  6 ನಿಮಿಷದಲ್ಲಿ ಒಂದು ಲಕ್ಷ

  ಯಜಮಾನ ಚಿತ್ರದ ಟೈಟಲ್ ಹಾಡು ಆರು ನಿಮಿಷದಲ್ಲಿ ಒಂದು ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಇದನ್ನ ಸ್ವತಃ ಡಿ ಬೀಟ್ಸ್ ಅಧಿಕೃತವಾಗಿ ಘೋಷಿಸಿದೆ. ಇದು ಅತಿ ವೇಗವಾಗಿ ಒಂದು ಲಕ್ಷ ವೀಕ್ಷಣೆ ಪಡೆದ ಕನ್ನಡ ಹಾಡು ಎನಿಸಿಕೊಂಡಿದೆ.

  ರಿಲೀಸ್ ಆದ 7 ನಿಮಿಷದಲ್ಲಿ ದಾಖಲೆ ಬರೆದ 'ಯಜಮಾನ' ಎರಡನೇ ಹಾಡು

  20 ನಿಮಿಷದಲ್ಲಿ 2 ಲಕ್ಷ

  20 ನಿಮಿಷದಲ್ಲಿ 2 ಲಕ್ಷ

  ಮೊದಲ ಆರು ನಿಮಿಷದಲ್ಲಿ ಒಂದು ಲಕ್ಷ ವೀಕ್ಷಣೆ ಕಂಡ ಯಜಮಾನ 20 ನಿಮಿಷ ಆಗುವಷ್ಟರಲ್ಲಿ 2 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಈ ಹಿಂದೆ ಬಂದಿದ್ದ ಯಜಮಾನ ಚಿತ್ರದ ಬಸಣ್ಣಿ ಹಾಡು ಕೂಡ ಆರು ನಿಮಿಷದಲ್ಲಿ ಒಂದು ಲಕ್ಷ ವೀಕ್ಷಣ ಕಂಡಿದೆ. ಒಂದು ಮುಂಜಾನೆ ಹಾಡು ಏಳು ನಿಮಿಷದಲ್ಲಿ ಒಂದು ಲಕ್ಷ ವೀಕ್ಷಣ ಕಂಡಿತ್ತು.

  'ಯಜಮಾನ'ನ 'ನಂದಿ' ವೇಗಕ್ಕೆ ದಾಖಲೆಗಳು ಧೂಳಿಪಟ

  ಅತಿ ವೇಗವಾಗಿ 5 ಲಕ್ಷ

  ಅತಿ ವೇಗವಾಗಿ 5 ಲಕ್ಷ

  ಸದ್ಯ 6.30ರ ವೇಳೆ ಯಜಮಾನ ಟೈಟಲ್ ಹಾಡು ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಮುನ್ನಗ್ಗುತ್ತಿದೆ. ಇದನ್ನ ನೋಡಿದ್ರೆ ಅತಿ ವೇಗವಾಗಿ 5 ಲಕ್ಷ ವೀವ್ಸ್ ಪಡೆಯಬಹುದು ಎಂಬ ನಿರೀಕ್ಷೆ ಇದೆ. ಈ ಹಿಂದೆ ಬಸಣ್ಣಿ ಹಾಡು 90 ನಿಮಿಷದಲ್ಲಿ 5 ಲಕ್ಷ ವೀಕ್ಷಣೆ ಕಂಡಿತ್ತು.

  ನಾಲ್ಕನೇ ಹಾಡು ಸೂಪರ್ ಹಿಟ್

  ನಾಲ್ಕನೇ ಹಾಡು ಸೂಪರ್ ಹಿಟ್

  ಯಜಮಾನ ಚಿತ್ರದ ಶಿವನಂದಿ ಹಾಡು, ಓ ಮುಂಜಾನೆ ಹಾಡು, ಬಸಣ್ಣಿ ಹಾಡಿನ ನಂತರ ನಿಂತ ನೋಡೊ ಯಜಮಾನ ಹಾಡು ಕೂಡ ಹಿಟ್ ಲಿಸ್ಟ್ ಗೆ ಸೇರಿದೆ. ಬಹುಶಃ ಈ ಹಾಡು ಅತಿ ಹೆಚ್ಚು ವೀವ್ಸ್ ಕಾಣುವ ಎಲ್ಲ ಲಕ್ಷಣಗಳಿವೆ.

  English summary
  Challenging star darshan starrer yajamana movie title track released today. music by v harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X