For Quick Alerts
  ALLOW NOTIFICATIONS  
  For Daily Alerts

  Yash 19 : ಯಶ್ ಮುಂದಿನ ಚಿತ್ರಕ್ಕೆ ಯಶ್ ಅವರೇ ನಿರ್ಮಾಪಕರಂತೆ; ಬ್ಯಾನರ್ ಹೆಸರೇನು?

  |

  ಕನ್ನಡ ಚಿತ್ರರಂಗದಲ್ಲಿ ನಟರು ಹಾಗೂ ನಟಿಯರು ಯಶಸ್ಸು ಗಳಿಸಿದ ನಂತರ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸುವ ಪ್ರವೃತ್ತಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ರಾಜ್‌ಕುಮಾರ್ ಕಾಲದಿಂದಲೂ ಇರುವ ಈ ಪ್ರವೃತ್ತಿ ಇಂದಿಗೂ ಸಹ ದೊಡ್ಡ ಮಟ್ಟದಲ್ಲಿಯೇ ಚಾಲ್ತಿಯಲ್ಲಿದೆ. ಕಿಚ್ಚ ಸುದೀಪ್ ತಮ್ಮದೇ ಅದ ಕಿಚ್ಚ ಕ್ರಿಯೇಷನ್ಸ್ ಎಂಬ ಬ್ಯಾನರ್ ಹೊಂದಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಅವರು ಪಿಆರ್‌ಕೆ ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಯುವ ನಟ ಹಾಗೂ ನಟಿಯರಿಗೆ ಚಿತ್ರವನ್ನು ನಿರ್ಮಿಸಿದ್ದರು.

  ಇನ್ನು ನಟಿ ರಮ್ಯಾ ಕೂಡ ಇತ್ತೀಚೆಗಷ್ಟೆ ಆಪಲ್ ಬಾಕ್ಸ್ ಸ್ಟುಡಿಯೊಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿದ್ದರು. ಇತ್ತ ಸದ್ಯ ಕನ್ನಡ ಚಿತ್ರರಂಗದಲ್ಲಿ ತಮ್ಮ ಚಿತ್ರಗಳ ಮೂಲಕ ಹೊಸ ಅಲೆಯನ್ನು ಎಬ್ಬಿಸಿರುವ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕೂಡ ಚಿತ್ರ ನಿರ್ಮಾಣದ ಸ್ವಂತ ಬ್ಯಾನರ್ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಡಾಲಿ ಧನಂಜಯ್ ಕೂಡ ಡಾಲಿ ಪಿಕ್ಚರ್ಸ್ ಎಂಬ ಬ್ಯಾನರ್ ಆರಂಭಿಸಿ ಈಗಾಗಲೇ ಮೂರು ಚಿತ್ರಗಳಿಗೆ ಬಂಡವಾಳ ಸುರಿದಿದ್ದಾರೆ.

  ಈ ಸಾಲಿಗೆ ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡ ಸೇರಿಕೊಳ್ಳಲಿದ್ದಾರೆ ಎಂಬ ದೊಡ್ಡ ಸುದ್ದಿಯೊಂದು ಸದ್ಯ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಹೌದು, ಕೆಜಿಎಫ್ ಚಿತ್ರ ಸರಣಿ ಮೂಲಕ ವಿಜಯಲಕ್ಷ್ಮಿ ಹಾಗೂ ಲಕ್ಷ್ಮಿ ಎರಡನ್ನೂ ಒಲಿಸಿಕೊಂಡಿರುವ ಯಶ್ ಚಿತ್ರ ನಿರ್ಮಾಣಕ್ಕೂ ಇಳಿಯಲಿದ್ದಾರೆ, ತಮ್ಮ ಮುಂದಿನ ಚಿತ್ರಕ್ಕೆ ಈ ಬ್ಯಾನರ್ ಅಡಿಯಲ್ಲೇ ಬಂಡವಾಳವನ್ನೂ ಹೂಡಲಿದ್ದಾರೆ ಎಂಬ ಸುದ್ದಿಯೊಂದು ಸದ್ಯ ಕೇಳಿಬರುತ್ತಿದೆ.

  ಯಶ್ ಬ್ಯಾನರ್ ಹೆಸರೇನು?

  ಯಶ್ ಬ್ಯಾನರ್ ಹೆಸರೇನು?

  ಯಶ್ ತಾವು ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸುತ್ತಿರುವ ಕುರಿತಾಗಿ ಎಲ್ಲಿಯೂ ಸಹ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಕಳೆದ ಹಲವಾರು ದಿನಗಳಿಂದ ಯಶ್ ಬ್ಯಾನರ್ ಆರಂಭಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಇದೀಗ ಈ ಸುದ್ದಿಗೆ ಹೊಸದಾಗಿ ಯಶ್ ಬ್ಯಾನರ್ ಹೆಸರು ಹೀಗಿರಲಿದೆ ಎಂಬ ವಿಷಯವೂ ಸೇರಿಕೊಂಡಿದೆ. ಹೌದು, 'ಆಯ್ರಾ ಪ್ರೊಡಕ್ಷನ್ ಹೌಸ್' ಎಂಬ ಹೆಸರಿನಡಿಯಲ್ಲಿ ಯಶ್ ಚಿತ್ರ ನಿರ್ಮಾಣಕ್ಕೆ ಇಳಿಯಲಿದ್ದಾರೆ, ಇದೇ ಬ್ಯಾನರ್ ಅಡಿಯಲ್ಲಿ ಯಶ್ ಮುಂದಿನ ಚಿತ್ರ 'ಯಶ್ 19' ಮೂಡಿಬರಲಿದೆ ಎಂಬ ಸುದ್ದಿ ಸದ್ಯ ಹರಿದಾಡುತ್ತಿವೆ. ಆಯ್ರಾ ಎಂಬುದು ಯಶ್ ಹಾಗೂ ರಾಧಿಕಾ ಯಶ್ ಪುತ್ರಿಯ ಹೆಸರು.

  ರಾಧಿಕಾ ಪಂಡಿತ್ ನಿರ್ಮಾಪಕಿಯಾಗಬಹುದು

  ರಾಧಿಕಾ ಪಂಡಿತ್ ನಿರ್ಮಾಪಕಿಯಾಗಬಹುದು

  ಒಂದುವೇಳೆ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ 'ಆಯ್ರಾ ಪ್ರೊಡಕ್ಷನ್ ಹೌಸ್' ನಿಜವಾಗಿಯೂ ಆರಂಭಗೊಂಡರೆ ಯಶ್ ಪತ್ನಿ ರಾಧಿಕಾ ಯಶ್ ನಿರ್ಮಾಕಿಯಾಗುವುದು ಬಹುತೇಕ ಖಚಿತ ಎನ್ನಬಹುದು. ನಮ್ಮ ಕನ್ನಡ ನಟರು ಸ್ಥಾಪಿಸಿದ ಚಿತ್ರ ನಿರ್ಮಾಣ ಸಂಸ್ಥೆಗಳನ್ನು ಅವರ ಧರ್ಮಪತ್ನಿಯರು ನೋಡಿಕೊಳ್ಳುವ ರೂಢಿ ಇದ್ದು, ಪಾರ್ವತಮ್ಮ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಪ್ರಿಯಾ ಸುದೀಪ್ ರೀತಿಯೇ ರಾಧಿಕಾ ಯಶ್ ಸಹ ನಿರ್ಮಾಪಕಿಯಾಗಿ ಬಡ್ತಿ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

  ಇದಾದ್ರೂ ನಿಜವಾಗ್ಲಿ ಎಂದ ಯಶ್ ಫ್ಯಾನ್ಸ್

  ಇದಾದ್ರೂ ನಿಜವಾಗ್ಲಿ ಎಂದ ಯಶ್ ಫ್ಯಾನ್ಸ್

  ಇನ್ನು ಕೆಜಿಎಫ್ ಬಳಿಕ ಯಶ್ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಕುತೂಹಲ ಚಿತ್ರ ರಸಿಕರಲ್ಲಿ, ಅದರಲ್ಲಿಯೂ ಯಶ್ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಚಿತ್ರದ ಕುರಿತಾಗಿ ಈ ರೀತಿಯ ಸುದ್ದಿಗಳು ಈಗಾಗಲೇ ಹಲವಾರು ಬಾರಿ ಹರಿದಾಡಿದ್ದು, ಈ ಸುದ್ದಿಯಾದರೂ ನಿಜವಾಗಲಿ ಎಂದು ಸಿನಿ ರಸಿಕರು ಹಾಗೂ ಯಶ್ ಅಭಿಮಾನಿಗಳು ಆಶಿಸಿದ್ದಾರೆ.

  English summary
  Yash 19th movie likely to be produced by Yash himself under 'Ayra production house'. Read on
  Thursday, December 1, 2022, 12:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X