For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ರಾಮಾಚಾರಿ ಹುಟ್ಟುಹಬ್ಬಕ್ಕೆ ಬೆಳ್ಳಿ ಕಿರೀಟ, ಗದೆ ಗಿಫ್ಟ್!

  By Harshitha
  |

  ಸ್ಯಾಂಡಲ್ ವುಡ್ ಸುಲ್ತಾನ್...ರಾಕಿಂಗ್ ಸ್ಟಾರ್ ಯಶ್ ಗಿಂದು ಹುಟ್ಟುಹಬ್ಬದ ಸಂಭ್ರಮ. 30ನೇ ವಸಂತಕ್ಕೆ ಕಾಲಿಟ್ಟಿರುವ ಯಶ್, ಇವತ್ತು ತಮ್ಮ ಹೊಸಕೆರೆಹಳ್ಳಿ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತಡೆ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

  ಯಶ್ ಹುಟ್ಟುಹಬ್ಬದ ಪ್ರಯುಕ್ತ 2 ಕೆ.ಜಿ ತೂಕದ ಬೆಳ್ಳಿ ಗದೆಯನ್ನ ಉಡುಗೊರೆಯಾಗಿ ನೀಡಿದ್ದಾರೆ ನಿರ್ಮಾಪಕ ಜಯಣ್ಣ. ಇನ್ನೂ 'ಮಾರುತಿ 800' ಚಿತ್ರದ ಪ್ರೊಡ್ಯೂಸರ್ ರಮೇಶ್ ಕೂಡ ಕೋಲ್ಕತ್ತಾದಲ್ಲಿ ತಯಾರಿಸಿರುವ 1.5 ಕೆ.ಜಿ ತೂಕದ ಬೆಳ್ಳಿ ಕಿರೀಟವನ್ನ ಯಶ್ ಗೆ ಗಿಫ್ಟ್ ಮಾಡಿದ್ದಾರೆ. [ಯಶ್ ಬಗ್ಗೆ ಫೇಸ್ ಬುಕ್ ನಲ್ಲಿ ರಾಧಿಕಾ ಪಂಡಿತ್ ಹೇಳಿದ್ದೇನು?]

  ಸರ್ಪ್ರೈಸ್ ಆಗಿ ಬಂದ ಬೆಳ್ಳಿ ಕಿರೀಟ ಮತ್ತು ಗದೆ ಹಿಡಿದು ನಟ ಯಶ್ ಸಂಭ್ರಮಿಸಿದರು. ಇದೇ ವೇಳೆ ತಮ್ಮ ನಿವಾಸದ ಸಮೀಪದಲ್ಲೇ ಇರುವ ನಟಸಾರ್ವಭೌಮ ಡಾ.ರಾಜ್ ಪುತ್ಥಳಿಗೆ ಯಶ್ ಮಾಲಾರ್ಪಣೆ ಮಾಡಿದರು. [ನಟ ಯಶ್ ಹೃದಯವಂತಿಕೆ ಎಂಥದ್ದು ಅಂತೀರಾ?]

  ಇಂದು ಇಡೀ ದಿನ ಅಭಿಮಾನಿಗಳಿಗಾಗಿಯೇ ಮೀಸಲಿಟ್ಟಿರುವ ಯಶ್ ಖುಷಿ ಖುಷಿಯಾಗಿ ಮಾಧ್ಯಮಗಳ ಜೊತೆಗೂ ಮಾತಿಗಿಳಿದರು. ''ಮಾಸ್ಟರ್ ಪೀಸ್' ಯಶಸ್ವಿಯಾಗಿರುವುದರಿಂದ ಈ ವರ್ಷದ ಹುಟ್ಟುಹಬ್ಬ ಸಖತ್ ಸ್ಪೆಷಲ್'' ಎಂದರು. [ರಾಕಿಂಗ್ ಸ್ಟಾರ್ ಯಶ್ ಗೆಲುವಿನ ರಹಸ್ಯ ಮಂತ್ರ]

  'ಯಶ'ಸ್ಸಿನ ಎಣಿಯಲ್ಲಿ ಎತ್ತರೆತ್ತರಕ್ಕೆ ಏರುತ್ತಿರುವ ಯಶ್ ಪಯಣ ಹೀಗೆ ಇರಲಿ ಅನ್ನೋದು ಅಭಿಮಾನಿಗಳ ಹಾರೈಕೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಯಶ್ ಗೆ ನೀವೂ ವಿಶ್ ಮಾಡಿಬಿಡಿ....

  English summary
  Rocking Star Yash is celebrating his 30th birthday today (Jan 8th). On this occasion, Producer Ramesh gifted Silver crown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X