»   » 'ಉರ್ವಿ' ಟ್ರೈಲರ್ ಬಿಡುಗಡೆ ಮಾಡಲಿರುವ 'ಯಶ್-ರಾಧಿಕಾ' ದಂಪತಿ

'ಉರ್ವಿ' ಟ್ರೈಲರ್ ಬಿಡುಗಡೆ ಮಾಡಲಿರುವ 'ಯಶ್-ರಾಧಿಕಾ' ದಂಪತಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್, ಇಂದು (ಫೆಬ್ರವರಿ 9) ಕನ್ನಡದ ಬಹುನಿರೀಕ್ಷೆಯ 'ಉರ್ವಿ' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

ಟೀಸರ್ ಮೂಲಕ ಸೆನ್ಸೇಷ್ನಲ್ ಹುಟ್ಟುಹಾಕಿರುವ 'ಉರ್ವಿ' ಚಿತ್ರದ ಟ್ರೈಲರ್ ಇಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದ್ದು, ಯಶ್-ರಾಧಿಕಾ ದಂಪತಿ ರಿಲೀಸ್ ಮಾಡಲಿದ್ದಾರೆ.[ಇವರು 'ಲೂಸಿಯಾ' ಬೆಡಗಿ ಶ್ರುತಿ ಅಂದ್ರೆ ನೀವು ನಂಬಲೇಬೇಕು.!]

Yash And Radhika Pandit Will Released Urvi Trailer

'ಉರ್ವಿ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಸ್ಪೆನ್ಸ್ ಥ್ರಿಲ್ಲಿಂಗ್ ಚಿತ್ರವಾಗಿದೆ. ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್ ಮತ್ತು ಜಾಹ್ನವಿ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಖಳನಾಯಕನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ.

ಪ್ರದೀಪ್ ವರ್ಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ. ಸದ್ಯ, ಚಿತ್ರೀಕರಣ ಪೂರ್ತಿ ಮುಗಿಸಿರುವ 'ಉರ್ವಿ', ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆದರೆ, ಇದೇ ತಿಂಗಳಲ್ಲಿ 'ಉರ್ವಿ' ತೆರೆಮೇಲೆ ಬರಲಿದೆ.

English summary
Sandalwood Newly Couple Yash And Radhika Pandit Will Released Urvi Trailer on Today (February 9th). shruthi hariharan, shradda srinath, shwetha pandith are lead role in the Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada