For Quick Alerts
  ALLOW NOTIFICATIONS  
  For Daily Alerts

  ಶ್ರೀರಾಮುಲು ಪರ 'ಮಾಸ್ಟರ್ ಪೀಸ್' ಯಶ್ ಮತಯಾಚನೆ

  By Naveen
  |
  ಅಭಿನಯ ಚಕ್ರವರ್ತಿಗೆ ಎದುರಾಗಲಿದ್ದಾರೆ ಯಶ್ | Filmibeat Kannada

  ಕರ್ನಾಟಕ ಚುನಾವಣೆ ಪ್ರಚಾರ ಜೋರಾಗಿದೆ. ಅದರಲ್ಲಿಯೂ ಚುನಾವಣಾ ಪ್ರಚಾರಕ್ಕೆ ತಾರ ಮೆರಗು ಸಿಕ್ಕಿದೆ. ನಟ ಸುದೀಪ್ ಹಾಗೂ ಯಶ್ ಬಿಡುವಿಲ್ಲದೆ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಅಂದಹಾಗೆ, ಯಶ್ ಇದೀಗ ಶ್ರೀರಾಮುಲು ಪರವಾಗಿ ಮತಯಾಚನೆ ಮಾಡಲಿದ್ದಾರೆ.

  ಸಂಸದ ಶ್ರೀರಾಮುಲು ಈ ಬಾರಿ ಎರಡು ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ. ಬಾದಾಮಿ ಮತ್ತು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಶ್ರೀರಾಮುಲು ಅವರಿಗೆ ಈಗ ರಾಜಹುಲಿಯ ಬೆಂಬಲ ಸಹ ಸಿಕ್ಕಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಅವರ ಪರವಾಗಿ ಯಶ್ ಮತ ಕೇಳಲಿದ್ದಾರೆ.

  ಯಾವ ನಟ-ನಟಿ, ಯಾರ ಪರ ಎಲ್ಲೆಲ್ಲಿ ಪ್ರಚಾರ ಮಾಡಿದ್ರು.? ಯಾವ ನಟ-ನಟಿ, ಯಾರ ಪರ ಎಲ್ಲೆಲ್ಲಿ ಪ್ರಚಾರ ಮಾಡಿದ್ರು.?

  ಯಾವುದೇ ಪಕ್ಷಕ್ಕೆ ಸೀಮಿತವಾಗಿರದೆ ವ್ಯಕ್ತಿಗಳ ಪರವಾಗಿ ಯಶ್ ಚುನಾವಣಾ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು. ಅದೇ ರೀತಿ ಕಳೆದ ಬುದವಾರ ಮೈಸೂರಿನ ಕೃಷ್ಣರಾಜ (ಕೆ.ಆರ್ ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್ .ಎ ರಾಮದಾಸ್ ಮತ್ತು ಜೆ ಡಿ ಎಸ್ ಪಕ್ಷದ ಸಾ.ರಾ ಮಹೇಶ್ ಅವರ ಪರ ನಟ ಯಶ್ ಪ್ರಚಾರ ನಡೆಸಿದರು. ಬೃಹತ್ ಸಮಾವೇಶದಲ್ಲಿ ಯಶ್ ಪಾಲ್ಗೊಂಡು, ಈ ಇಬ್ಬರ ಪರ ಪ್ರಚಾರ ಮಾಡಿದ್ದರು.

  ಅಂದಹಾಗೆ, ಇಂದು ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಅವರ ಪರವಾಗಿ ಸಹ ಯಶ್ ಪ್ರಚಾರ ಮಾಡುತ್ತಿದ್ದಾರೆ.

  English summary
  Karnataka Elections 2018 : Kannada actor Yash campaign BJP candidate of Molakalmuru constituency Sriramulu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X