twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರದ ನಿರ್ಧಾರದಿಂದ ಚಿತ್ರರಂಗ ಬಲಿ: ರಂಗಕ್ಕಿಳಿದ ರಾಕಿ ಭಾಯ್

    |

    ಚಿತ್ರಮಂದಿರಗಳ ಮೇಲೆ ಸರ್ಕಾರ ಹೇರಿರುವ ನಿರ್ಬಂಧ ವಿರೋಧಿಸಿ ಈಗಾಗಲೇ ಹಲವಾರು ನಟ, ನಿರ್ದೇಶಕ, ನಿರ್ಮಾಪಕರುಗಳು ತಮ್ಮ-ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಯಶ್ ಸಹ ರಂಗಕ್ಕೆ ಇಳಿದಿದ್ದಾರೆ.

    ಸರ್ಕಾರದ ಹಠಾತ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಯಶ್, ಟ್ವೀಟ್‌ ಮೂಲಕ ಸರ್ಕಾರದ ಆದೇಶವನ್ನು ಖಂಡಿಸಿದ್ದಾರೆ.

    'ನಮ್ಮಲ್ಲಿ ಜಾಗೃತಿ ಮೂಡಿದೆ, ಜವಾಬ್ದಾರಿಯೂ ಇದೆ. ಹಸಿವಿಗಿಂತಲೂ ದೊಡ್ಡ ಖಾಯಿಲೆ ಇಲ್ಲ. ನಿರ್ಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೆ ಹೊರತು ಮುಳುವಾಗಬಾರದು. ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶ ಇದೆ. ಚಿತ್ರರಂಗಕ್ಕೆ ಯಾಕಿಲ್ಲ? ಸಚನೆ ಕೊಡದೆ ಮಾಡಿರುವ ಈ ನಿರ್ಬಂಧನೆಗಳಿಂದ ಚಿತ್ರರಂಗ ಬಲಿ' ಎಂದಿದ್ದಾರೆ ನಟ ಯಶ್.

    Yash Condemn Government Order Restricting Theatres

    ಯಶ್ ಮಾಡಿರುವ ಈ ಟ್ವೀಟ್‌ ಅನ್ನು ಪುನೀತ್ ರಾಜ್‌ಕುಮಾರ್, 'ಯುವರತ್ನ' ನಿರ್ದೇಶಕ ಸಂತೋಶ್ ಆನಂದ್‌ರಾಮ್, ಹೊಂಬಾಳೆ ಫಿಲಮ್ಸ್ ಜೊತೆಗೆ ಸಿಎಂ ಯಡಿಯೂರಪ್ಪ ಅವರಿಗೂ ಟ್ಯಾಗ್ ಮಾಡಿದ್ದಾರೆ ಯಶ್.

    ಯಶ್ ಅವರ 'ಕೆಜಿಎಫ್ 2' ಸಹ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ. 'ಯುವರತ್ನ' ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಮ್ಸ್ ಅವರೇ ಆ ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಪುನೀತ್ ಹಾಗೂ ಯಶ್ ಅವರು ಆಪ್ತ ಗೆಳೆಯರೂ ಸಹ ಹಾಗಾಗಿ ಸಂಕಷ್ಟಕ್ಕೆ ಸಿಲುಕಿರುವ ಪುನೀತ್ ಅವರ ಸಿನಿಮಾದ ನೆರವಿಗೆ ಬಂದಿದ್ದಾರೆ ನಟ ಯಶ್.

    Recommended Video

    ಯುವ ರತ್ನ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು? | Filmibeat Kannada

    ಈಗಾಗಲೇ ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ಸ್ವತಃ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಸುದೀಪ್ ಹಲವಾರು ನಿರ್ಮಾಪಕರು ಸರ್ಕಾರದ ದಿಢೀರ್ ಕ್ರಮವನ್ನು ಪ್ರಶ್ನಿಸಿದ್ದಾರೆ.

    English summary
    Actor Yash condemn state government order to restricting theaters.
    Saturday, April 3, 2021, 19:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X