ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ: ಅಭಿಮಾನಿ ಆತ್ಮಹತ್ಯೆಗೆ ಯಶ್ ಪ್ರತಿಕ್ರಿಯೆ
ತನ್ನ ಅಂತ್ಯಕ್ರಿಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಕಿಂಗ್ ಸ್ಟಾರ್ ಯಶ್ ಬರಬೇಕು ಎಂದು ಡೆಟ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಅಭಿಮಾನಿ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ ಎಂದು ಯಶ್ ಹೇಳಿದ್ದಾರೆ.
Recommended Video
ಮಂಡ್ಯ ಜಿಲ್ಲೆಯ ಕೆರೆಗೋಡು ಹೊಬಳಿಯ ಕೋಡಿದೊಡ್ಡಿ ಗ್ರಾಮದ ರಾಮಕೃಷ್ಣ ಎನ್ನುವ ಯುವಕ ತಾನು ಯಶ್ ಅವರ ಅಭಿಮಾನಿ, ತನ್ನ ಅಂತ್ಯಕ್ರಿಯೆಯಲ್ಲಿ ಯಶ್ ಭಾಗಿಯಾಗಬೇಕು ಎಂದು ಡೆತ್ ನೋಟ್ ಬರೆದು ಈ ಆಸೆ ಈಡೇರಿಸುವಂತೆ ಮನವಿಕೊಂಡಿದ್ದಾನೆ. ಅಭಿಮಾನಿಯ ಸಾವಿನ ಬಗ್ಗೆ ಯಶ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
'ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು.. ಜೀವನ.. ಹೆಮ್ಮೆ.. ಆದರೆ ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆ ಪಡಲು ಸಾಧ್ಯವೇ. ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ. ಕೋಡಿ ದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಓಂ ಶಾಂತಿ' ಎಂದು ಹೇಳಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಂಡ್ಯ ಜಿಲ್ಲೆ ಕೋಡಿದೊಡ್ಡಿ ಗ್ರಾಮಕ್ಕೆ ತೆರಳುತ್ತಿದ್ದು, ಯುವಕನ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.
ಡೆತ್ ನೋಟ್ ನಲ್ಲಿ ರಾಮಕೃಷ್ಣ, 'ನನ್ನನ್ನು ಎಲ್ಲರೂ ಕ್ಷಮಿಸಿ ಎಂದು ಬರೆದು, ತಂದೆ-ತಾಯಿಗೆ ತಕ್ಕ ಮಗನಾಗಿಲ್ಲ, ಅಣ್ಣನಿಗೆ ತಕ್ಕ ತಮ್ಮನಾಗಲಿಲ್ಲ, ಸ್ನೇಹಿತರಿಗೆ ಒಳ್ಳೆಯ ಸ್ನೇಹಿತರಾಗಿಲ್ಲ, ಹುಡುಗಿಗೆ ಒಳ್ಳೆ ಹುಡುಗನಾಗಿಲ್ಲ ಎಂದು ಬರೆದಿದ್ದಾರೆ. ಜೊತೆಗೆ ತನ್ನ ಕೊನೆಯ ಎರಡು ಆಸೆಯನ್ನು ಈಡೇರಿಸುವಂತೆ ಹೇಳಿ ಸಿದ್ದರಾಮಯ್ಯ ಮತ್ತು ಯಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಂಡಿದ್ದಾನೆ.


Click it and Unblock the Notifications











