For Quick Alerts
  ALLOW NOTIFICATIONS  
  For Daily Alerts

  ಐಸ್ ಕ್ಯಾಂಡಿ ತಿಂದು ಅಮ್ಮನಿಗೆ ಕೆಲಸ ಕೊಟ್ಟ ಐರಾ ಯಶ್

  |

  ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ವೀಟ್ ಆಗಿರುತ್ತಾರೆ. ಆಗಾಗ ಮದ್ದು ಮಗಳು ಐರಾ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ. ಐರಾ ಪ್ರತಿಯೊಂದು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಮುದ್ದು ಕಂದನಿಗೆ ಅಭಿಮಾನಿಗಳಿಂದ ಲೈಕ್ಸ್ ಗಳ ಸುರಿಮಳೆಯೇ ಹರಿದುಬರುತ್ತಿವೆ.

  ಸದ್ಯ ರಾಧಿಕಾ ಮಗಳ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ಐಸ್ ಕ್ಯಾಂಡಿ ತಿನ್ನುತ್ತಿರುವ ಐರಾ ಫೋಟೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ರಾಧಿಕಾ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ ಮಾಡಿ ಕೊಟ್ಟಿದ್ದಾರೆ. ಮಗಳು ಐಸ್ ಕ್ಯಾಂಡಿ ಸಿಕ್ಕ ಖುಷಿಯಲ್ಲಿ ಮನೆತುಂಬ ಓಡಾಡಿಕೊಂಡು ತಿಂದಿದ್ದಾಳೆ.

  ಐಸ್ ತಿಂದು ಅಮ್ಮನಿಗೆ ಕೆಲಸ ಕೊಟ್ಟಿರುವ ಮಗಳ ಫೋಟೋವನ್ನು ಶೇರ್ ಮಾಡಿ ರಾಧಿಕಾ "ಬೇಸಿಗೆಯಲ್ಲಿ ನಾವು ಹೇಗೆ ಕಾಲಕಳೆಯುತ್ತಿದ್ದೇವೆ ನೋಡಿ. ಅಮ್ಮನೊಂದಿಗೆ ಕಲ್ಲಂಗಡಿ ಐಸ್ ಕ್ಯಾಂಡಿ ತಿನ್ನುತ್ತಿದ್ದಾಳೆ. ಐರಾ ಐಸ್ ಕ್ಯಾಂಡಿ ತಿಂದ ನಂತರ ಸಂಪೂರ್ಣ ಮನೆಯನ್ನು ಸ್ವಚ್ಛ ಮಾಡಬೇಕಾಯಿತು" ಎಂದು ಬರೆದುಕೊಂಡಿದ್ದಾರೆ.

  ಇತ್ತೀಚಿಗೆ ಐರಾ ಪ್ರಧಾನಿ ಮೋದಿ ಕರೆ ನೀಡಿದ್ದ ದೀಪ ಬೆಳಗುವ ಅಭಿಯಾನದಲ್ಲಿ ಭಾಗಿಯಾಗಿ ದೀಪ ಬೆಳಗಿ ಎಲ್ಲರ ಗಮನ ಸೆಳೆದಿದ್ದರು. ಜೊತೆಗೆ ಈ ಹಿಂದೆ ಜನತ ಕರ್ಫ್ಯೂ ವೇಳೆಯೂ ಚಪ್ಪಾಳೆ ಹೊಡೆದಿರುವ ವಿಡಿಯೋ ಸಹ ವೈರಲ್ ಆಗಿತ್ತು. ಐರಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದಾರೆ.

  English summary
  Yash daughter Ayra eating her mom made Ice Candy. After Radhika clean the floor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X