For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಕೋಟ್ಯಾಧಿಪತಿ ಆಂಕರಿಂಗ್ ಬಗ್ಗೆ ಯಶ್ ಮಾತು

  By Pavithra
  |

  ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಕೋಟ್ಯಾಧಿಪತಿ ಶೋವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡ್ತಿದ್ರು. ನಂತರ ಅಪ್ಪು ಸಿನಿಮಾಗಳಲ್ಲಿ ಬ್ಯುಸಿ ಆದ್ರು. ಇದೇ ಕಾರಣಕ್ಕೆ ಮತ್ತೆ ಕೋಟ್ಯಾಧಿಪತಿ ಆರಂಭ ಆಗಲೇ ಇಲ್ಲ.

  ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆಯನ್ನು ಯಶ್ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಕಾರ್ಯಕ್ರಮ ಮಾತ್ರ ಶುರು ಶುರುವಾಗಲಿಲ್ಲ.. ಆದರೆ ಕೋಟ್ಯಾಧಿಪತಿ ವಿಚಾರವಾಗಿ ಯಶ್ ನೇರವಾಗಿ ಮಾತನಾಡಿದ್ದಾರೆ. ನಿನ್ನೆ ಫೇಸ್ ಬುಕ್ ಲೈವ್ ಬಂದು ಮಾತನಾಡಿದ ರಾಕಿಂಗ್ ಸ್ಟಾರ್ ನನಗೆ ಆಂಕರಿಂಗ್ ಇಷ್ಟ ಇಲ್ಲ ಎಂದಿದ್ದಾರೆ.

  'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಸಿಕ್ಕ ಹೊಸ ಸಾರಥಿ ಇವರು!'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಸಿಕ್ಕ ಹೊಸ ಸಾರಥಿ ಇವರು!

  ಫೇಸ್ ಬುಕ್ ಲೈವ್ ನಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮ ನೀವು ನಿರೂಪಣೆ ಮಾಡುವುದಕ್ಕೆ ಇಷ್ಟ ಇದ್ಯಾ? ಎನ್ನುವ ಪ್ರಶ್ನೆಗೆ ಯಶ್ ಆಂಕರಿಂಗ್ ಕಡೆ ನಾನು ಗಮನ ಕೊಡುತ್ತಿಲ್ಲ, ನನಗೆ ಇಷ್ಟ ಇಲ್ಲ. ಈಗಾಗಲೇ ಸಿನಿಮಾ ಬಿಡುಗಡೆ ಆಗದೆ ವರ್ಷ ಕಳೆದಿದೆ. ಮೂರ್ನಾಲ್ಕು ಸ್ಕ್ರೀಪ್ಟ್ ಗಳು ರೆಡಿ ಮಾಡಿಕೊಂಡಿದ್ದೇವೆ, ಹಾಗಾಗಿ ಆಂಕರ್ ಮಾಡುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.

  ಕೋಟ್ಯಾಧಿಪತಿ ಕಾರ್ಯಕ್ರಮ ಸಾಕಷ್ಟು ಜನರ ಮನಸ್ಸು ಗೆದ್ದಿದೆ. ಜನರು ಕಾರ್ಯಕ್ರಮದಲ್ಲಿ ಭಾಗಿ ಆಗಲು ಮತ್ತು ನೋಡಲು ಇಷ್ಟ ಪಡುತ್ತಾರೆ. ಯಶ್ ಈ ಆಫರ್ ನಿರಾಕರಿಸಿದ ನಂತರ ಸ್ಟಾರ್ ಸುವರ್ಣ ವಾಹಿನಿಯವರು ರಮೇಶ್ ಅರವಿಂದ್ ಅವರನ್ನು ಕಾರ್ಯಕ್ರಮಕ್ಕೆ ಕರೆ ತರುವ ಯೋಜನೆಯಲ್ಲಿದ್ದಾರಂತೆ.

  English summary
  Kannada actor Rocking star Yash has expressed his views on the kannadada kotyadhipathi program. Yash said i am busy with movie shooting, I am not interested in the Anchoring.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X