For Quick Alerts
  ALLOW NOTIFICATIONS  
  For Daily Alerts

  Yash 19: ಮುಂದಿನ ಚಿತ್ರದ ಅಪ್‌ಡೇಟ್ ಸಿಗದೇ ಬೇಸತ್ತು ನೇರವಾಗಿ ಯಶ್‌ಗೆ ಪತ್ರ ಬರೆದ ಅಭಿಮಾನಿಗಳು!

  |

  ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಇಡೀ ಭಾರತ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಯಶ್ ಮುಂದೆ ಯಾವ ಚಿತ್ರದಲ್ಲಿ ಅಭಿನಯಿಸಬಹುದು ಎಂಬ ಕುತೂಹಲ ಹಾಗೂ ಪ್ರಶ್ನೆ ಸಿನಿ ರಸಿಕರಲ್ಲಿ ಮೂಡಿದೆ. ಹೌದು, ಯಶ್ ಕೆಜಿಎಫ್ ಚಿತ್ರ ಸರಣಿ ಮೂಲಕ ಸಿಕ್ಕಿರುವ ಯಶಸ್ಸು ಹಾಗೂ ಲೆವೆಲ್‌ಗೆ ತಕ್ಕನಾದ ಚಿತ್ರಕಥೆಯನ್ನು ಆರಿಸಿಕೊಳ್ಳಬೇಕಾಗಿರುವುದರಿಂದ ತುಂಬಾ ಜಾಗೂರಕರಾಗಿ ಮುಂದಿನ ಚಿತ್ರವನ್ನು ಆರಿಸಬೇಕಿದೆ.

  ಇನ್ನು ಯಶ್ ತಮ್ಮ ಮುಂದಿನ ಚಿತ್ರವನ್ನು ತಮಿಳು ನಿರ್ದೇಶಕರ ಜತೆ ಮಾಡಲಿದ್ದಾರೆ, ಕನ್ನಡದ ಮಫ್ತಿ ನಿರ್ದೇಶಕ ನರ್ತನ್ ಜತೆ ಮಾಡಲಿದ್ದಾರೆ ಎಂಬ ಹಲವಾರು ಸುದ್ದಿಗಳು ಹರಿದಾಡಿದವು. ಆದರೆ ಅಧಿಕೃತವಾಗಿ ಯಾವ ಸುದ್ದಿಯೂ ಹೊರಬರಲೇ ಇಲ್ಲ. ಮುಂಬರುವ ಏಪ್ರಿಲ್ ತಿಂಗಳು ಬಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಕಂಡು ವರ್ಷ ಕಳೆಯಲಿದ್ದು, ಇನ್ನೂ ಸಹ ಯಶ್ ತಮ್ಮ ಮುಂದಿನ ಚಿತ್ರ ಯಾವುದೆಂದು ಬಿಟ್ಟುಕೊಟ್ಟಿಲ್ಲ.

  ಹುಟ್ಟುಹಬ್ಬದಂದು ಮುಂದಿನ ಚಿತ್ರದ ಆಯ್ಕೆಯಲ್ಲಿ ತೊಡಗಿಕೊಂಡಿದ್ದೇನೆ, ಅದರ ಅಪ್‌ಡೇಟ್‌ನೊಂದಿಗೆ ನಿಮಗೆ ಸಿಗಲಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದ ಯಶ್ ಆದಷ್ಟು ಬೇಗನೇ ಮುಂದಿನ ಚಿತ್ರದ ಅಪ್‌ಡೇಟ್ ನೀಡುವುದಾಗಿ ತಿಳಿಸಿದ್ದರು. ಹೀಗೆ ಹುಟ್ಟುಹಬ್ಬದ ದಿನದಂದು ಯಶ್ ಅಭಿನಯದ ಮುಂದಿನ ಚಿತ್ರದ ಮಾಹಿತಿ ಸಿಗಲಿದೆ ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು.


  ಇನ್ನು ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಚಿತ್ರ ಯಾವಾಗ ಎಂದು ಪ್ರಶ್ನೆ ಕೇಳಿ ಕೇಳಿ ಸಾಕಾಗಿ ಯಶ್‌ಗೆ ನೇರವಾಗಿ ಪತ್ರವೊಂದನ್ನು ಬರೆದಿದ್ದಾರೆ. ಅಭಿಮಾನಿಗಳಿಗೆ ಯಶ್ 19 ಚಿತ್ರದ ಮಾಹಿತಿಯನ್ನು ಬೇಗನೆ ಹಂಚಿಕೊಳ್ಳಿ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಯಶ್ ಅಭಿಮಾನಿಗಳು ಬರೆದಿರುವ ಈ ಬಹಿರಂಗ ಪತ್ರದಿಂದಾದರೂ ಯಶ್ ತಮ್ಮ ಮುಂದಿನ ಚಿತ್ರವನ್ನು ಘೋಷಿಸ್ತಾರಾ ಅಥವಾ ಈ ಕುರಿತು ಸಣ್ಣ ಮಾಹಿತಿಯನ್ನೇನಾದರೂ ಹಂಚಿಕೊಳ್ತಾರಾ ಎಂಬುದನ್ನು ಕಾದುನೋಡಬೇಕಿದೆ.

  ಯಶ್ ಅಭಿಮಾನಿಗಳು ಯಶ್‌ಗೆ ಬರೆದಿರುವ ಪತ್ರ ಹೀಗಿದೆ:

  ಇವರಿಗೆ,

  ಯಶ್,

  ನಟ,

  ಭಾರತೀಯ ಚಿತ್ರರಂಗ

  ವಿಷಯ: ಯಶ್‌ಬಾಸ್‌ ರವರ ಮುಂದಿನ ಚಿತ್ರದ ಅಪಡೇಟ್‌ ಬಗ್ಗೆ

  ಮೊದಲಿಗೆ ವಿಶ್ವದ ದೃಷ್ಟಿಯನ್ನು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಮಾಡಿದ

  ನಮ್ಮ ಪ್ರೀತಿಯ ಆರಾಧ್ಯ ದೈವ ರಾಕಿಂಗ್‌ ಸ್ಟಾರ್‌ ಯಶ್‌ ಬಾಸ್‌ ರವರಿಗೆ ಪ್ರತ್ಪೂರ್ವಕ ಧನ್ಯವಾದಗಳು.

  ಮೇಲಿನ ವಿಷಯಕ್ಕೆ ಸ೦ಬ೦ಧಿಸಿದಂತೆ ಎಲ್ಲರಿಗೂ ತಿಳಿದಂತೆ ಯಶ್ ಬಾಸ್‌ ರವರಿಗೆ ಜಗತ್ತಿನಾದ್ಯಂತ ಅಪಾರ

  ಅಭಿಮಾನಿಗಳು ಇದ್ದು ಎಲ್ಲರೂ ತಮ್ಮ ನೆಚ್ಚಿನ ನಟನನ್ನು ಮತ್ತೆ ತೆರೆಯ ಮೇಲೆ ನೋಡಲು

  ಆಶಿಸುತ್ತಿರುತ್ತಾರೆ, ಕೆ.ಜಿ.ಎಫ್‌ ಭಾಗ 2 ತೆರೆಕಂಡು ಸುಮಾರು 282 ದಿನಗಳು ಕಳೆದಿದ್ದು ಮುಂದಿನ ಚಿತ್ರದ

  ಬಗ್ಗೆ ಸುಳಿವು ಕೂಡ ಸಿಗದೇ ಇರುವುದು ಬೇಸರದ ಸಂಗತಿಯಾಗಿದೆ , ಈಗಾಗಲೆ ತಿಳಿದಿರುವ ಹಾಗೆ ನಿಮ್ಮ

  ಯೋಜನೆ, ಆಲೋಚನೆ ಹಾಗೂ ತಯಾರಿಯು ನಮ್ಮ ಊಹೆಗೂ ದೊಡ್ಡದಾಗಿಯೇ ಇರುತ್ತದೆ ಆದರೂ

  ಅಭಿಮಾನಿಗಳ ತವಕ ಹಾಗೂ ಉತ್ಸಾಹವನ್ನು ಮನದಲ್ಲಿಟ್ಟುಕೊ೦ಡು /ಯಶ್‌19 ಚಿತ್ರದ ಘೋಷಣೆ ಹಾಗೂ

  ಶೀರ್ಷಿಕೆಯನ್ನು ಆದಷ್ಟು ಬೇಗ ಜಗತ್ತಿನ ಮುಂದೆ ತರಬೇಕೆಂದು ಈ ಪತ್ರದ ಮೂಲಕ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ .

  ವಂದನೆಗಳೊಂದಿಗೆ

  ಇಂತಿ
  ತಮ್ಮ ಅಭಿಮಾನಿಗಳು

  English summary
  Yash fans are asking for Yash 19 update by writting open letter to Yash. Read on
  Saturday, January 21, 2023, 17:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X