»   » ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದ ಯಶ್ 'ಗಜಕೇಸರಿ'

ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದ ಯಶ್ 'ಗಜಕೇಸರಿ'

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಗಜಕೇಸರಿ' ಚಿತ್ರ ರಾಜ್ಯದಾದ್ಯಂತ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ಛಾಯಾಗ್ರಾಹಕ ಕೃಷ್ಣ ಅವರ ಚೊಚ್ಚಲ ನಿರ್ದೇಶನದ ಬಗ್ಗೆ ವಿಮರ್ಶಕರ ಮೆಚ್ಚುಗೆ ಮಾತುಗಳು ಚಿತ್ರಕ್ಕೆ ಜನ ಹರಿದುಬರುವಂತೆ ಮಾಡುವಲ್ಲ ಸಹಕಾರಿಯಾದವು. ಅತ್ಯುತ್ತಮ ಗುಣಮಟ್ಟ ಹಾಗೂ ನಿರೂಪಣೆಗೆ ಪ್ರೇಕ್ಷಕರು ಮಾರು ಹೋಗಿದ್ದಾರೆ. [ಗಜಕೇಸರಿ ಚಿತ್ರವಿಮರ್ಶೆ]

ಮೊದಲ ವಾರದಲ್ಲೇ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ ಗಜಕೇಸರಿ. ಯಶ್ ಅವರ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಗಜಕೇಸರಿ ಚಿತ್ರ ಅಳಿಸಿಹಾಕಿದೆ. ಮೊದಲ ವಾರದಲ್ಲೇ ರು.6 ಕೋಟಿ ಕಲೆಕ್ಷನ್ ಮಾಡಿದೆ ಎನ್ನುತ್ತವೆ ಮೂಲಗಳು. ಪರಭಾಷಾ ಚಿತ್ರಗಳಾದ 'ಕೊಚಡಿಯಾನ್' ಹಾಗೂ 'ಮನಂ' ಚಿತ್ರಗಳ ಮುಂದೆ 'ಗಜಕೇಸರಿ' ತನ್ನದೇ ಆದಂತಹ ಗತ್ತು ಪ್ರದರ್ಶಿಸಿದೆ.

ಪರಭಾಷಾ ಚಿತ್ರಗಳ ದಾಳಿ ಎದುರಿಸಿದ ಗಜಕೇಸರಿ

ವಿಶೇಷವಾಗಿ ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ದಾಳಿಯನ್ನು 'ಗಜಕೇಸರಿ' ಸಮರ್ಥವಾಗಿ ಎದುರಿಸಿದೆ. ಬಾಕ್ಸ್ ಆಫೀಸಲ್ಲಿ 'ಗಜಕೇಸರಿ' ಮುನ್ನುಗ್ಗುತ್ತಿರುವ ಪರಿಯನ್ನು ನೋಡಿದರೆ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಹೊಸ ಸುಲ್ತಾನ್ ಆಗಿ ಯಶ್ ಅವತರಿಸಿದ್ದಾರೆ.

ಶೀಘ್ರದಲ್ಲೇ ರು.10 ಕೋಟಿ ಕಲೆಕ್ಷನ್ ಕ್ಲಬ್

'ಗಜಕೇಸರಿ' ಚಿತ್ರ ಮೊದಲ ವಾರದಲ್ಲಿ ರು.6 ಕೋಟಿ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೇ ರು.10 ಕೋಟಿ ಕಲೆಕ್ಷನ್ ಕ್ಲಬ್ ಸೇರುವ ಎಲ್ಲಾ ಸೂಚನೆಗಳನ್ನೂ ಕೊಟ್ಟಿದೆ.

ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಚಿತ್ರ

'ಗಜಕೇಸರಿ' ಚಿತ್ರಕ್ಕೆ ವಿಮರ್ಶಕರಿಂದ ವ್ಯಕ್ತವಾದ ಮೆಚ್ಚುಗೆ ಮಾತುಗಳೇಪ್ರೇಕ್ಷಕರನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಯಶಸ್ವಿಯಾಗಿವೆ.

ಕೊಚಡಿಯಾನ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಸೂಪರ್ ಸ್ಟಾರ್ ರಜನಿಕಾಂತ್ ಅವರ ತ್ರಿಡಿ ಚಿತ್ರ 'ಕೊಚಡಿಯಾನ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇನ್ನೊಂದು ವಿಧದಲ್ಲಿ ಗಜಕೇಸರಿಗೆ ಲಾಭವಾಯಿತು.

ಗಜಕೇಸರಿಗೆ ಸದ್ಯಕ್ಕೆ ಯಾವ ಸ್ಪರ್ಧೆಯೂ ಇಲ್ಲ

ಗಜಕೇಸರಿ ಚಿತ್ರಕ್ಕೆ ಸದ್ಯಕ್ಕೆ ಯಾವ ಚಿತ್ರವೂ ಸ್ಪರ್ಧೆ ಒಡ್ಡುತ್ತಿಲ್ಲ. ಇದೂ ಒಂದು ವಿಧದಲ್ಲಿ ನಿರ್ಮಾಪಕರಾದ ಜಯಣ್ಣ - ಭೋಗೇಂದ್ರ ಅವರಿಗೆ ಸಖತ್ ಲಾಭವಾಗಿ ಪರಿಣಮಿಸಿದೆ.

English summary
Gajakesari, which is the first combination of Yash and Golden Queen Amoolya has done a wonderful business at Box Office on the first weekend. If sources from regional portal Andhra Box Office are to be believed, then Gajakesari has approximately grossed Rs 6 crore on its first weekend at the Box Office.
Please Wait while comments are loading...