twitter
    For Quick Alerts
    ALLOW NOTIFICATIONS  
    For Daily Alerts

    ಮನಮೋಹಕ ಫ್ಯಾಷನ್‌ ಶೋನಲ್ಲಿ ಮಿಂಚಿದ ಯುವಕ-ಯುವತಿಯರು

    |

    ಯಶ್ ಇಂಟರ್ನ್ಯಾಷನಲ್ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ರೂಪದರ್ಶಿಗಳು ಮನಮೋಹಕ ರಾಂಪ್ ವಾಕ್ ನಡೆಸಿದರು. ಈ ಫ್ಯಾಷನ್‌ ಶೋನಲ್ಲಿ ಮಿಸ್ ಟೀನ್ ಹಾಗೂ ಮಿಸ್ಟರ್ ಟೀನ್ ವಿಭಾಗದಲ್ಲಿ ಮಂಜು ಭಾರ್ಗವಿ, ಯಶು ಬಲ್ಲಾಳ್ ಗೆದ್ದರು.

    ಇತ್ತೀಚೆಗೆ ನಡೆದ ಮಿಸೆಸ್ ಇಂಡಿಯಾ ಐಕಾನ್ ಫ್ಯಾಷನ್ ಶೋ ನಲ್ಲಿ ಹಲವು ಸ್ಪರ್ಧಿಗಳು ಭಾಗವಹಿಸಿ ಮಿಂಚಿದರು. ಸುಷ್ಮಿತಾಗೆ ಮಿಸೆಸ್ ಇಂಡಿಯಾ ಐಕಾನ್ ಪ್ರಶಸ್ತಿ ದೊರೆತರೆ, 2022 ರ ಪ್ರಶಸ್ತಿ ಸುಷ್ಮಿತಾ ಅವರ ಮುಡಿ ಸೇರಿತು.

    ಮದುವೆಯಾದವರ ವಿಭಾಗದಲ್ಲಿ ಮಿಸ್ಟರ್ ಹಾಗೂ ಮಿಸೆಸ್ ವಿಭಾಗದ ಸ್ಪರ್ಧೆಗಳು ನಡೆದವು. ಮಿಸ್ಟರ್ ವಿಭಾಗದಲ್ಲಿ ಅರುಣ್ ಡಿ ಶೆಟ್ ಪ್ರಶಸ್ತಿ ಗೆದ್ದರು. 'ಬೆಲ್ಲಾ ಚಾವ್' ರೆಸಾರ್ಟ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಲಿಟಲ್ ಪ್ರಿನ್ಸೆಸ್, ಪ್ರಿನ್ಸೆಸ್, ಟೀನ್ ವಿಭಾಗದಲ್ಲೂ ಸ್ಪರ್ಧಿಗಳು ರಾಂಪ್ ಮೇಲೆ ಹೆಜ್ಜೆ ಹಾಕಿದರು.

    ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಗಣಿಶ್ಕ್, ವಿಂದ್ಯಾ ವಿಕಾಸಿನಿ ಪ್ರಶಸ್ತಿ ಗೆದ್ದರು. ಕಿಡ್ಸ್‌ನ ಇನ್ನೊಂದು ವಿಭಾಗದಲ್ಲಿ ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಗುರುಪ್ರೀತ್ ಬಡ್ಡಿ, ವೈಷ್ಣವಿ ಸಂತೋಷ್ ಗೆದ್ದರು. ಮಿಸ್ಟರ್ ಹಾಗೂ ಮಿಸ್ ವಿಭಾಗದಲ್ಲಿ ವಿಲ್ಸನ್ ಜ್ಯಾಕ್, ಜಾಗೃತಿ ಪ್ರಶಸ್ತಿ ಗೆದ್ದರು.

    ಚೆನ್ನೈ, ವಿಜಯವಾಡದಲ್ಲಿ ನಡೆಯಲಿದೆ ಸ್ಪರ್ಧೆ

    ಚೆನ್ನೈ, ವಿಜಯವಾಡದಲ್ಲಿ ನಡೆಯಲಿದೆ ಸ್ಪರ್ಧೆ

    ಬಣ್ಣ ಬಣ್ಣದ ವೇದಿಕೆ, ಅದಕ್ಕೆ ತಕ್ಕ ಸಂಗೀತ, ಸ್ಪರ್ಧಿಗಳು ಲಯವಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ರಶ್ಮಿ ಹೆಗ್ಡೆ, ಶವ್ಯ ರಿಷಿಕಾ, ಗೀಶನ್, ಸೀಮಾ ನಾಯ್ಡು ಸ್ಪರ್ದೆಯಲ್ಲಿ ತೀರ್ಪುಗಾರರು ಆಗಿ ಭಾಗವಹಿಸಿದ್ದರು. ಸಂಸ್ಥಾಪಕ ಸಿಇಓ ಯಶ್, ಸಿಇಓ ರಾಕಿ ಕೂಡ ಕಾರ್ಯಕ್ರಮದಲ್ಲಿ ಇದ್ದರು. ಮಕ್ಕಳು ಆತ್ಮ ವಿಶ್ವಾಸದಿಂದ ರಾಂಪ್ ಮೇಲೆ ಹೆಜ್ಜೆ ಹಾಕಿದಾಗ ಪ್ರೇಕ್ಷಕರು ಹೆಮ್ಮೆಯಿಂದ ರಾಂಪ್ ವಾಕ್ ನೋಡಿ ಸಂಭ್ರಮಿಸಿದರು. ಇಲ್ಲಿ ಗೆದ್ದ ಸೌಂದರ್ಯ ಸ್ಪರ್ಧಿಗಳು ವಿಜಯವಾಡ ಮತ್ತು ಚೆನ್ನೈ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ.

    ಹಲವು ವಿಭಾಗಗಳಲ್ಲಿ ಸ್ಪರ್ಧೆ

    ಹಲವು ವಿಭಾಗಗಳಲ್ಲಿ ಸ್ಪರ್ಧೆ

    ನ್ಯಾಶನಲ್, ಬ್ಯುಸಿನೆಸ್ ಹಾಗೂ ವೆಸ್ಟರ್ನ್ ಸುತ್ತುಗಳು ನಡೆದವು. ಸಾಂಪ್ರದಾಯಿಕ ಸುತ್ತಿನಲ್ಲಿ ದೇಶದ ಸಂಸ್ಕೃತಿ ಬಿಂಬಿಸುವ ಉಡುಗೆಗಳನ್ನು ಸ್ಪರ್ಧಿಗಳು ತೊಟ್ಟಿದ್ದರು. ನ್ಯಾಶನಲ್ ಯೂತ್ ಜೆಮ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಕೊಡಲಾಯಿತು. ಫ್ಯಾಷನ್, ಸಿನೆಮಾ, ನೃತ್ಯ, ಸಾಮಾಜಿಕ ಸೇವೆ ಸೇರಿದಂತೆ ಹತ್ತು ಹಲವು ವಿಭಾಗದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಯಿತು.

    ಕಲಾವಿದರು ಹಾಜರಿದ್ದರು

    ಕಲಾವಿದರು ಹಾಜರಿದ್ದರು

    ಮಹಾಭಾರತದ ಪವನ್, ಸುಶ್ಮಿತಾ ಸೇರಿದಂತೆ ಹಲವು ಕಲಾವಿದರು ಸಾಕ್ಷಿಯಾದರು. ಗಾಂಧಿ ಜಯಂತಿ ಕುರಿತು ಒಂದು ನೃತ್ಯ ಕೂಡ ಈ ಕಾರ್ಯಕ್ರಮದ ಮೆರಗು ಹೆಚ್ಚಿಸಿತು. ಮಿಸ್ ವಿಭಾಗದಲ್ಲಿ 30, ಮಿಸ್ಟರ್ ವಿಭಾಗದಲ್ಲಿ 30, ಮದುವೆಯಾದವರ ವಿಭಾಗದಲ್ಲಿ 20, ಮಿಸ್ಟರ್ ಟೀನ್ ವಿಭಾಗದಲ್ಲಿ 27, ಮಿಸ್ ಟೀನ್ ವಿಭಾಗದಲ್ಲಿ 27, ಮಕ್ಕಳ ಪ್ರಿನ್ಸ್ ವಿಭಾಗದಲ್ಲಿ 20, ಪ್ರಿನ್ಸೆಸ್ ವಿಭಾಗದಲ್ಲಿ 20 ಸ್ಪರ್ಧಿಗಳು ಭಾಗವಹಿಸಿದ್ದರು.

    English summary
    Yash International organized fashion show for different age groups and social standard people. Here is the winners list.
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X