ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್
Recommended Video

ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಬೇರೆ ಇಂಡಸ್ಟ್ರಿಯವರ ನೆಚ್ಚಿನ ನಟರ ಪೈಕಿ ಯಶ್ ಕೂಡ ಒಬ್ಬರಾಗಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಪರಭಾಷಿಗರನ್ನ ಆಕರ್ಷಿಸಿರುವ ಯಶ್, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಟಾರ್ ಗಿರಿ ಪಡೆಯುವುದ್ರಲ್ಲಿ ಯಾವುದೇ ಅನುಮಾನವಿಲ್ಲ.
ಕೆಜಿಎಫ್ ಚಿತ್ರದ ಯಶಸ್ಸಿನ ಪ್ರತಿಫಲ, ತೆಲುಗು ನಟ ಬಾಲಕೃಷ್ಣ ಸಿನಿಮಾ ಕಾರ್ಯಕ್ರಮಕ್ಕೆ ರಾಜಾಹುಲಿ ಅತಿಥಿಯಾಗಿ ಹೋಗಿದ್ದರು. ಬಾಲಕೃಷ್ಣ ಅಭಿನಯಿಸಿರುವ ಎನ್.ಟಿ.ಆರ್ ಕಥಾನಾಯಕಡು ಚಿತ್ರ ಇದೇ ವಾರ ರಿಲೀಸ್ ಆಗಿತ್ತಿದ್ದು, ಈ ವಿಶೇಷವಾಗಿ ಬಾಲಯ್ಯ ಮತ್ತು ತಂಡ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.
ಈ ಕಾರ್ಯಕ್ರಮದಲ್ಲಿ ಕನ್ನಡ ನಟ ಪುನೀತ್ ರಾಜ್ ಕುಮಾರ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್, ಬಾಲಯ್ಯ, ಹಾಗೂ ವಿದ್ಯಾ ಬಾಲನ್ ಭಾಗವಹಿಸಿದ್ದರು. ಈ ವೇಳೆ ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ಯಶ್ ಒಂದು ವಿಶೇಷ ಮನವಿ ಮಾಡಿದ್ರು. ಆ ಮನವಿಗೆ ವಿದ್ಯಾ ಏನಂದ್ರು? ಮುಂದೆ ಓದಿ.....

ವಿದ್ಯಾ ಬಾಲನ್ ಗೆ ಯಶ್ ಮಾಡಿದ ಮನವಿ
ಎನ್.ಟಿ.ಆರ್ ಕಥಾನಾಯಕಡು ಚಿತ್ರದಲ್ಲಿ ವಿದ್ಯಾಬಾಲನ್ ಅವರು ಎನ್.ಟಿ.ಆರ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿ ಇಂಡಸ್ಟ್ರಿಯಲ್ಲಿ ತನ್ನದೇ ಬ್ರ್ಯಾಂಡ್ ಹೊಂದಿರುವ ವಿದ್ಯಾಬಾಲನ್ ಅತ್ಯುತ್ತಮ ಸಿನಿಮಾಗಳನ್ನ ಮಾಡಿದ್ದಾರೆ. ಇಂತಹ ಸ್ಟಾರ್ ನಟಿಯನ್ನ ರಾಕಿಂಗ್ ಸ್ಟಾರ್ ಯಶ್ ಕನ್ನಡಕ್ಕೆ ಆಹ್ವಾನಿಸಿದ್ದಾರೆ.

ಯಶ್ ಆಫರ್ ಗೆ ವಿದ್ಯಾ ಏನಂದ್ರು?
''ನಿಮ್ಮ ಸಿನಿಮಾಗಳನ್ನ ನೋಡಿದ್ದೇವೆ, ನಿಮ್ಮ ಕೆಲಸಗಳನ್ನ ನೋಡಿದ್ದೇವೆ. ಮುಂದೆ ನಮ್ಮ ಕನ್ನಡ ಸಿನಿಮಾದಲ್ಲೂ ಅಭಿನಯಿಸಿ'' ಎಂದು ಯಶ್ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ವಿದ್ಯಾ ಬಾಲನ್ ''ನೀವು ನನಗೆ ಆಫರ್ ಕೊಡಿ'' ಎಂದು ನಕ್ಕರು.

ತೆಲುಗು-ತಮಿಳಿನಲ್ಲೂ ವಿದ್ಯಾ ಮೋಡಿ
ಪಾ, ಡರ್ಟಿ ಪಿಕ್ಚರ್, ಕಹಾನಿ, ಕಹಾನಿ 2 ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ವಿದ್ಯಾಬಾಲನ್, ಮಲಯಾಳಂ, ಮರಾಠಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎನ್.ಟಿ.ಆರ್ ಕಥಾನಾಯಕಡು, ಎನ್.ಟಿ.ಆರ್ ಮಹಾನಾಯಕಡು ಎರಡರಲ್ಲೂ ವಿದ್ಯಾ ನಟಿಸಿದ್ದಾರೆ. ಹಿಂದಿ ಸೂಪರ್ ಹಿಟ್ ಸಿನಿಮಾ 'ಪಿಂಕ್' ಚಿತ್ರದ ತಮಿಳು ರೀಮೇಕ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ ಗೆ ವಿದ್ಯಾ ಬಾಲನ್.!
ಸದ್ಯ, ಯಶ್ ಮಾಡಿದ ಮನವಿಗೆ ಆಫರ್ ಕೊಡಿ ಎಂದಿರುವ ವಿದ್ಯಾ ಬಾಲನ್ ಅವರ ಮಾತನ್ನ ಕನ್ನಡದ ನಿರ್ಮಾಪಕರು ಕೇಳಿಸಿಕೊಂಡಿರುತ್ತಾರೆ. ವಿದ್ಯಾ ಬಾಲನ್ ಅಭಿನಯಿಸಿದ್ದ 'ಡರ್ಟಿ ಪಿಕ್ಚರ್' ಕನ್ನಡದಲ್ಲಿ 'ಸಿಲ್ಕ್ ಸಖತ್ ಹಾಟ್' ಹೆಸರಿನಲ್ಲಿ ರೀಮೇಕ್ ಆಗಿತ್ತು. ಬಹುಶಃ ಈಗ ಯಾರಾದಾರೂ ವಿದ್ಯಾ ಅವರಿಗಾಗಿ ಕಥೆ ಮಾಡಿ, ಆಹ್ವಾನ ನೀಡಬಹುದು. ಕಾದು ನೋಡೋಣ.


Click it and Unblock the Notifications











