»   » ಯಶ್ 'ಮಾಸ್ಟರ್ ಪೀಸ್' ಶೂಟಿಂಗ್ ನಿಂತೋಯ್ತಾ?

ಯಶ್ 'ಮಾಸ್ಟರ್ ಪೀಸ್' ಶೂಟಿಂಗ್ ನಿಂತೋಯ್ತಾ?

By: ಜೀವನರಸಿಕ
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್' ಚಿತ್ರೀಕರಣ ಸದ್ಯಕ್ಕೆ ನಿಂತಿದೆ. ಇತ್ತೀಚೆಗೆ ತಾನೇ 'ಮಾಸ್ಟರ್ ಪೀಸ್' ಶೂಟಿಂಗ್ ಗೆ ಚಿತ್ರದ ನಾಯಕಿ ಶಾನ್ವಿ ಶ್ರೀವಾಸ್ತವ್ ಕೂಡಿಕೊಂಡಿದ್ದು ಶೂಟಿಂಗ್ ನಡೀತಾ ಇರೋ ಸುದ್ದಿ ಬಂದಿತ್ತು.

ಆದ್ರೆ ಕೆಲವರ ಡೇಟ್ಸ್ ಗಳ ಸಮಸ್ಯೆಯಿಂದಾಗಿ ಶೂಟಿಂಗ್ ನಿಂತು ಹೋಗಿರೋ ಸುದ್ದಿ ಬಂದಿದೆ. ಮೊದಲಿಗೇ ಫೈಟ್ ಗಳ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿತ್ತು. ಸಾಹಸ ನಿರ್ದೇಶಕ ರವಿವರ್ಮ ಸೇರಿದಂತೆ ಹಲವರು ಬಿಜಿಯಾಗಿರೋದು ಇದಕ್ಕೆ ಕಾರಣವಂತೆ. [ಮಾ.9ರಿಂದ ಯಶ್ 'ಮಾಸ್ಟರ್ ಪೀಸ್' ಮೇಕಿಂಗ್ ಶುರು]


Yash's Masterpiece shooting shelved?

ಸದ್ಯ ಈ ತಿಂಗಳ ಕೊನೆಯ ವಾರದಲ್ಲಿ ಅಥವಾ ಏಪ್ರಿಲ್ ಮೊದಲವಾರದಿಂದ ಶೂಟಿಂಗ್ ಮತ್ತೆ ಆರಂಭವಾಗೋ ಸಾಧ್ಯತೆಯಿದೆ. ಮಾಸ್ಟರ್ ಪೀಸ್ ಚಿತ್ರದಲ್ಲಿ ಯಶ್ ಭಗತ್ ಸಿಂಗ್ ಗೆಟಪ್ ಹಾಕಿರೋದು ಫಸ್ಟ್ ಲುಕ್ ನಲ್ಲೇ ಕುತೂಹಲ ಮೂಡಿಸಿತ್ತು.


'ರಾಜಾಹುಲಿ' ಸೇರಿದಂತೆ ಹಲವು ಸಿನಿಮಾಗಳಿಗೆ ರಂಗು ರಂಗಾಗಿ ಸಂಭಾಷಣೆ ನೀಡಿದ್ದ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದ ಚಿತ್ರ ಮಾಸ್ಟರ್ ಪೀಸ್. ಈಗಾಗಲೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು "ಇನ್ ಖಿಲಾಬ್ ಜಿಂದಾಬಾದ್" ಅನ್ನುವ ಘೋಷವಾಕ್ಯದಿಂದ ಶುರುವಾಗುವ ಟೀಸರ್ ನಲ್ಲಿ 'ರಾಜಾಹುಲಿ' ಸಿಡಿದಿದ್ದಾರೆ.


ಖಾದಿ ತೊಟ್ಟು, ಹುರಿಗಟ್ಟಿದ ಮೀಸೆ ಬಿಟ್ಟು, ತಲೆಗೆ ಪೇಟಾ ತೊಟ್ಟು, ಕೈಲಿ ಬಂದೂಕು ಹಿಡಿದಿರುವ ಯಶ್ ಕ್ರಾಂತಿಕಾರಿಯಾಗಿ ಕಾಣಿಸಿಕೊಂಡಿರುವ ಲುಕ್ ಖಡಕ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿರುವ ಚಿತ್ರಗಳಲ್ಲಿ ಇದೂ ಒಂದು.

English summary
The shooting of Rocking Star Yash's Materpiece has been shelved? The Rocking Star starrer was expected to start in March itself, but the shooting was postponed to April first week, sources says.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada