For Quick Alerts
  ALLOW NOTIFICATIONS  
  For Daily Alerts

  ಯಶ್ ಮುಂದಿನಕ್ಕೆ ಸಿನಿಮಾ ಮಾಡೋದು ನರ್ತನ್: ಅಧಿಕೃತ ಮಾಹಿತಿ ಯಾವಾಗ?

  |

  ರಾಕಿಂಗ್ ಸ್ಟಾರ್ ಯಶ್‌ರನ್ನು ಸೆಲ್ಫ್ ಮೇಡ್ ಸ್ಟಾರ್ ಅಂತಲೇ ಕರೆಯುತ್ತಾರೆ. ಯಾಕೆಂದರೆ ಯಾವುದೇ ಗಾಡ್ ಫಾದರ್ ಇಲ್ಲದೆ. ಯಾರ ದೊಡ್ಡ ಮಟ್ಟದ ಸಹಾಯವೂ ಇಲ್ಲದೆ ಬೆಳೆದು ಬಂದ ನಟ ಯಶ್. ಈಗ ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವ ಸ್ಟಾರ್ ನಟ. 'ಕೆಜಿಎಫ್' ಎನ್ನುವ ಚಿತ್ರದ ಮೂಲಕ ಹೊಸ ಇತಿಹಾಸ ಹುಟ್ಟು ಹಾಕಿದ ನಟ ಯಶ್.

  ಜೊತೆಗೆ ಯಶ್ ಬಗ್ಗೆ ಈಗ ದೊಡ್ಡದೊಂದು ಪ್ರಶ್ನೆ ಎದ್ದಿದೆ. ಎಲ್ಲೆಡೆ ಈ ಪ್ರಶ್ನೆ ಹೆಚ್ಚಾಗಿ ಚರ್ಚೆ ಆಗುತ್ತಲಿದೆ. ಅದು ಮತ್ತೇನು ಅಲ್ಲ, ನಟ ಯಶ್ ಮುಂದಿನ ಸಿನಿಮಾ ಯಾವುದು, ಯಶ್‌ಗೆ ನಿರ್ದೇಶನ ಮಾಡಲಿರುವ ನಟ ಯಾರು ಎನ್ನುವುದು. ಈ ಪ್ರಶ್ನೆ ಉತ್ತರವಾಗಿ ಕಾಣಿಸಿಕೊಂಡಿದ್ದಾರೆ ನರ್ತನ್.

  ಚೆನ್ನೈ ಬಾಕ್ಸಾಫಿಸ್ ಧೂಳಿಪಟ ಮಾಡಿದ 'ಕೆಜಿಎಫ್ 2', ರಜನಿ, ವಿಜಯ್, ಅಜಿತ್ ಹಿಂದಿಕ್ಕಿದ ಯಶ್!ಚೆನ್ನೈ ಬಾಕ್ಸಾಫಿಸ್ ಧೂಳಿಪಟ ಮಾಡಿದ 'ಕೆಜಿಎಫ್ 2', ರಜನಿ, ವಿಜಯ್, ಅಜಿತ್ ಹಿಂದಿಕ್ಕಿದ ಯಶ್!

  ಕೆಜಿಎಫ್ ಬಳಿಕ ನಟ ಯಶ್‌ಗೆ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ಸುದ್ದಿ ಖಚಿತ ಆಗಿರಲಿಲ್ಲ. ಈಗ ಯಶ್ ಮತ್ತು ನರ್ತನ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವಿಚಾರಕ್ಕೆ ಪುಷ್ಟಿ ಕೊಟ್ಟಿದೆ. ಯಶ್ ಗೆಳೆಯನ ಮದುವೆ ಸಮಾರಂಭಕ್ಕೆ ಯಶ್ ಹೋಗಿದ್ದರು, ಅಲ್ಲಿ ಯಶ್ ಜೊತೆಗೆ ನರ್ತನ್ ಕೂಡ ಯಶ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ನರ್ತನ್ ಸಿನಿಮಾ ಬಹುತೇಕ ಖಚಿತ ಎನ್ನುವ ಸುದ್ದಿ ಹುಟ್ಟಿಕೊಂಡಿದೆ.

  ಈ ಹಿಂದೆ ನಿರ್ದೇಶಕ ನರ್ತನ್ ಕೂಡ ಈ ಬಗ್ಗೆ ಮಾತನಾಡಿದ್ದರು. "ಯಶ್ ಅವರ ಜೊತೆ ಮಾತುಕತೆ ಆಗಿದ್ದು ನಿಜ, ಅವರಿಗಾಗಿ ಕಥೆಯನ್ನು ಮಾಡಿಕೊಂಡಿದ್ದೂ ಸತ್ಯ. ಆದರೆ, ಯಾವಾಗ ಸಿನಿಮಾ ಆಗುತ್ತದೆ ಎಂದು ಗೊತ್ತಿಲ್ಲ. ನಿರ್ದಿಷ್ಟವಾಗಿ ದಿನಾಂಕವನ್ನು ಹೇಳುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದರು." ಈಗ ಯಶ್ ಮತ್ತು ನರ್ತನ್ ಜೊತೆಗೆ ಕಾಣಿಸಿಕೊಂಡ ಕಾರಣ ಯಶ್‌ಗೆ ನರ್ತನ್ ನಿರ್ದೇಶನ ಮಾಡಲಿದ್ದರೆ ಎನ್ನುವುದು ಬಹುತೇಕ ಖಚಿತವಾಗಿದೆ.

  Yash Next Movie Directed By Non Other Than Narthan

  ಈಗ ನಟ ಯಶ್‌ಗೆ ಪ್ಯಾನ್ ಇಂಡಿಯಾ ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಹೇಳಬಹುದು. ಯಾಕೆಂದರೆ ಕೆಜಿಎಫ್ ಮೂಲಕ ಯಶ್ ಎಲ್ಲೆಡೆ ರೀಚ್ ಆಗಿದ್ದಾರೆ. ಅವರ ಒಂದು ಸಿನಿಮಾ ಬರುತ್ತೆ ಅಂದರೆ ಪ್ಯಾನ್ ಇಂಡಿಯಾ ಅಭಿಮಾನಿಗಳು ಕಾಯುತ್ತಾರೆ. ಹಾಗಾಗಿ ಅವರು ಕೇವಲ ಕನ್ನಡಕ್ಕೆ ಸೀಮಿತ ಆಗಿ, ಕನ್ನಡ ಚಿತ್ರವನ್ನು ಮಾತ್ರ ಮಾಡುವ ಸಾಧ್ಯತೆ ಕಡಿಮೆ. ಸದ್ಯ ನರ್ತನ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಚಿತ್ರತಂಡ ಅಧಿಕೃತಗೊಳಿಸಬೇಕು ಅಷ್ಟೇ.

  English summary
  Yash Next Movie Will Be Directed By Non Other Than Narthan, Know More Details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion