For Quick Alerts
  ALLOW NOTIFICATIONS  
  For Daily Alerts

  'ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು

  By Bharath Kumar
  |

  ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆ ಸಂಭ್ರಮದ್ದೆ ಸುದ್ದಿ. ಮದುವೆ ದಿನ ಹತ್ತಿರ ಆಗುತ್ತಿದ್ದ ಹಾಗೆ, ಎರಡು ಕುಟುಂಬದಲ್ಲಿ ಶಾಸ್ತ್ರ, ಸಂಪ್ರಾದಯಗಳು ಶುರುವಾಗಿವೆ.

  ಇತ್ತೀಚೆಗೆ ರಾಧಿಕಾ ಪಂಡಿತ್ ತಮ್ಮ ಬ್ಯಾಚುಲರ್ಸ್ ಪಾರ್ಟಿಯನ್ನ ಗೆಳತಿಯರ ಜೊತೆ ಸೆಲೆಬ್ರೇಟ್ ಮಾಡಿದ್ದರು. ಅದೇ ರೀತಿ ನಟ ಯಶ್ ಕೂಡ ತಮ್ಮ ಫ್ರೆಂಡ್ಸ್ ಜೊತೆ ಪಾರ್ಟಿ ಎಂಜಾಯ್ ಮಾಡಿ ಬಂದಿದ್ದರು. ಹೀಗೆ, ಇಬ್ಬರು ತಮ್ಮ ಬ್ಯಾಚುಲರ್ಸ್ ಲೈಫ್ ಮುಗಿಸಿ, ಈಗ ಮದುವೆ ಶಾಸ್ತ್ರಗಳಲ್ಲಿ ತೊಡಗಿಕೊಂಡಿದ್ದಾರೆ.[ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.? ]

  ಡಿಸೆಂಬರ್ 9, 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ವಿವಾಹ ಮಹೋತ್ಸವ ನೆರೆವೇರಲಿದ್ದು, ವರ-ವಧು ಪೂಜೆ, ಚಪ್ಪರ ಪೂಜೆ, ಮುಗಿಸಿ ಈಗ ಮೆಹಂದಿ, ಸಂಗೀತ ಕಾರ್ಯಕ್ರಮಗಳಲ್ಲಿ ಸಿದ್ದವಾಗಿದ್ದಾರೆ.

  'ಯಶ್-ರಾಧಿಕಾ' ಮದುವೆ ಶಾಸ್ತ್ರ ಶುರು

  'ಯಶ್-ರಾಧಿಕಾ' ಮದುವೆ ಶಾಸ್ತ್ರ ಶುರು

  ಡಿಸೆಂಬರ್ 9 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ರಾಧಿಕಾ ಹಾಗೂ ಯಶ್ ಕುಟುಂಬಗಳಲ್ಲಿ ಮದುವೆ ಶಾಸ್ತ್ರ ಶುರುವಾಗಿದೆ.[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']

  ಚಪ್ಪರ ಪೂಜೆಯಲ್ಲಿ ಯಶ್

  ಚಪ್ಪರ ಪೂಜೆಯಲ್ಲಿ ಯಶ್

  ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸದಲ್ಲಿ ಚಪ್ಪರ ಪೂಜೆ ನೆರವೇರಿಸಲಾಯಿತು. ಒಕ್ಕಲಿಗ ಸಂಪ್ರದಾಯದ ಪ್ರಕಾರ ಯಶ್ ಚಪ್ಪರಕ್ಕೆ ಪೂಜೆ ಮಾಡಿದರು. ಈ ವೇಳೆ ತಂದೆ ಅರುಣ್ ಕುಮಾರ್, ತಾಯಿ ಪುಷ್ಪಾ, ಸಹೋದರಿ ನಂದಿನಿ ಜತೆಗಿದ್ದರು.[ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ?]

  ಗೋಪೂಜೆ ಮಾಡಿದ ಯಶ್

  ಗೋಪೂಜೆ ಮಾಡಿದ ಯಶ್

  ಇನ್ನೂ ಚಪ್ಪರ ಪೂಜೆ ಬಳಿಕ, ನಟ ಯಶ್ ಗೋಪೂಜೆ ಕೂಡ ಮಾಡಿದರು. ಕೋಲೆ ಬಸವನಿಗೆ ಮದುವೆ ಗಂಡು ಪೂಜೆ ಸಲ್ಲಿಸಿದರು.

  ರಾಧಿಕಾ ಪಂಡಿತ್ ಮನೆಯಲ್ಲೂ ಶಾಸ್ತ್ರ

  ರಾಧಿಕಾ ಪಂಡಿತ್ ಮನೆಯಲ್ಲೂ ಶಾಸ್ತ್ರ

  ಮತ್ತೊಂದೆಡೆ ರಾಧಿಕಾ ಪಂಡಿತ್ ಅವರ ಮನೆಯಲ್ಲೂ ಮದುವೆ ಶಾಸ್ತ್ರಗಳು ಆರಂಭಗೊಂಡಿವೆ. ಮದುವೆಗೆ ಮುಂಚೆ ಹುಡುಗಿ ಕಡೆಯವರು ಮಾಡುವ ಪೂಜೆಗಳನ್ನ ರಾಧಿಕಾ ಪಂಡಿತ್ ಅವರ ಕುಟುಂಬದವರು ನೆರೆವೇರಿಸಿದ್ದಾರೆ.

  ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ

  ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ

  ಯಶ್ ಹಾಗೂ ರಾಧಿಕಾ ಅವರ ಎರಡು ಕುಟುಂಬದವರು, ಸ್ನೇಹಿತರು ಎಲ್ಲರೂ ಸೇರಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೆಹಂದಿ ಕಾರ್ಯಕ್ರಮದ ಜೊತೆಗೆ ಸಂಗೀತ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದ್ದು, ಯಶ್-ರಾಧಿಕಾ ಅವರ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಹಾಡಲಿದ್ದಾರೆ.

  ಮದುವೆ ಯಾವಾಗ

  ಮದುವೆ ಯಾವಾಗ

  ಡಿಸೆಂಬರ್ 9 ರಂದು ಯಶ್-ರಾಧಿಕಾ ವಿವಾಹ ನಡೆಯಲಿದೆ. ಧಾರಾ ಮುಹೂರ್ತದ ದಿನ ಕುಟುಂಬದ ಆಪ್ತರು ಬಂಧುಗಳಷ್ಟೇ ಹಾಜರಿರಲಿದ್ದು ಡಿಸೆಂಬರ್ 10ರಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆರತಕ್ಷತೆ ನಡೆಯಲಿದ್ದು, ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಇನ್ನೂ 11 ರಂದು ಬರಿ ಅಭಿಮಾನಿಗಳಿಗೆ ಮಾತ್ರ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

  English summary
  Rocking Star Yash and Radhika Pandit wedding is scheduled on December 9th and 10th at Tripura Vasini, Bengaluru Palace Ground. The grand ceremony has already begun with a Traditional Functions in both family. Here are the specialties of Yash-Radhika wedding.
  Tuesday, December 6, 2016, 17:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X