For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಮಂದಿ ಕೇಳಿದ 'ಕಟ್ಟಪ್ಪ-ಬಾಹುಬಲಿ' ಕಥೆ ಬಗ್ಗೆ 'ರಾಕಿ' ಏನಂದ್ರು?

  |
  Kgf Kannada Movie: ಬಾಲಿವುಡ್ ಮಂದಿ ಕೇಳಿದ 'ಕಟ್ಟಪ್ಪ-ಬಾಹುಬಲಿ' ಕಥೆ ಬಗ್ಗೆ 'ರಾಕಿ' ಏನಂದ್ರು?

  ಒಂದೇ ಚಿತ್ರದ ಎರಡು ಭಾಗ ನಿರ್ಮಾಣ ಮಾಡಿ ಅತಿ ದೊಡ್ಡ ಯಶಸ್ಸು ಕಂಡ ಸಿನಿಮಾ ಬಾಹುಬಲಿ. ಮೊದಲ ಭಾಗದ ಅಂತ್ಯದಲ್ಲಿ ಟ್ವಿಸ್ಟ್ ನೀಡಿದ್ದ ರಾಜಮೌಳಿ, ಬಾಹುಬಲಿಯ ಆಪ್ತನಾಗಿದ್ದ ಕಟ್ಟಪ್ಪನೇ ಕೊಂದ ಕಥೆಯೊಂದಿಗೆ ಮುಗಿಸುತ್ತಾರೆ.

  ಆದ್ರೆ, 'ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ' ಎಂದು ನೋಡಬೇಕಾದರೇ, ಬಾಹುಬಲಿ ಪಾರ್ಟ್ 2 ನೋಡಿ ಎಂದು ಅಲ್ಲಿಗೆ ಮೊದಲ ಭಾಗ ಮುಕ್ತಾಯವಾಗುತ್ತೆ. ಆಮೇಲೆ ಆಗಿದ್ದೆಲ್ಲಾ ಎಲ್ಲರಿಗೂ ಗೊತ್ತೆ ಇದೆ.

  ತಮನ್ನಾಗೆ ಕೋಕ್, ಹೊಸ ನಟಿ ಜೊತೆ ಮತ್ತೆ 'ಕೆಜಿಎಫ್' ಸಾಂಗ್ ಶೂಟಿಂಗ್.!

  ಸುಮಾರು ಒಂದೂವರೆ ವರ್ಷ 'ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ' ಎಂಬ ಪ್ರಶ್ನೆಯನ್ನೇ ಇಡ್ಕೊಂಡು ಪಾರ್ಟ್ 2ಗೆ ಸಿಕ್ಕಾಪಟ್ಟೆ ಪಬ್ಲಿಸಿಟಿ ಪಡೆದುಕೊಂಡ ಸಿನಿಮಾ, ಕೊನೆಗೂ ಆ ಪರಿಕಲ್ಪನೆಯಿಂದಲೇ ಪ್ರೇಕ್ಷಕರನ್ನ ಮನಗೆಲ್ಲುವಲ್ಲಿ ಯಶಸ್ಸು ಕಂಡಿತ್ತು. ಇದೀಗ, ಕೆಜಿಎಫ್ ಚಿತ್ರದ ಮೇಲೂ ಅಂತಹ ಕುತೂಹಲ ಕಾಡ್ತಿದೆ. ಈ ಬಗ್ಗೆ ಬಾಲಿವುಡ್ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಯಶ್ ಉತ್ತರಿಸಿದ್ದಾರೆ. ಏನಂದ್ರು? ಮುಂದೆ ಓದಿ....

  ಕಟ್ಟಪ್ಪನ ಕಥೆ ಹೇಳಿದ ಯಶ್

  ಕಟ್ಟಪ್ಪನ ಕಥೆ ಹೇಳಿದ ಯಶ್

  ''ನಿರ್ದೇಶಕರು ಆ ರೀತಿ ಯೋಚನೆ ಮಾಡಿರಲ್ಲ. ಸಿನಿಮಾ ಚೆನ್ನಾಗಿದ್ರೆ ಖಂಡಿತಾ ಗೆಲ್ಲುತ್ತೆ. ಕೊನೆಯಲ್ಲಿ ಒಂದು ಟ್ವಿಸ್ಟ್ ಇರಲೇಬೇಕು. ಯಾಕಂದ್ರೆ, ಎರಡನೇ ಭಾಗಕ್ಕೆ ಲೀಡ್ ಕೊಡಬೇಕು ಅಂದ್ರೆ ಮೊದಲ ಭಾಗದ ಅಂತ್ಯದಲ್ಲಿ ಕುತೂಹಲ ಉಳಿಸುವಂತೆ ಮಾಡಬೇಕು. ಅಂತಹ ಅಂಶ ನಮ್ಮ ಚಿತ್ರದಲ್ಲಿದೆ'' ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.

  'ಕೆಜಿಎಫ್' ಡೈಲಾಗ್ ಗಳ ಪಟ್ಟಿ : ಗಾಯಗೊಂಡಿರೋ ಸಿಂಹದ ಸಂಭಾಷಣೆಗಳಿವು

  ನಮ್ಮ ಚಿತ್ರದಲ್ಲಿ ಕಟ್ಟಪ್ಪ ಇಲ್ಲ

  ನಮ್ಮ ಚಿತ್ರದಲ್ಲಿ ಕಟ್ಟಪ್ಪ ಇಲ್ಲ

  ''ಧಾರಾವಾಹಿಗಳಲ್ಲಿ ಅದನ್ನ ನೋಡಬಹುದು. ಮುಂದಿನ ಎಪಿಸೋಡ್ ನೋಡುವುದಕ್ಕೆ ಹಿಂದಿನ ಎಪಿಸೋಡ್ ನಲ್ಲಿ ಟ್ವಿಸ್ಟ್ ಇಡ್ತಾರೆ. ಅದೇ ರೀತಿ ಇಲ್ಲಿಯೂ ಇದೆ. ಕಟ್ಟಪ್ಪನ ಬಗ್ಗೆ ನಾನು ಮಾತನಾಡಲ್ಲ. ಯಾಕಂದ್ರೆ, ನಮ್ಮ ಚಿತ್ರದಲ್ಲಿ ಕಟ್ಟಪ್ಪ ಇಲ್ಲ'' ಎಂದು ಯಶ್ ನೇರವಾಗಿ ಸ್ಪಷ್ಟಪಡಿಸಿದ್ದಾರೆ.

  ಅಂದು ಬಂದಿದ್ದು ಸುಳ್ಳು, ಇಂದು ಹೇಳ್ತಿರೋದು ನಿಜ: ರಾಜಮೌಳಿ ಜೊತೆ ಯಶ್.!

  ಪಾರ್ಟ್ 2 ರಿಲೀಸ್ ಯಾವಾಗ?

  ಪಾರ್ಟ್ 2 ರಿಲೀಸ್ ಯಾವಾಗ?

  ''ಕೆಜಿಎಫ್ ನಂತರ ಎರಡನೇ ಭಾಗ ಯಾವಾಗ ಬಿಡುಗಡೆಯಾಗುತ್ತೆ ಎಂದು ಕೇಳಿದ್ದಕ್ಕೆ, ನಾವು ಪ್ಲಾನ್ ಮಾಡಿದ ರೀತಿ ಆಗಲ್ಲ, ಮೊದಲ ಸಿನಿಮಾಗೆ ತುಂಬಾ ಸಮಯ ತೆಗೆದುಕೊಂಡಿದೆ. ನಿರ್ದೇಶಕರ ದೊಡ್ಡ ಪ್ರಯತ್ನ ಮತ್ತು ಕೆಲಸದಿಂದ ಈ ಸಿನಿಮಾ ಆಗಿದೆ. ಹಾಗಾಗಿ, ನಿರ್ದೇಶಕರೇ ಹೇಳಬೇಕು. ಆದ್ರೆ, ಬೇಗ ಬರ್ತೀವಿ ಅಂತ ಮಾತ್ರ ಹೇಳ್ತೀನಿ'' ಎಂದರು.

  ಟ್ವಿಟ್ಟರ್ ನಲ್ಲಿ ಯಶ್ ಹೆಸರು ಬದಲಾವಣೆ: ಕೆಲವರು ಟೀಕೆ, ಕೆಲವರು ಬೆಂಬಲ

  ಕೆಜಿಎಫ್ 2 ಚಿತ್ರಕಥೆ ಸಿದ್ಧವಿದೆ

  ಕೆಜಿಎಫ್ 2 ಚಿತ್ರಕಥೆ ಸಿದ್ಧವಿದೆ

  'ಕೆಜಿಎಫ್' ಎರಡನೇ ಭಾಗದ ಸ್ಕ್ರಿಪ್ಟ್ ರೆಡಿಯಿದೆ. ಇನ್ನೇನಿದ್ರು ಶೂಟಿಂಗ್ ಮಾಡ್ಬೇಕು ಅಷ್ಟೇ. ಶೂಟಿಂಗ್ ಮುಗಿಸಿ ಬೇಗನೇ ವಾಪಸ್ ಬರ್ತೀವಿ ಎಂದು ಯಶ್ ಬಾಲಿವುಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎಕ್ಸೆಲ್ ಎಂಟರ್ ಪ್ರೈಸಸ್ ಸಂಸ್ಥೆ ಕೆಜಿಎಫ್ ಹಿಂದಿ ಚಿತ್ರವನ್ನ ಬಿಡುಗಡೆ ಮಾಡ್ತಿದ್ದು, ಬಹುದೊಡ್ಡ ಬಿಡುಗಡೆ ಮಾಡ್ತಿದ್ದಾರೆ.

  'ಸಲಾಮ್ ರಾಕಿ ಭಾಯ್' ಹಿಂದಿ ಸಾಹಿತ್ಯಕ್ಕೆ ವಿರೋಧ: ನಾಗೇಂದ್ರ ಪ್ರಸಾದ್ ಪ್ರತಿಕ್ರಿಯೆ

  English summary
  Kannada actor, rocking star yash reaction on about why kattappa killed bahubali story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X