Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹುಟ್ಟುಹಬ್ಬ ಆಚರಣೆ: ಅಭಿಮಾನಿಗಳಿಗೆ ವಿಶೇಷ ಸಂದೇಶ ಕೊಟ್ಟ ಯಶ್
ನಟ ಯಶ್ ಹುಟ್ಟುಹಬ್ಬ ಜನವರಿ 08ಕ್ಕೆ ಇನ್ನು ಕೆಲವೇ ದಿನಗಳಿವೆ. ರಾಕಿ ಭಾಯ್ ಹುಟ್ಟುಹಬ್ಬವನ್ನು ಪ್ರತಿಬಾರಿ ಭಾರಿ ಅದ್ಧೂರಿಯಾಗಿ ಅಭಿಮಾನಿಗಳು ಆಚರಿಸುತ್ತಾರೆ. ಆದರೆ ಈ ಬಾರಿ ಅದು ಸಾಧ್ಯವಿಲ್ಲ.
ನಟ ಯಶ್ ಅವರು ಇಂದು ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದು, ಕೊರೊನಾ ಇರುವ ಕಾರಣ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅಭಿಮಾನಿಗಳು ಯಾರೂ ಗುಂಪಿನಲ್ಲಿ ಜಮಾವಣೆಗೊಂಡು ಹುಟ್ಟುಹಬ್ಬ ಆಚರಿಸದಂತೆ ಮನವಿ ಮಾಡಿದ್ದಾರೆ.
ಜನವರಿ 05 ರಂದು ಸಂಜೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ನಟ ಯಶ್, ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶದ ಅಕ್ಷರ ರೂಪ ಇಲ್ಲಿದೆ...

ನಿಮ್ಮ, ನಿಮ್ಮ ಕುಟುಂಬದ ಆರೋಗ್ಯ ಮುಖ್ಯ: ಯಶ್
'ನನಗೆ ನಿಮ್ಮ ಆರೋಗ್ಯ, ನಿಮ್ಮ ಕುಟುಂಬದವರ ಆರೋಗ್ಯ ಹೆಚ್ಚು ಮುಖ್ಯ, ಹಾಗಾಗಿ ಈ ಬಾರಿ ಗುಂಪು ಗೂಡಿ ಹುಟ್ಟುಹಬ್ಬ ಆಚರಿಸುವ ಬದಲಿಗೆ, ತಾವುಗಳು ಎಲ್ಲಿ ಇರುತ್ತೀರೋ ಅಲ್ಲಿಂದಲೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳಿಸಿ' ಎಂದಿದ್ದಾರೆ ಯಶ್.

ಟೀಸರ್ ನೋಡಿ ಆನಂದಿಸಿ, ಹರಸಿ: ಯಶ್
ಹುಟ್ಟುಹಬ್ಬದ ದಿನವೇ ಹೊಂಬಾಳೆ ಫಿಲಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು, ಟೀಸರ್ ಅನ್ನು ನೋಡಿ ಆನಂದಿಸಿ, ಪ್ರತಿಕ್ರಿಯಿಸಿ ಎಂದು ಮನವಿ ಮಾಡಿದ್ದಾರೆ ನಟ ಯಶ್.

'ಮುಂಚೆ ನನ್ನ ಹುಟ್ಟುಹಬ್ಬಕ್ಕೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ'
'ನನ್ನ ಹುಟ್ಟುಹಬ್ಬಕ್ಕೆ ನಾನು ಹೆಚ್ಚು ಮಹತ್ವ ಕೊಡುತ್ತಿರಲಿಲ್ಲ. ಆದರೆ ನೀವೆಲ್ಲರೂ ಪ್ರೀತಿಯಿಂದ ನನ್ನ ಹುಟ್ಟುಹಬ್ಬ ಆಚರಿಸಲು ಪ್ರಾರಂಭಿಸಿದ ಮೇಲೆಯೇ ನಾನು ಹುಟ್ಟುಹಬ್ಬಕ್ಕೆ ಮಹತ್ವ ನೀಡಲು ಆರಂಭಿಸಿದೆ. ನನ್ನ ಹುಟ್ಟುಹಬ್ಬದಂದು ನಿಮ್ಮನ್ನೆಲ್ಲಾ ಹತ್ತಿರದಿಂದ ನೋಡಬಹುದಲ್ಲ ಎಂಬುದು ನನ್ನ ಖುಷಿಯೂ ಆಗಿತ್ತು. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ' ಎಂದು ಬೇಸರವ್ಯಕ್ತಪಡಿಸಿದ್ದಾರೆ ನಟ ಯಶ್.

ಬೇರೆ ರಾಜ್ಯಗಳಿಂದಲೂ ಬಂದಿದ್ದ ಅಭಿಮಾನಿಗಳು
ಕಳೆದ ಬಾರಿ ಹುಟ್ಟುಹಬ್ಬಕ್ಕೆ ಬೇರೆ ಬೇರೆ ರಾಜ್ಯಗಳಿಂದ ಸಹ ಜನರು ಬಂದಿದ್ದರು ಎಂದಿರುವ ಯಶ್, ಬೇರೆ ರಾಜ್ಯಗಳ ಅಭಿಮಾನಿಗಳಿಗಾಗಿ ಮೇಲಿನ ಸಂದೇಶವನ್ನು ಇಂಗ್ಲೀಷ್‌ನಲ್ಲಿ ಸಹ ಹೇಳಿದ್ದಾರೆ. ಜನವರಿ 8 ರಂದು ಬೆಳಿಗ್ಗೆ 10:18 ಗೆ ಸರಿಯಾಗಿ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಯಶ್ ಹುಟ್ಟುಹಬ್ಬಕ್ಕೆಂದು ಈ ಟೀಸರ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ.