»   » ರಾಕಿಂಗ್ ಸ್ಟಾರ್ ಯಶ್ 'ರಾಮಾಚಾರಿ' ಹಾಫ್ ಸೆಂಚುರಿ

ರಾಕಿಂಗ್ ಸ್ಟಾರ್ ಯಶ್ 'ರಾಮಾಚಾರಿ' ಹಾಫ್ ಸೆಂಚುರಿ

Posted By:
Subscribe to Filmibeat Kannada

ಈ ವರ್ಷ ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸು ಕಂಡಿರುವ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ಅರ್ಧ ಶತಕ ಪೂರೈಸಿದೆ. ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರ ಖಾತೆಗೆ ಮತ್ತೊಂದು ಯಶಸ್ಸು ಸೇರ್ಪಡೆಯಾಗಿದೆ.

ಮಲ್ಟಿ ಸ್ಕ್ರೀನ್ ಚಿತ್ರಮಂದಿರಗಳು ಹಾಗೂ ಸಿಂಗಲ್ ಪರದೆ ತೆರೆಗಳ ಮೇಲೂ ರಾಮಾಚಾರಿ ಮೋಡಿ ಮುಂದುವರೆದಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ ಸಂತೋಷ್ ನಲ್ಲಿ ರಾಮಾಚಾರಿ ಅರ್ಧ ಶತಕ ಪೂರೈಸಿರುವುದು ವಿಶೇಷ. [ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ವಿಮರ್ಶೆ]

Yash's Mr and Mrs Ramachari completes 50 days

ರಾಜ್ಯದಾದ್ಯಂತೆ 90ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ರಾಮಾಚಾರಿ' ಐವತ್ತು ದಿನಗಳನ್ನು ಪೂರೈಸಿ ಮುನ್ನಡೆದಿದೆ. ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ನಿರ್ಮಾಪಕರ ಪಾಲಿಗೆ ಲಕ್ಕಿ ಎಂಬುದು ರುಜುವಾಗಿದೆ.

ಸಂತೋಷ್ ಆನಂದರಾಮ್ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ಜಯಣ್ಣ ಭೋಗೇಂದ್ರ ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದ್ದು ಬಿಡುಗಡೆಯಾದ ನಾಲ್ಕು ವಾರಗಳಲ್ಲೇ ರು. 34 ಕೋಟಿ ಕಲೆಕ್ಷನ್ ಮಾಡಿದೆ.

ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿ, ಹುಡುಗಿಯರಿಂದ ಮಾರುದ್ದ ದೂರ ನಿಲ್ಲುವ ಯುವ ರಾಮಾಚಾರಿಯ (ಯಶ್) ಹಿಂದೆ 'ಮಾರ್ಗರೇಟ್' ಬೀಳುತ್ತಾಳೆ. ''ನಾನು ಪಕ್ಕಾ ಮಾಸ್'' ಅಂತ ಬೀಗುವ ರಾಮಾಚಾರಿಗೆ ಕ್ಲಾಸ್ ಹುಡುಗಿ ಮಾರ್ಗರೇಟ್ (ರಾಧಿಕಾ ಪಂಡಿತ್) ಕ್ಲೀನ್ ಬೌಲ್ಡ್ ಆಗುತ್ತಾಳೆ. ಅಲ್ಲಿಂದ ನಡೆಯುವುದೇ ಇಬ್ಬರ ಲವ್ವಿ-ಡವ್ವಿ ಕಹಾನಿ. (ಫಿಲ್ಮಿಬೀಟ್ ಕನ್ನಡ)

English summary
Rocking Star Yash and Radhika Pandit starrer Mr and Mrs Ramacahri movie has successfully completed 50 days in more than 90 theaters and is running towards 100 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada