Just In
Don't Miss!
- News
ಹರಿದ್ವಾರ ಕುಂಭಮೇಳ 2021: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Finance
ಜನವರಿ 1ರಿಂದ 22ರ ತನಕ ಎಫ್ ಪಿಐನಿಂದ ರು. 18,456 ಕೋಟಿ ಹೂಡಿಕೆ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಜಿಎಫ್ 2 ಚಿತ್ರೀಕರಣದ ಬಗ್ಗೆ ಯಶ್ ಕೊಟ್ಟರು ಪ್ರಮುಖ ಅಪ್‌ಡೇಟ್
ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರೀಕರಣ ದ ಕುರಿತಂತೆ ನಟ ಯಶ್ ಮುಖ್ಯವಾದ ಮಾಹಿತಿಯೊಂದನ್ನು ಇಂದು (ಡಿಸೆಂಬರ್ 07) ಹಂಚಿಕೊಂಡಿದ್ದಾರೆ.
ಕೆಜಿಎಫ್ 2 ಸಿನಿಮಾದಲ್ಲಿ ತಮ್ಮ ಲುಕ್‌ನ ಚಿತ್ರವೊಂದನ್ನು ಹಂಚಿಕೊಂಡಿರುವ ಯಶ್, ಚಿತ್ರೀಕರಣದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
'KGF-2' ಕ್ಲೈಮ್ಯಾಕ್ಸ್ ಶೂಟಿಂಗ್; ರಾಕಿ ಭಾಯ್ ಮತ್ತು ಆಧೀರ ಫೈಟ್ ಗೆ ವೇದಿಕೆ ಸಿದ್ಧ
'ಎಲ್ಲಾ ಒಳ್ಳೆಯ ಸಂಗತಿಗಳಿಗೂ ಅಂತ್ಯವಿದ್ದೇ ಇರುತ್ತದೆ. ಇದು ಕೆಜಿಎಫ್ 2 ಸಿನಿಮಾ ಚಿತ್ರೀಕರಣದ ಕೊನೆಯ ಹಂತ ಇರಬಹುದು ಆದರೆ ಈ 'ವಿಲನ್' ಹಾಗೆಯೇ ಇರಲಿದ್ದಾನೆ' ಎಂದು ತಮ್ಮದೇ ಸ್ಟೈಲಿಶ್ ಚಿತ್ರ ಹಂಚಿಕೊಂಡಿದ್ದಾರೆ ನಟ ಯಶ್.
ಯಶ್ ಹಾಕಿರುವ ಎಕ್ಸ್‌ಕ್ಲೂಸಿವ್ ಚಿತ್ರವನ್ನು ಕೇವಲ ಒಂದು ಗಂಟೆಯಲ್ಲಿ 62 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕೆಲವೇ ನಿಮಿಷದಲ್ಲಿ ಚಿತ್ರ ವೈರಲ್ ಆಗಿದೆ.

ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡ ಯಶ್
ಬಿಳಿ ಶರ್ಟ್, ಕಪ್ಪು ಸೂಟ್ ಧರಿಸಿ ಕೈಯಲ್ಲಿ ಮಷಿನ್ ಗನ್ ಹಿಡಿದು ರಗಡ್ ಲುಕ್‌ನಲ್ಲಿದ್ದಾರೆ ನಟ ಯಶ್. ಕೆಜಿಎಫ್ 2 ಸಿನಿಮಾದ ಈ ಎಕ್ಸ್‌ಕ್ಲೂಸಿವ್ ಚಿತ್ರವನ್ನು ಸೆರೆ ಹಿಡಿದಿದ್ದು, ಡಿಒಪಿ ಭುವನ್ ಗೌಡ ಎಂಬ ಮಾಹಿತಿ ನೀಡಿದ್ದಾರೆ ಯಶ್.

ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ
ಕೆಜಿಎಫ್ 2 ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಚಿತ್ರೀಕರಿಸುತ್ತಿದ್ದಾರೆ. ಈ ಬಗ್ಗೆ ಪ್ರಶಾಂತ್ ಸಹ ಚಿತ್ರೀಕರಣದ ಸೆಟ್‌ನ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಂಜಯ್ ದತ್-ಯಶ್ ನಡುವೆ ಫೈಟ್
ಹೈದರಾಬಾದ್‌ನಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದ್ದು, ಅಧೀರ ಪಾತ್ರಧಾರಿ ಸಂಜಯ್ ದತ್ ಹಾಗೂ ರಾಕಿಭಾಯ್ ಯಶ್ ನಡುವಿನ ಫೈಟ್ ದೃಶ್ಯದ ಚಿತ್ರೀಕರಣ ಮಾಡಲಾಗುತ್ತಿದೆ. ಈ ಕೊನೆಯ ಭಯಾನಕ ಫೈಟ್ ಅನ್ನು ಫೈಟ್ ಮಾಸ್ಟರ್ಸ್ ಅನ್ಬರಿವ್ ಸಹೋದರರು ನಿರ್ದೇಶಿಸುತ್ತಿದ್ದಾರೆ.

ಹಲವು ಕಾರ್ಯಗಳು ಬಾಕಿ ಇವೆ
ಫೈಟ್ ದೃಶ್ಯಗಳ ಚಿತ್ರೀಕರಣದ ಬಳಿಕ ಸಿನಿಮಾ ಚಿತ್ರೀಕರಣ ಭಾಗ ಅಂತ್ಯವಾಗಲಿದ್ದು, ಪೋಸ್ಟ್ ಪ್ರೊಡಕ್ಷನ್ ಪ್ರಾರಂಭವಾಗಲಿದೆ. ಎಡಿಟಿಂಗ್, ಸೌಂಡ್ ಮಿಕ್ಸಿಂಗ್, ಹಿನ್ನೆಲೆ ಸಂಗೀತ, ಡಬ್ಬಿಂಗ್, ಗ್ರಾಫಿಕ್ಸ್, ಡಿಟಿಎಸ್ ಇನ್ನೂ ಹಲವು ಕಾರ್ಯಗಳು ನಡೆಯಲಿವೆ.