ಮುದ್ದು ಮಗನಿಗೆ 11 ತಿಂಗಳು ತುಂಬಿದ ಖುಷಿಯಲ್ಲಿ ಯಶ್ ದಂಪತಿ
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಪುತ್ರ ಯಥರ್ವ್ ಯಶ್ ಗೆ ಇಂದು ವಿಶೇಷವಾದ ದಿನ. ಈ ದಿನವನ್ನು ರಾಧಿಕಾ ಪಂಡಿತ್ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಯಶ್ ದಂಪತಿ ಜೊತೆಗೆ ಅಭಿಮಾನಿಗಳು ಸಹ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಯಥರ್ವ್ ಯಶ್ ಹುಟ್ಟಿ ಇಂದಿಗೆ 11 ತಿಂಗಳಾಗಿದೆ.
Recommended Video
11 ತಿಂಗಳ ಖುಷಿಯನ್ನು ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿದ್ದಾರೆ. ಮಕ್ಕಳ ಫೋಟೋಗಳನ್ನು, ವಿಡಿಯೋಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ. ಐರಾ ಮತ್ತು ಯಥರ್ವ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಸಾಮಾಜಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಮುಂದೆ ಓದಿ...

11 ತಿಂಗಳು ತುಂಬಿದ ಸಂಭ್ರಮದಲ್ಲಿ ರಾಧಿಕಾ
ಇದೀಗ ಮಗನ 11ತಿಂಗಳ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಗನ ನಾಮಕರಣದ ಫೋಟೋವನ್ನು ಶೇರ್ ಮಾಡಿ "ನನ್ನ ಕಂದ, ನನ್ನ ರಾಜಕುಮಾರ, ನನ್ನ ಯಥರ್ವ್ ನಿಗೆ 11 ತಿಂಗಳು ತುಂಬಿದೆ" ಎಂದು ಬರೆದುಕೊಂಡಿದ್ದಾರೆ.

ಮೊದಲ ವರ್ಷದ ಹುಟ್ಟುಹಬ್ಬಕ್ಕೆ 1 ತಿಂಗಳು ಬಾಕಿ
ಪುತ್ರ ಒಂದು ವರ್ಷ ಪೂರ್ಣಗೊಳ್ಳಲು ಕೇವಲ ಒಂದು ತಿಂಗಳು ಭಾಗಿ ಇದೆ. ಮಗಳ ಬರ್ತಡೇಯನ್ನು ಯಶ್ ದಂಪತಿ ಅದ್ದೂರಿಯಾಗಿ, ಇಡೀ ಚಿತ್ರರಂಗಕ್ಕೆ ಆಹ್ವಾನ ನೀಡಿ ಆಚರಣೆ ಮಾಡಿದ್ದರು. ಆದರೆ ಪುತ್ರನ ಅದ್ದೂರಿ ಹುಟ್ಟುಹಬ್ಬ ಸಂಭ್ರಮಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಆದರೂ ಮುದ್ದು ಮಗನ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಐರಾ ಹೇಳಿ ಕೊಡುತ್ತಿರುವ ವಿಡಿಯೋ ವೈರಲ್
ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಎಂಗೇಜ್‌ಮೆಂಟ್ ಫೋಟೋ ನೋಡಿದ ಯಥರ್ವ್, ಆ ಫೋಟೋ ಬಳಿ ಹೋಗಿ ಅಪ್ಪ-ಅಮ್ಮನ್ನು ಗುರುತಿಸುತ್ತಿದ್ದಾನೆ. ಸಹೋದರನಿಗೆ ಐರಾ ಸಾಥ್ ನೀಡಿದ್ದಾಳೆ. ತೊದಲು ಮಾತಿನಲ್ಲಿ ಅಪ್ಪ-ಅಮ್ಮ ಎನ್ನುವ ಪ್ರಯತ್ನ ಮಾಡುತ್ತಿರುವ ಯಥರ್ವನಿಗೆ ಸಹೋದರಿ ಐರಾ ಹೇಳಿಕೊಡುತ್ತಿದ್ದಾಳೆ. ಐರಾ-ಯಥರ್ವ್ ಇಬ್ಬರ ಮುದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.


Click it and Unblock the Notifications











