»   » ಮುಯ್ಯಿಗೆ ಮುಯ್ಯಿ; ಯಶ್ 'ಮಾಸ್ಟರ್ ಪೀಸ್' ಕಟೌಟ್ ಪೀಸ್ ಪೀಸ್!

ಮುಯ್ಯಿಗೆ ಮುಯ್ಯಿ; ಯಶ್ 'ಮಾಸ್ಟರ್ ಪೀಸ್' ಕಟೌಟ್ ಪೀಸ್ ಪೀಸ್!

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾ ಬಿಡುಗಡೆಗೆ ಇನ್ನೂ ಮೂರು ದಿನ ಬಾಕಿ ಇರುವಾಗಲೇ ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ ಯಶ್ ರವರ ಬೃಹತ್ ಕಟೌಟ್ ಹಾಕಲಾಗಿತ್ತು.

ಅದೂ, ಅಲ್ಲಿ ಸದ್ಯ ಪ್ರದರ್ಶನವಾಗುತ್ತಿರುವ 'ಹುಚ್ಚ ವೆಂಕಟ್' ಮತ್ತು ಸ್ವಪ್ನ ಚಿತ್ರಮಂದಿರದಲ್ಲಿ ಶೋ ಕಾಣುತ್ತಿರುವ 'ಜಾತ್ರೆ' ಚಿತ್ರದ ಕಟೌಟ್ ಗಳನ್ನ ಕಿತ್ತು ಬಿಸಾಕಿ ಅದೇ ಜಾಗದಲ್ಲಿ ಯಶ್ ರವರ ಕಟೌಟ್ ಗಳನ್ನ ಹಾಕಲಾಗಿತ್ತು.


masterpiece-jaatre

ಈ ಬಗ್ಗೆ 'ಜಾತ್ರೆ' ಚಿತ್ರದ ನಾಯಕ ಚೇತನ್ ಚಂದ್ರ ಫೇಸ್ ಬುಕ್ ನಲ್ಲಿ ಬೇಸರ ವ್ಯಕ್ತಪಡಿಸಿದ್ರು. ['ಮಾಸ್ಟರ್ ಪೀಸ್' ಬಿಡುಗಡೆಗೆ ಮುನ್ನ ಏನಿದು ಅಪಸ್ವರ.?]


Time for the power of social media.HelloWho r active?Pls replyChetan chandra hereEnnu muru Dina edeAagle cutout...


Posted by Chethan Chandra on Monday, December 21, 2015

ಇದಾದ ಕೆಲವೇ ಘಂಟೆಗಳಲ್ಲಿ ಸಂತೋಷ್ ಚಿತ್ರಮಂದಿರದ ಮುಂದೆ ಹಾಕಿರುವ ಯಶ್ ರವರ 'ಮಾಸ್ಟರ್ ಪೀಸ್' ಕಟೌಟ್ ಗಳನ್ನ ಕಿತ್ತು ಹಾಕಲಾಗಿದೆ.


masterpiece

ಯಶ್ ರವರ ಬೃಹತ್ ಕಟೌಟ್ ಗಳನ್ನ ಯಾರೋ ಧ್ವಂಸಗೊಳಿಸಿದ್ದಾರೆ. ರಾತ್ರೋ ರಾತ್ರಿ ಈ ಕೃತ್ಯ ಸಂತೋಷ್ ಚಿತ್ರಮಂದಿರದಲ್ಲಿ ನಡೆದಿದೆ. ಇದಕ್ಕೆ ಚೇತನ್ ಚಂದ್ರ ರವರ 'ಜಾತ್ರೆ' ಸಿನಿಮಾ ತಂಡ ಕಾರಣ ಅಂತ ಸ್ಪಷ್ಟವಾಗಿ ಹೇಳಲು ಕಷ್ಟ. [ಎಕ್ಸ್ ಕ್ಲೂಸಿವ್ ; 'ಮಾಸ್ಟರ್ ಪೀಸ್' ವಿತರಣಾ ಹಕ್ಕು ಅಬ್ಬಬ್ಬಾ! ಅಷ್ಟೊಂದಾ?!]


masterpiece

ಈ ಬಗ್ಗೆ 'ಮಾಸ್ಟರ್ ಪೀಸ್' ಚಿತ್ರತಂಡ ಇಲ್ಲಿಯವರೆಗೂ ಮೌನ ವಹಿಸಿದೆ. ಪ್ರತಿಕ್ರಿಯೆ ಕೊಡುವ ಗೋಜಿಗೆ ಯಶ್ ಆಗ್ಲಿ, ನಿರ್ದೇಶಕ ಮಂಜು ಮಾಂಡವ್ಯ ಆಗಿ ಹೋಗಿಲ್ಲ. ಕಟೌಟ್ ಗಳಿಂದ ಶುರುವಾಗಿರುವ ಈ ಯುದ್ಧ ಎಲ್ಲಿವರೆಗೂ ಹೋಗಿ ತಲುಪುತ್ತೋ, ನೋಡ್ಬೇಕು.

English summary
Rocking Star Yash starrer 'Masterpiece' cutout is damaged in Santhosh Theater, Bengaluru. Is Chetan Chandra starrer 'Jaatre' team responsible for this is question as of now.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada