For Quick Alerts
  ALLOW NOTIFICATIONS  
  For Daily Alerts

  'KGF-2' ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಕ್ತು ಶುಭ ಸುದ್ದಿ

  |

  ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಯಶ್ ಬಹುನಿರೀಕ್ಷೆಯ ಕೆಜಿಎಫ್-2 ಚಿತ್ರೀರಣದಲ್ಲಿ ಭಾಗಿಯಾಗತ್ತಿದ್ದಾರೆ. ಬರೋಬ್ಬರಿ 7 ತಿಂಗಳ ಬಳಿಕ ಯಶ್ ಚಿತ್ರೀಕರಣದಲ್ಲಿ ನಿರತರಾಗುತ್ತಿದ್ದಾರೆ. ಈಗಾಗಲೇ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ನಡೆಯುತ್ತಿದೆ.

  KGF Chapter 2 ಇಲ್ಲಿದೆ Rocking Star Yash ಅಭಿಮಾನಿಗಳು ಖುಷಿ ಪಡೋ ಸುದ್ದಿ | Filmibeat Kannada

  ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಆಸಗ್ಟ್ 26ರಿಂದ ಪ್ರಾರಂಭವಾಗಿದೆ. ಲಾಕ್ ಡೌನ್ ಬಳಿಕ ಚಿತ್ರತಂಡ ಮುನ್ನೆಚ್ಚರಿಕೆಯೊಂದಿಗೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಈಗಾಗಲೇ ನಟ ಪ್ರಕಾಶ್ ರೈ ಮತ್ತು ನಟಿ ಮಾಳವಿಕಾ ಅವಿನಾಶ್ ಅವರ ಚಿತ್ರೀಕರಣ ಮಾಡಿ ಮುಗಿಸಿದೆ ಚಿತ್ರತಂಡ. ಇದೀಗ ರಾಕಿ ಭಾಯ್, ಯಶ್ ಭಾಗದ ಚಿತ್ರೀಕರಣಕ್ಕೆ ಅಖಾಡ ಸಿದ್ಧವಾಗಿದೆ. ಮುಂದೆ ಓದಿ...

  ನಾಡ ಹಬ್ಬಕ್ಕೆ ಕೆಜಿಎಫ್ 2 ಚಿತ್ರತಂಡದಿಂದ ಭರ್ಜರಿ ಉಡುಗೊರೆನಾಡ ಹಬ್ಬಕ್ಕೆ ಕೆಜಿಎಫ್ 2 ಚಿತ್ರತಂಡದಿಂದ ಭರ್ಜರಿ ಉಡುಗೊರೆ

  ಅಕ್ಟೋಬರ್ 8 ಕೆಜಿಎಫ್-2 ಚಿತ್ರೀಕರಣದಲ್ಲಿ ಯಶ್

  ಅಕ್ಟೋಬರ್ 8 ಕೆಜಿಎಫ್-2 ಚಿತ್ರೀಕರಣದಲ್ಲಿ ಯಶ್

  ರಾಕಿಂಗ್ ಸ್ಟಾರ್ ಯಶ್ ಅಕ್ಟೋಬರ್ 8ರಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಯಶ್ ಯಾವಾಗ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ನಾಳೆಯಿಂದನೆ ಯಶ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

  ಅಕ್ಟೊಬರ್ ಕೊನೆಯಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್

  ಅಕ್ಟೊಬರ್ ಕೊನೆಯಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್

  ಇಡೀ ಭಾರತೀಯ ಸಿನಿಮಾ ಪ್ರಿಯರ ಗಮನ ಸೆಳೆದಿರುವ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಈ ತಿಂಗಳ ಕೊನೆಯಲ್ಲಿ ಮುಗಿಸುವ ಪ್ಲಾನ್ ಮಾಡಿದೆಯಂತೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಯಶ್ ಮತ್ತು ಸಂಜಯ್ ದತ್ ಭಾಗದ ಚಿತ್ರೀಕರಣ ಬಾಕಿಯುಳಿದಿದೆ. ಸದ್ಯ ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜಯ್ ದತ್ ಗುಣಮುಖರಾಗುತ್ತಿದ್ದಂತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಯಾವಾಗ ಎನ್ನುವ ಎನ್ನುವುದು ಗೊತ್ತಿಲ್ಲ.

  'ಕೆಜಿಎಫ್-2'ನಲ್ಲಿ 'ರೈ': #ಬಾಯ್‌ಕಟ್‌ಕೆಜಿಎಫ್ ಟ್ರೆಂಡ್, ಉಳಿದ ಚಿತ್ರಕ್ಕೆ ಏಕಿಲ್ಲ ವಿರೋಧ?'ಕೆಜಿಎಫ್-2'ನಲ್ಲಿ 'ರೈ': #ಬಾಯ್‌ಕಟ್‌ಕೆಜಿಎಫ್ ಟ್ರೆಂಡ್, ಉಳಿದ ಚಿತ್ರಕ್ಕೆ ಏಕಿಲ್ಲ ವಿರೋಧ?

  ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್?

  ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್?

  ಇಡೀ ದೇಶದ ಗಮನ ಸೆಳೆದಿರುವ ಕೆಜಿಎಫ್ ಸಿನಿಮಾ ದಸರಾ ಹಬ್ಬಕ್ಕೆ ರಿಲೀಸ್ ಆಗಲು ಸಿದ್ಧವಾಗಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದ ಸಿನಿಮಾ ಲೆಕ್ಕಾಚಾರ ತಲೆಕೆಳಗಾಗಿದೆ. ಸಿನಿಮಾ ರಿಲೀಸ್ ಆಗದಿದ್ದರೂ ಟೀಸರ್ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾಗಿ ದಸರಾ ಹಬ್ಬಕ್ಕೆ ಕೆಜಿಎಪ್-2 ಕಡೆಯಿಂದ ಭರ್ಜರಿ ಗಿಫ್ಟ್ ನ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

  ಬೆಂಗಳೂರಿನಲ್ಲಿ ಚಿತ್ರೀಕರಣ

  ಬೆಂಗಳೂರಿನಲ್ಲಿ ಚಿತ್ರೀಕರಣ

  ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ವಿಶೇಷ ಅಂದರೆ ಪಾರ್ಟ್-2ನಲ್ಲಿ ಖ್ಯಾತ ನಟ ಪ್ರಕಾಶ್ ರೈ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಕಾಶ್ ರೈ, ನಟ ಅನಂತ್ ನಾಗ್ ಜಾಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕಾಶ್ ರೈ ಎಂಟ್ರಿ ಅನೇಕರ ವಿರೋಧಕ್ಕೂ ಕಾರಣವಾಗಿದೆ. ಆದರೆ ಇದ್ಯಾವುದಕ್ಕು ತಲೆಕೆಸಿಡಿಕೊಳ್ಳದ ಸಿನಿಮಾತಂಡ ಸುಮಾರು ಒಂದು ತಿಂಗಳಿಂದ ಕೆಜಿಎಪ್-2 ತಂಡ ಚಿತ್ರೀಕರಣದಲ್ಲಿ ನಿರತವಾಗಿದೆ. ನಾಳೆಯಿಂದ ರಾಕಿ ಭಾಯಿ ಎಂಟ್ರಿ ಕೊಡಲಿದ್ದು, ಚಿತ್ರೀಕರಣದ ಅಖಾಡ ಮತ್ತಷ್ಟು ರಂಗೇರಲಿದೆ.

  English summary
  Rocking star Yash to resume shoot for KGF Chapter 2 on october 8. Yash returns to Shooting After a 7 months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X