For Quick Alerts
  ALLOW NOTIFICATIONS  
  For Daily Alerts

  Video: ಸಿಂಹದ ಎದುರು ನಿಂತು ಸ್ಮೈಲ್ ಕೊಟ್ಟ 'ರಾಕಿ ಭಾಯ್' ಯಶ್

  |

  ನಟ ಯಶ್‌, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ನಟ ಯಶ್ ಸಿಂಹದ ಎದುರು ನಿಂತು ಸ್ಮೈಲ್ ಮಾಡುತ್ತಿದ್ದಾರೆ. ಅದೂ ಮೃಗಾಲಯದ ಸಿಂಹವಲ್ಲ!

  ನಟ ಯಶ್ ಸಿಂಹದ ಎದುರು ನಿಂತು ಅದಕ್ಕೆ ಮಾಂಸ ತಿನ್ನಿಸುತ್ತಿದ್ದಾರೆ. ಸಿಂಹಕ್ಕೂ, ಯಶ್‌ಗೂ ನಡುವೆ ಎರಡು ಗಜದ ಅಂತರವೂ ಇಲ್ಲ! ನಟ ಯಶ್ ದುಬೈನಲ್ಲಿದ್ದು, ತುಸುವೂ ಅಳುಕಿಲ್ಲದೆ ಸಾಕಿದ ಬಿಳಿ ಸಿಂಹಕ್ಕೆ ಯಶ್ ಮಾಂಸ ತಿನ್ನಿಸುತ್ತಾ ಸ್ಮೈಲ್ ಮಾಡುತ್ತಿದ್ದಾರೆ. ಯಶ್‌ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  ನಟ ಯಶ್ ಹಾಗೂ ರಾಧಿಕಾ ಎರಡು ದಿನದ ಹಿಂದಷ್ಟೆ ದುಬೈಗೆ ತೆರಳಿದ್ದಾರೆ. ಯಶ್ ದಂಪತಿ ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದಾರೆ.

  ದುಬೈನಲ್ಲಿ ವನ್ಯಮೃಗಗಳನ್ನು ಸಾಕುವ ಹವ್ಯಾಸವಿದೆ. ನಮ್ಮಲ್ಲಿ ಬೆಕ್ಕು, ನಾಯಿಗಳನ್ನು ಸಾಕಿದಂತೆ ದುಬೈನಲ್ಲಿ ಹುಲಿ, ಸಿಂಹ, ಚಿರತೆಗಳನ್ನು ಸಾಕುತ್ತಾರೆ. ವನ್ಯಜೀವಿಗಳನ್ನು ಸಾಕುವುದು ದುಬೈ ಜನರಿಗೆ ಪ್ರತಿಷ್ಠೆಯ ಸಂಕೇತ.

  ಯಶ್ ಹಂಚಿಕೊಂಡಿರುವ ವಿಡಿಯೋವನ್ನು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಯಶ್ ಅಭಿಮಾನಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

  'ಕೆಜಿಎಫ್ 2' ಮುಗಿಸಿ ಬಹುಕಾಲವಾಗಿರುವ ನಟ ಯಶ್ ಇನ್ನೂ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಹಾಗಾಗಿ ಪ್ರವಾಸ, ಜಾಹೀರಾತು ಚಿತ್ರೀಕರಣ, ನಿರ್ಮಾಪಕರ ಭೇಟಿ, ಕುಟುಂಬದೊಂದಿಗೆ ಸಮಯ ಕಳೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಮುಂಬೈಗೆ ಭೇಟಿ ನೀಡಿದ್ದ ಯಶ್ ಜನಪ್ರಿಯ ಕೇಶ ವಿನ್ಯಾಸಕ ಅಲೀಮ್ ಹಕಿಮ್ ಬಳಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದರು. ಯಶ್‌ರ ಹೊಸ ಹೇರ್‌ಸ್ಟೈಲ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

  ಯಶ್ ನಟಿಸಿರುವ 'ಕೆಜಿಎಫ್ 2' ಸಿನಿಮಾ ಮುಂದಿನ ವರ್ಷ ಏಪ್ರಿಲ್ 14 ಕ್ಕೆ ಬಿಡುಗಡೆ ಆಗಲಿದೆ. ಯಶ್ ತಮ್ಮ ಮುಂದಿನ ಸಿನಿಮಾಕ್ಕೆ ಇನ್ನೂ ಸಹಿ ಹಾಕಿಲ್ಲ. 'ಕೆಜಿಎಫ್' ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್, 'ಕೆಜಿಎಫ್' ರೀತಿಯಲ್ಲಿಯೇ ದೊಡ್ಡ ಮಟ್ಟದ ಸಿನಿಮಾಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿರ್ದೇಶಕ ನರ್ತನ್‌ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆಯಾದರೂ ಯಾವುದೂ ಇನ್ನೂ ಪಕ್ಕಾ ಆಗಿಲ್ಲ. ಈ ನಡುವೆ ಹಲವು ಜಾಹೀರಾತುಗಳಲ್ಲಿ ಯಶ್ ನಟಿಸುತ್ತಿದ್ದಾರೆ.

  English summary
  Yash video with lioness went viral on social media. Yash is in Dubai now and seen feeding a lioness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X