For Quick Alerts
  ALLOW NOTIFICATIONS  
  For Daily Alerts

  ಆಡಂಬರ, ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು 'ಮದುವೆಗೆ ಬನ್ನಿ' ಎಂದ ಯಶ್

  By Harshitha
  |

  ಸ್ಟಾರ್ ನಟ-ನಟಿಯರಿಗೆ ಏನ್ ಕಮ್ಮಿ ಹೇಳಿ... ಅದರಲ್ಲೂ ಸ್ಯಾಂಡಲ್ ವುಡ್ ನ ಟಾಪ್ ಮೋಸ್ಟ್ ತಾರೆಯರೇ ಮದುವೆ ಆಗ್ತಿದ್ದಾರೆ ಅಂದ್ರೆ ಸಾಕ್ಷಾತ್ ಇಂದ್ರಲೋಕವೇ ಧರೆಗಿಳಿದಂತೆ ಆಡಂಬರ, ವೈಭೋಗ ತುಂಬಿ ತುಳುಕಬೇಕು.

  ಗೋವಾದ ಕಡಲ-ಕಿನಾರೆಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್-ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಜೋಡಿ, ಮದುವೆಯನ್ನೂ ಅಷ್ಟೇ ಗ್ರ್ಯಾಂಡ್ ಆಗಿ ಮಾಡಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ. [ಫೋಟೋ ಆಲ್ಬಂ: ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥ]

  ಡಿಸೆಂಬರ್ 10-11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ವಿವಾಹ ಮಹೋತ್ಸವದಲ್ಲಿ ಭಾಗಿಯಾಗುವಂತೆ ಕನ್ನಡ ಚಿತ್ರರಂಗದ ಎಲ್ಲರಿಗೂ ಆಮಂತ್ರಣ ನೀಡುತ್ತಿದ್ದಾರೆ ಮದುಮಗ ಯಶ್.

  ಯಶ್ 'ಎಲೆ' ಕರೆಯೋಲೆ

  ಯಶ್ 'ಎಲೆ' ಕರೆಯೋಲೆ

  ಸಾಮಾನ್ಯವಾಗಿ ಮದುವೆಗೆ ಆಮಂತ್ರಣ ನೀಡುವುದು ಹೇಗೆ.? ಮಧ್ಯಮ ವರ್ಗದ ಕುಟುಂಬದವರಾದರೆ.. ಲಗ್ನ ಪತ್ರಿಕೆ ಜೊತೆಗೆ ಅರಿಶಿನ-ಕುಂಕುಮ ಕೊಟ್ಟು, ಏನಾದರೂ ಒಂದು ಉಡುಗೊರೆ ನೀಡ್ತಾರೆ. ಆರ್ಥಿಕವಾಗಿ ಸ್ವಲ್ಪ ಬಲಿಷ್ಟವಾಗಿರುವವರು.. ಇನ್ವಿಟೇಷನ್ ಕಾರ್ಡ್ ಜೊತೆಗೆ ಬೆಳ್ಳಿ ಭರಣಿ, ಶರ್ಟ್, ಸೀರೆ, ಬ್ಲೌಸ್ ಪೀಸ್ ಕೊಟ್ಟು ಕರೆಯುತ್ತಾರೆ. ಇದಕ್ಕಿಂತ ಒಂದು ರೇಂಜ್ ಮೇಲೆ ಹೋಗಿ ಎಲ್ಲರಿಗೂ ಯಶ್ ಆಮಂತ್ರಣ ನೀಡಬಹುದು ಅಂತ ನೀವು ಊಹಿಸಿರಬಹುದು. [ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']

  ಆಡಂಬರ ಇಲ್ಲ.. ವೈಭವ, ವೈಭೋಗ ಇಲ್ಲ.!

  ಆಡಂಬರ ಇಲ್ಲ.. ವೈಭವ, ವೈಭೋಗ ಇಲ್ಲ.!

  ಆಮಂತ್ರಣ ಪತ್ರಿಕೆ ಜೊತೆ ಎಲ್ಲರಿಗೂ ಯಶ್ ಉಡುಗೊರೆ ನೀಡ್ತಿದ್ದಾರೆ ನಿಜ. ಆದ್ರೆ, ಅದರಲ್ಲಿ ಪರಿಸರ ಪ್ರೇಮ ಇದೇ ಹೊರತು ಆಡಂಬರ, ವೈಭೋಗ, ವೈಭವ ಇಲ್ಲ. [ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ?]

  ಹೇಗೆ ಇನ್ವೈಟ್ ಮಾಡ್ತಿದ್ದಾರೆ ಯಶ್.?

  ಹೇಗೆ ಇನ್ವೈಟ್ ಮಾಡ್ತಿದ್ದಾರೆ ಯಶ್.?

  ಸಂಪಿಗೆ ಸಸಿ ಕೊಟ್ಟು, ಅದನ್ನ ನೆಡುವಂತೆ ಹೇಳುವ ಮೂಲಕ ತಮ್ಮ ಮದುವೆಗೆ ಎಲ್ಲರನ್ನೂ ಆಹ್ವಾನಿಸುತ್ತಿದ್ದಾರೆ ಯಶ್.

  ಪರಿಸರ ಪ್ರೇಮ ಪ್ರದರ್ಶಿಸಿದ ಯಶ್

  ಪರಿಸರ ಪ್ರೇಮ ಪ್ರದರ್ಶಿಸಿದ ಯಶ್

  ''ಪ್ರಕೃತಿಯಿಂದ ಎಷ್ಟೆಷ್ಟೋ ತೆಗೆದುಕೊಂಡಿರ್ತೀವಿ, ಒಂದು ಗಿಡ ವಾಪಸ್ ಕೊಡೋಣ. ಹೊಸ ವರ್ಷಕ್ಕೆ ಈ ಭೂಮಿಗೆ ನಮ್ಮ ಕಾಣಿಕೆ'' ಎಂಬ ಬರಹ ಹೊಂದಿರುವ ಕಾರ್ಡ್ ಹೊತ್ತ ಸಸಿಯನ್ನ ತಮ್ಮ ಲಗ್ನ ಪತ್ರಿಕೆ ಜೊತೆ ನೀಡುತ್ತಿದ್ದಾರೆ ಯಶ್.

  ಇದು 'ಯಶೋಮಾರ್ಗ'.!

  ಇದು 'ಯಶೋಮಾರ್ಗ'.!

  'ಯಶೋಮಾರ್ಗ' ಮೂಲಕ ಈಗಾಗಲೇ ಅನೇಕ ಸಾಮಾಜಿಕ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯಶ್, ಈಗ ಅದೇ 'ಯಶೋಮಾರ್ಗ' ಮುಖಾಂತರ ಎಲ್ಲರಿಗೂ 'ಪ್ರಕೃತಿ ಬೆಳಸಿ, ಪ್ರಕೃತಿ ಉಳಿಸಿ' ಎಂದು ಸಂದೇಶ ಸಾರುತ್ತಿದ್ದಾರೆ.

  ಆಮಂತ್ರಣ ಪತ್ರಿಕೆಯಲ್ಲೂ ಆಡಂಬರ ಇಲ್ಲ.!

  ಆಮಂತ್ರಣ ಪತ್ರಿಕೆಯಲ್ಲೂ ಆಡಂಬರ ಇಲ್ಲ.!

  ಯಶ್-ರಾಧಿಕಾ ಪಂಡಿತ್ ರವರ ಲಗ್ನಪತ್ರಿಕೆ ಕೂಡ ಅತ್ಯಂತ ಸರಳವಾಗಿದೆ. ಹಸ್ತಾಕ್ಷರದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಆಹ್ವಾನದ ನುಡಿಮುತ್ತುಗಳ ಜೊತೆಗೆ ವಧು-ವರನ ಬೆರಳಚ್ಚನ್ನ ಹೃದಯಾಕಾರವಾಗಿ ಮುದ್ರಿಸಲಾಗಿದೆ.

  ಸಂಪಿಗೆ ಸಸಿ ಜೊತೆ ಆಮಂತ್ರಣ ಪತ್ರಿಕೆ

  ಸಂಪಿಗೆ ಸಸಿ ಜೊತೆ ಆಮಂತ್ರಣ ಪತ್ರಿಕೆ

  ಸಂಪಿಗೆ ಸಸಿ ಜೊತೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆಯುತ್ತಿದ್ದಾರೆ ಯಶ್.

  ಅಣ್ಣಾವ್ರ ಕುಟುಂಬಕ್ಕೆ ಆಹ್ವಾನ

  ಅಣ್ಣಾವ್ರ ಕುಟುಂಬಕ್ಕೆ ಆಹ್ವಾನ

  ಅಣ್ಣಾವ್ರ ಮಕ್ಕಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ರವರಿಗೆ ಈಗಾಗಲೇ ಆಮಂತ್ರಣ ನೀಡಿದ್ದಾರೆ ಯಶ್.

  ಸಂಪಿಗೆ ಸಸಿ ನೆಟ್ಟ ಕುಮಾರ್ ಬಂಗಾರಪ್ಪ

  ಸಂಪಿಗೆ ಸಸಿ ನೆಟ್ಟ ಕುಮಾರ್ ಬಂಗಾರಪ್ಪ

  ಆಹ್ವಾನ ಸ್ವೀಕರಿಸಿದ ಬಳಿಕ ತಮ್ಮ ಮನೆಯ ಅಂಗಳದಲ್ಲಿಯೇ, ಯಶ್ ಸಮ್ಮುಖದಲ್ಲಿಯೇ ಸಂಪಿಗೆ ಸಸಿಯನ್ನ ನೆಟ್ಟಿದ್ದಾರೆ ನಟ ಕಮ್ ರಾಜಕಾರಣಿ ಕುಮಾರ್ ಬಂಗಾರಪ್ಪ.

  ಯಶ್-ರಾಧಿಕಾ ಪಂಡಿತ್ ಮದುವೆ ಯಾವಾಗ.?

  ಯಶ್-ರಾಧಿಕಾ ಪಂಡಿತ್ ಮದುವೆ ಯಾವಾಗ.?

  ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರ ವಿವಾಹ ಮಹೋತ್ಸವ ಡಿಸೆಂಬರ್ 10 ಹಾಗೂ 11 ರಂದು ನಡೆಯಲಿದೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಡಿಸೆಂಬರ್ 11 ರಂದು ಸಂಜೆ 7 ಗಂಟೆಯಿಂದ ಆರತಕ್ಷತೆ ನಡೆಯಲಿದೆ.

  English summary
  Rocking Star Yash spreads Environmental Awareness by distributing 'Sampige' Saplings while inviting Sandalwood Stars for his marriage with Kannada Actress Radhika Pandit. The wedding is scheduled on December 10th and 11th at Tripura Vasini, Bengaluru Palace Ground.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X