For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ ಯಶ್ ಹೆಸರು ಬದಲಾವಣೆ: ಕೆಲವರು ಟೀಕೆ, ಕೆಲವರು ಬೆಂಬಲ

  |
  KGF Kannada Movie : ಟ್ವಿಟ್ಟರ್ ನಲ್ಲಿ ಯಶ್ ಹೆಸರು ಬದಲಾವಣೆ: ಕೆಲವರು ಟೀಕೆ, ಕೆಲವರು ಬೆಂಬಲ| FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ತೆರೆಕಾಣುತ್ತಿದೆ. 'ಕನ್ನಡದ ರಾಜಾಹುಲಿ' ಈಗ ನ್ಯಾಷನಲ್ ಸ್ಟಾರ್ ಎಂದು ಹೆಮ್ಮೆ ಪಡುವಂತಾಗಿದೆ.

  ಕನ್ನಡದ ಸಿನಿಮಾವೊಂದು ಹೊರರಾಜ್ಯದಲ್ಲಿ ಇಷ್ಟು ದೊಡ್ಡದಾಗಿ ಗಮನ ಸೆಳೆಯುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಸದ್ಯ, ಕೆಜಿಎಫ್ ಸಿನಿಮಾ ಪ್ರಚಾರಕ್ಕಾಗಿ ಮುಂಬೈನಲ್ಲಿರುವ ಯಶ್, ಪ್ರತಿಯೊಂದು ಸಂದರ್ಶನದಲ್ಲೂ ಕನ್ನಡ ಸಿನಿಮಾ ಮತ್ತು ಕರ್ನಾಟಕವನ್ನ ಪ್ರತಿನಿಧಿಸುತ್ತಿದ್ದಾರೆ.

  'ಕೆಜಿಎಫ್' ಚಿತ್ರದ ಎರಡನೇ ಟ್ರೈಲರ್ ಇಂದೇ ರಿಲೀಸ್

  ಈ ಮಧ್ಯೆ ಯಶ್ ತಮ್ಮ ಟ್ವಿಟ್ಟರ್ ನಲ್ಲಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಇದು ಸಹಜವಾಗಿ ಚರ್ಚೆಗೆ ಕಾರಣವಾಗಿದೆ. ಅಣ್ತಮ್ಮ ದಿಢೀರ್ ಅಂತ ಯಾಕೆ ಹೆಸರು ಬದಲಿಸಿಕೊಂಡರು, ಕನ್ನಡದಲ್ಲಿದ್ದ ಹೆಸರು ಇಂಗ್ಲೀಷ್ ಗೆ ಯಾಕೆ ಬದಲಾಯ್ತು ಎಂದು ಕೆಲವರು ಟೀಕಿಸಿದ್ದಾರೆ. ಏನಿದು ಚರ್ಚೆ.?

  ಮುಂದೆ ಓದಿ....

  ನಿಮ್ಮ ಯಶ್ ಬದಲಾಯ್ತು

  ನಿಮ್ಮ ಯಶ್ ಬದಲಾಯ್ತು

  ರಾಕಿಂಗ್ ಸ್ಟಾರ್ ಯಶ್ ಅವರ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ನಿಮ್ಮ ಯಶ್ (Nimmayash) ಅಂತ ಇತ್ತು. ಆದ್ರೀಗ, 'ದಿ ನೇಮ್ ಈಸ್ ಯಶ್' (TheNameIsYash) ಎಂದು ಬದಲಾಗಿದೆ. ಇದು ಸಹಜವಾಗಿ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ನಿಮ್ಮ ಯಶ್ ಎಂದು ಕನ್ನಡದಲ್ಲಿ ಹೆಸರಿತ್ತು. ಬಟ್, ಈಗ ಇಂಗ್ಲೀಷ್ ನಲ್ಲಿ ಇಟ್ಟುಕೊಂಡಿದ್ದಾರೆ ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ.

  ಕೆಜಿಎಫ್ ಮೊದಲ ಹಾಡು ಬಂತು: 'ರಾಕಿ' ಭಾಯ್ ಗೆ ಸಲಾಮ್

  ತುಂಬಾ ಖುಷಿ ಇತ್ತು, ಈಗಿಲ್ಲ

  ತುಂಬಾ ಖುಷಿ ಇತ್ತು, ಈಗಿಲ್ಲ

  ಕೆಜಿಎಫ್ ಸಿನಿಮಾ ದೊಡ್ಡ ಸದ್ದು ಮಾಡುತ್ತಿರುವುದು ಮತ್ತು ಆ ಟೈಂನಲ್ಲಿ ನಿಮ್ಮ ಯಶ್ ಎಂಬ ಹ್ಯಾಂಡಲ್ ಇದ್ದದ್ದು ನೋಡಿ ನನಗೆ ತುಂಬಾ ಖುಷಿ ಆಗ್ತಿತ್ತು. ಈಗ ಅವರು ಇಂಗ್ಲೀಷ್ ನಲ್ಲಿ ಬದಲಿಸಿಕೊಂಡಿದ್ದಾರೆ. ಈ ಕೀಳರಿಮೆ ಯಾಕೆ ಎಂದು ನನಗೆ ಗೊತ್ತಾಗ್ತಿಲ್ಲ'' ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

  ನಿಜವಾದ 'ಹವಾ' ಅಂದ್ರೆ ಇದು: ಆಡಿಯೋದಿಂದಲೇ 'ಕೋಟಿ' ಬಾಚಿದ ಅಣ್ತಮ್ಮ.!

  ನಿಮ್ಮ ಬೆಳವಣಿಗೆಗೆ ಅಡ್ಡಿಯೇ.?

  ನಿಮ್ಮ ಬೆಳವಣಿಗೆಗೆ ಅಡ್ಡಿಯೇ.?

  ನಿಮ್ಮಯಶ್ ಇಂದು ದಿ ನೇಮ್ ಈಸ್ ಯಶ್ ಬದಲಾಗಿದ್ದನ್ನ ಈಗ ಗಮನಿಸುತ್ತಿದ್ದೇನೆ, ನಿಮ್ಮ ಯಶ್ ಎಂಬ ಹಳೆಯ ಹ್ಯಾಂಡಲ್ ನಿಮ್ಮ ಬೆಳವಣಿಗೆಗೆ ಅಡ್ಡಿಯಾಗುತ್ತಿದೆಯಾ ಎಂದು ಇಲ್ಲೊಬ್ಬ ವ್ಯಕ್ತಿ ಪ್ರಶ್ನಿಸಿದ್ದಾರೆ.

  'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?

  ಹೆಮ್ಮೆಯ ಕನ್ನಡಿಗ ಯಶ್

  ಹೆಮ್ಮೆಯ ಕನ್ನಡಿಗ ಯಶ್

  ಟ್ವಿಟ್ಟರ್ ಹ್ಯಾಂಡಲ್ ಬದಲಾಯಿಸುವುದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ಮತ್ತೊಬ್ಬರು ಚರ್ಚೆ ಮಾಡುವುದು ಬೇಡ. ಯಶ್ ಅವರ ನಿಮ್ಮಯಶ್ ಎಂಬ ಹ್ಯಾಂಡಲ್ ಬದಲಾಯಿಸಿದ್ದಾರೆ ಅಷ್ಟೇ. ಆದ್ರೆ, ಅವರ ಪ್ರೋಫೈಲ್ ನಲ್ಲಿ 'ಹೆಮ್ಮೆಯ ಕನ್ನಡಿಗ' (Proud Kannadiga) ಎಂಬುದು ಹಾಗೆ ಇದೆ ನೋಡಿ. ಕನ್ನಡ ಚಿತ್ರವನ್ನ ಬೆಳಸೋಕೆ ಒಂದು ಅವಕಾಶ ಸಿಕ್ಕಿದೆ, ಅದನ್ನ ಉಪಯೋಗಿಸಿ' ಎಂದು ಓರ್ವ ಅಭಿಮಾನಿ ಹೇಳಿದ್ದಾರೆ.

  ಆಲಿಯಾ-ಅನುಷ್ಕಾ ಇಬ್ಬರಲ್ಲಿ ಯಶ್ ಆಯ್ಕೆ ಮಾಡಿಕೊಂಡಿದ್ದು ಯಾರನ್ನ.?

  ಕನ್ನಡ ಚಿತ್ರದ ಬೆಳವಣಿಗೆಗೆ ಖುಷಿ ಪಡಿ

  ಕನ್ನಡ ಚಿತ್ರದ ಬೆಳವಣಿಗೆಗೆ ಖುಷಿ ಪಡಿ

  ''ದಯವಿಟ್ಟು ಇದನ್ನ ಅಪರ್ಥ ಮಾಡಿಕೊಳ್ಳುವುದು ಬೇಡ. ತಮ್ಮ ಪ್ರತಿ ಸಂದರ್ಶನದಲ್ಲೂ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಹಮ್ಮೆಯ ಮಾತುಗಳನ್ನಾಡುತ್ತಿದ್ದಾರೆ. ಅವರಿಗೆ ಇರುವ ಅಭಿಮಾನದ ಬಗ್ಗೆ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಕನ್ನಡ ಇಂಡಸ್ಟ್ರಿ ಬೆಳವಣಿಗೆ ನೋಡಿ ಮೊದಲು ಖುಷಿ ಪಡಿ'' ಎಂದು ಇನ್ನೊಬ್ಬ ಅಭಿಮಾನಿ ತರಾಟೆಗೆ ತೆಗೆದುಕೊಂಡಿದ್ದಾರೆ.

  ಕೆಜಿಎಫ್ ಟ್ರೈಲರ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಬಾಲಿವುಡ್ ನಟಿ.!

  ಹೆಸರು ಬದಲಿಸಿದರೇ ಏನಾಯ್ತು?

  ಹೆಸರು ಬದಲಿಸಿದರೇ ಏನಾಯ್ತು?

  ಸಾಮಾಜಿಕ ಜಾಲತಾಣಗಳು ಇಂದು ತುಂಬಾ ಬೆಳದಿದೆ. ಪ್ರತಿದಿನವೂ ಪ್ರತಿಕ್ಷಣವೂ ಬದಲಾವಣೆ ಬಯಸುತ್ತಿದೆ. ಹೀಗಿರುವಾಗ, ಯಶ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಬದಲಾಯಿಸಿದ್ದಲ್ಲಿ ವಿಶೇಷವೇನು ಇಲ್ಲ. ಆದ್ರೆ, ಕೆಜಿಎಫ್ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನ ಎಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬುದನ್ನ ಮಾತ್ರ ಇಲ್ಲಿ ಗಮನಿಸಬೇಕಿದೆ.

  ಕನ್ನಡದ 'ಕೆಜಿಎಫ್'ಗೆ ಚಕ್ರವ್ಯೂಹ ನಿರ್ಮಿಸಿದೆ ಈ 6 ಬಿಗ್ಗೆಸ್ಟ್ ಚಿತ್ರಗಳು.!

  English summary
  Kannada actor, rocking star Yash's twitter handle goes from NimmaYash to TheNameisYash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X