»   » ವರ್ಷವಿಡೀ ಬ್ರೇಕಿಂಗ್ ನ್ಯೂಸ್ ಮಾಡಿದ ಕನ್ನಡ ನಟ ಯಾರು?

ವರ್ಷವಿಡೀ ಬ್ರೇಕಿಂಗ್ ನ್ಯೂಸ್ ಮಾಡಿದ ಕನ್ನಡ ನಟ ಯಾರು?

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಗಾಸಿಪ್ ಗಳಿಗೆ, ಕಾಂಟ್ರೊವರ್ಸಿಗಳಿಗೇನು ಬರವೇ? ದಿನಕ್ಕೊಂದು ಗಾಸಿಪ್, ವಾರಕ್ಕೊಂದು ವಿವಾದ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಲೇ ಇರುತ್ತೆ.

ಬೇಡ ಬೇಡ ಅಂದರೂ, ಕೆಲ ಸ್ಟಾರ್ ನಟರು ವಿವಾದಗಳಿಗೆ, ಗಾಸಿಪ್ ಪಂಡಿತರ ಬಾಯಿಗೆ ಆಹಾರವಾಗ್ಬಿಡ್ತಾರೆ. ಅಂಥವರಲ್ಲಿ, ಈ ವರ್ಷ ಸಿನಿಮಾ ಹೊರತು ಪಡಿಸಿ ಇತರ ವಿಷಯಗಳಿಗೆ ಹೆಚ್ಚು ಬ್ರೇಕಿಂಗ್ ನ್ಯೂಸ್ ಮಾಡಿದವರು ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನವರಸ ನಾಯಕ ಜಗ್ಗೇಶ್ ಮತ್ತು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್.

ತಾವು ನಟಿಸಿದ ಸಿನಿಮಾ ಹೊರತಾಗಿ ಸ್ಟಾರ್ ನಟರು ಸದ್ದು-ಸುದ್ದಿ ಮಾಡಿದ ವಿವಾದಗಳ ಕಂಪ್ಲೀಟ್ ರೌಂಡಪ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

ಯಶ್ ವಿರುದ್ಧ 'ಮಂಡ್ಯ ಸ್ಟಾರ್' ಕಿಡಿ.!

ಮಂಡ್ಯ ರೈತರು ನಿರ್ಮಿಸಿರುವ 'ಮಂಡ್ಯ ಸ್ಟಾರ್' ಚಿತ್ರದ ಸಣ್ಣ ಪಾತ್ರಕ್ಕೆ ಯಶ್ ಕಾಲ್ ಶೀಟ್ ನೀಡುತ್ತಿಲ್ಲ. ಚಿತ್ರತಂಡ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಯಶ್ ಭಾಗವಹಿಸಲು ಒಪ್ಪಿಕೊಂಡಿಲ್ಲ ಎನ್ನುವ ಕಾರಣ ನೀಡಿ 'ಮಂಡ್ಯ ಸ್ಟಾರ್' ಚಿತ್ರತಂಡ ಬೀದಿಗಿಳಿದು ಯಶ್ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ ಮಾಡಿದರು.['ರಾಜಾಹುಲಿ' ಯಶ್ ವಿರುದ್ಧ ಅಣ್ತಮ್ಮಂದಿರು ತಿರುಗಿಬಿದ್ದಿರುವುದೇಕೆ?]

ಇದು ಮಸಲತ್ತೋ ಇಲ್ಲ ಗಿಮಿಕ್ಕೋ?

ಇದೀಗ 'ಮಾಸ್ಟರ್ ಪೀಸ್' ಸಿನಿಮಾ ರಿಲೀಸ್ ಆದಾಗಲೂ 'ಮಂಡ್ಯ ಸ್ಟಾರ್' ಚಿತ್ರತಂಡ ಥಿಯೇಟರ್ ಗಳ ಮುಂದೆ ಪ್ರತಿಭಟನೆ ಮಾಡಿದ್ರು. ಯಶ್ ಹೆಸರು ಹೇಳಿಕೊಂಡು 'ಮಂಡ್ಯ ಸ್ಟಾರ್' ಪಬ್ಲಿಸಿಟಿ ಗಿಮಿಕ್ ಮಾಡ್ತಿದ್ಯೋ ಅಥವಾ ಯಶ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡ್ತಿದ್ಯೋ ಗೊತ್ತಿಲ್ಲ. ಒಟ್ನಲ್ಲಿ 'ಮಂಡ್ಯ ಸ್ಟಾರ್' ನಿಂದಾಗಿ ಯಶ್ ಅನವಶ್ಯಕವಾಗಿ ಸುದ್ದಿ ಮಾಡಿದರು.[ಯಶ್ ವಿರುದ್ಧ ನಡೀತಿದೆ 'ಮಂಡ್ಯ ಸ್ಟಾರ್'ಗಳ ಮಸಲತ್ತು?]

ದರ್ಶನ್ ಹುಟ್ಟುಹಬ್ಬದ ದಿನ ಆದ ಗಲಾಟೆ

ದರ್ಶನ್ ಹುಟ್ಟುಹಬ್ಬದ ದಿನ ಮಾಧ್ಯಮದವರು ಮತ್ತು ದರ್ಶನ್ ಅಭಿಮಾನಿಗಳ ನಡುವೆ ಆದ ಗಲಾಟೆಗೆ ಓರ್ವ ವರದಿಗಾರ ಮತ್ತು ಕ್ಯಾಮರಾಮೆನ್ ಹಲ್ಲೆಗೆ ಒಳಗಾದರು. ಖಾಸಗಿ ವಾಹಿನಿಯ ಓ.ಬಿ.ವ್ಯಾನ್ ಜಖಂಗೊಂಡಿತ್ತು. ಇದರಿಂದ ಬೇಸೆತ್ತ ಮಾಧ್ಯಮದವರು ದರ್ಶನ್ ಅಭಿನಯದ 'ಜಗ್ಗುದಾದಾ' ಮುಹೂರ್ತವನ್ನ ಕವರ್ ಮಾಡಲೇ ಇಲ್ಲ.[ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?]

ಬ್ರೇಕಿಂಗ್ ನ್ಯೂಸ್ ಕೊಡ್ತೀನಿ ಅಂದ್ರು ದರ್ಶನ್!

'ಜಗ್ಗುದಾದಾ' ಮುಹೂರ್ತಕ್ಕೆ ಮಾಧ್ಯಮದವರು ಹೋಗದೇ ಇದ್ದರೂ, ಪತ್ರಕರ್ತರ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಡ್ತೀನಿ ಅಂದು ದರ್ಶನ್ ಸಿಕ್ಕಾಪಟ್ಟೆ ಸದ್ದು ಮಾಡಿದರು. ಪೂರ್ತಿ ವಿವರ ಇಲ್ಲಿದೆ ಓದಿ...[ಪತ್ರಕರ್ತರನ್ನ ಕಂಡರೆ ದರ್ಶನ್ ಉರಿದು ಬೀಳುವುದೇಕೆ?]

ದರ್ಶನ್ ತೋಟದ ಮನೆ ರಹಸ್ಯ

ಬೇಡದ ವಿಷಯಗಳಿಗೆ ಹೆಚ್ಚು ಸುದ್ದಿ ಆಗುತ್ತಿದ್ದ ದರ್ಶನ್, ತಮ್ಮ ತೋಟದಲ್ಲಿ ಕೆಲಸಕ್ಕಿದ್ದ ಮಹೇಶ್ ನ ಅನಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೊಡ್ಡ ಅಪವಾದ ಹೊತ್ತರು.[ದರ್ಶನ್ ತೋಟದ ಮನೆಯಲ್ಲಿ ಆಗಿದ್ದೇನು? ಫುಲ್ ಸ್ಟೋರಿ]

ಮಿಸ್ಟರ್. ಐರಾವತ ಕಿರಿಕ್!

ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಸಿನಿಮಾ ತಡವಾಗುತ್ತಿರುವುದಕ್ಕೆ ನಿರ್ದೇಶಕ ಎ.ಪಿ.ಅರ್ಜುನ್ ಕಾರಣ ಅಂತ ದರ್ಶನ್ ಅಭಿಮಾನಿಗಳು ದೂರಿದ್ರಿಂದ ಮತ್ತೆ 'ದಾಸ' ಸುದ್ದಿಗೆ ಗ್ರಾಸವಾದರು.[ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]

ದರ್ಶನ್ ಒಳ್ಳೆಯದ್ದೇ ಬಯಸಿದ್ರೂ ವಿವಾದ ಆಯ್ತು.!

ನಟರ ಜೊತೆ 'ಉತ್ತಮ ಖಳನಟ'ರಿಗೂ ಪ್ರಶಸ್ತಿ ನೀಡಬೇಕು ಎನ್ನುವ ಬೇಡಿಕೆ ಇಟ್ಟರು ದರ್ಶನ್. ಖಳನಟನ ಪುತ್ರನಾಗಿ ದರ್ಶನ್ ಈ ಬೇಡಿಕೆ ಇಟ್ಟಿದ್ರಲ್ಲಿ ತಪ್ಪಿಲ್ಲ. ಆದರೂ, ಇದೇ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ವಿವಾದ ಭುಗಿಲೆದ್ದಿತು. ಅದಕ್ಕೆ ಕಾರಣ ನಿರ್ದೇಶಕ ಪಿ.ಶೇಷಾದ್ರಿ.[ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ]

ತೊಡೆ ತಟ್ಟಿದ ಜಗ್ಗೇಶ್.!

'ಖಳನಟ'ರಿಗೆ ಪ್ರಶಸ್ತಿ ನೀಡಬಾರದು ಅಂತ ನಿರ್ದೇಶಕ ಪಿ.ಶೇಷಾದ್ರಿ ಸರ್ಕಾರಕ್ಕೆ ಪತ್ರ ಬರೆದರು. ಈ ವಿಚಾರ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಜಗ್ಗೇಶ್, ಟ್ವಿಟ್ಟರ್ ನಲ್ಲಿ ಪಿ.ಶೇಷಾದ್ರಿ ವಿರುದ್ಧ ಟೀಕಾ ಪ್ರಹಾರ ಶುರು ಮಾಡಿದರು.[ಶೇಷಾದ್ರಿ ವಿರುದ್ಧ 'ನವರಸ ನಾಯಕ'ನ ಟ್ವಿಟ್ಟರ್ ಪ್ರಹಾರ]

ಯಶ್ ಕಾರಿನ ಮೇಲೆ ದಾಳಿ!

ಅದು ಎಲ್ಲೆಲ್ಲೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹವಾ ಇದ್ದ ಟೈಮು. ಅಂದ್ರೆ, ಸಿನಿಮಾ ರಿಲೀಸ್ ಆಗಿ ಎಲ್ಲಾ ಚಿತ್ರಮಂದಿರಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿರುವಾಗಲೇ ಯಶ್ ಕಾರಿನ ಮೇಲೆ ಕಲ್ಲು ತೂರಿ ದಾಂಡಿಗರು ದಾಳಿ ನಡೆಸಿದ ಸುದ್ದಿ, ನಂತರ ಆದ ಬೆಳವಣಿಗೆ ನಿಮಗೆಲ್ಲಾ ಗೊತ್ತೇ ಇದೆ.[ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

ಎ.ಪಿ.ಅರ್ಜುನ್-ದರ್ಶನ್ ನಡುವೆ ಏನೇನಾಯ್ತು?

'ಮಿಸ್ಟರ್ ಐರಾವತ' ರಿಲೀಸ್ ಆಗುವವರೆಗೂ ಚಿತ್ರತಂಡದಲ್ಲಿ ಆಗಿದೆ ಎನ್ನಲಾದ ಕಿರಿಕ್ ಗಳು ಒಂದೆರಡಲ್ಲ. ಎ.ಪಿ.ಅರ್ಜುನ್ ಮತ್ತು ದರ್ಶನ್ ನಡುವೆ ಕಿರಿಕ್, ದರ್ಶನ್ ಕೊಟ್ಟ ವಾರ್ನಿಂಗ್, ಗೂಸಾ ತಿಂದ ಅರ್ಜುನ್.....ಇವೆಲ್ಲಾ ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದ್ರೆ, ಸುದ್ದಿ ಆಗಿದ್ದಂತೂ ನಿಜ.[ದರ್ಶನ್ ಮತ್ತು ಎ.ಪಿ.ಅರ್ಜುನ್ ಮಧ್ಯೆ ತಂದಿಟ್ಟವರಾರು?]

ಯಶ್ ಮನೆ ಬಾಡಿಗೆ ಕಥೆ

ನಂ.755, 5 ನೇ ಕ್ರಾಸ್, 3 ನೇ ಬ್ಲಾಕ್, 3 ನೇ ಹಂತ, ಬನಶಂಕರಿಯಲ್ಲಿ ವಾಸವಿರುವ ಮನೆಗೆ ಯಶ್ ಮತ್ತು ಕುಟುಂಬ ಬಾಡಿಗೆ ನೀಡುತ್ತಿಲ್ಲ ಅಂತ ಮನೆ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದ ಸಂಗತಿಯನ್ನ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ನೀವು ನೋಡೇ ಇರ್ತಿರಾ.['ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!']

ಯಶ್ ಮನೆಗೆ ಬಾಂಬ್?

ಬಾಡಿಗೆ ಪುರಾಣದ ನಂತರ ಯಶ್ ಮತ್ತೆ ಹೆಡ್ ಲೈನ್ಸ್ ಮಾಡಿದ್ದು, ಅವರ ಮನೆಗೆ ಬಾಂಬ್ ಬೆದರಿಕೆ ಕರೆ ಬಂದ ಮೇಲೆ.[ನಟ ಯಶ್ ಮನೆಗೆ ಬಾಂಬ್ ಇಟ್ಟವರು ಯಾರು?]

ಉಪೇಂದ್ರ v/s ಜಗ್ಗೇಶ್!

'ಎಲ್ರ ಕಾಲೆಳೀತದೆ ಕಾಲ' ಅಂತ ಉಪೇಂದ್ರ ಹಾಡಿಬಿಟ್ಟರು. ಅದರಿಂದ ಬೇಸರಗೊಂಡ ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಶುರು ಮಾಡಿದರು.[ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್]

ಟ್ವಿಟ್ಟರ್ ನಲ್ಲಿ ನಡೆದೇ ಹೋಯ್ತು ಯುದ್ಧ.!

ಜಗ್ಗೇಶ್ ಬಿಡುತ್ತಿದ್ದ ಟ್ವೀಟ್ ಬ್ರಹ್ಮಾಸ್ತ್ರಕ್ಕೆ ಉಪೇಂದ್ರ ಅಭಿಮಾನಿಗಳು ಸಿಡಿದೆದ್ದರು. ಅಲ್ಲಿಂದ ಟ್ವಿಟ್ಟರ್ ನಲ್ಲಿ ಆದ ಗದ್ದಲ ಮರೆಯುವ ಹಾಗಿಲ್ಲ.[ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ]

ಫ್ಲ್ಯಾಶ್ ಬ್ಯಾಕ್ ಗೆ ಹೋದ ಜಗ್ಗೇಶ್

ಉಪೇಂದ್ರ ಅಭಿಮಾನಿಗಳಿಂದ ಬರುತ್ತಿದ್ದ ಕಾಮೆಂಟ್ಸ್ ಮತ್ತು ಟ್ವೀಟ್ಸ್ ನಿಂದಾಗಿ ನಟ ಜಗ್ಗೇಶ್, ಉಪೇಂದ್ರ ನಿರ್ದೇಶಕರಾದ ಅಸಲಿ ಕಹಾನಿಯನ್ನ ಬಯಲು ಮಾಡಿದರು.[ಫೇಸ್ ಬುಕ್ ನಲ್ಲಿ ನಟ ಜಗ್ಗೇಶ್ ಬಯಲು ಮಾಡಿದ ಸತ್ಯ]

ಉಪೇಂದ್ರ-ಜಿತೇಂದ್ರ ಕಥೆ

ಉಪೇಂದ್ರ-ಜಿತೇಂದ್ರ ಕಥೆಯನ್ನೂ ಬಿಚ್ಚಿಟ್ಟು ಜಗ್ಗೇಶ್ 24*7 ಸುದ್ದಿ ಮಾಡಿದರು.['ಉಪೇಂದ್ರ' ವಿರುದ್ಧ ಜಗ್ಗೇಶ್ 'ಜಿತೇಂದ್ರ' ಆಗಿದ್ದು ಹೇಗೆ?]

ಕೇಸ್ ಹಾಕಿದ್ರು! ಫೇಸ್ ಬುಕ್ ನಿಂದ ಹೊರಬಂದ್ರು!

ಅವಾಚ್ಯ ಶಬ್ಧಗಳನ್ನು ಬಳಸಿ ಕಾಮೆಂಟ್ ಮಾಡುತ್ತಿದ್ದ ಕೆಲವರ ಮೇಲೆ ಗರಂ ಆದ ಜಗ್ಗೇಶ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು. ಇನ್ನೂ ಕೆಲವರ ಕಿರಿಕಿರಿ ತಾಳಲಾರದೆ ಜಗ್ಗೇಶ್ ಫೇಸ್ ಬುಕ್ ಗೆ ಗುಡ್ ಬೈ ಹೇಳಿಬಿಟ್ಟರು.[ವಿಷಾದದೊಂದಿಗೆ ಫೇಸ್ ಬುಕ್ಕಿಗೆ ಜಗ್ಗೇಶ್ ಗುಡ್ ಬೈ]

ಹುಚ್ಚ ವೆಂಕಟ್ ರನ್ನ ಮರೆಯೋಕೆ ಸಾಧ್ಯವೇ?

'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟು, ಅಲ್ಲಿ ಪೂಜಾ ಗಾಂಧಿ, ರವಿ ಮುರೂರು ಜೊತೆ ಕಿರಿಕ್ ಮಾಡಿಕೊಂಡು, 'ಬಿಗ್ ಬಾಸ್' ಮನೆಯಿಂದ ಹೊರಬಂದು, ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಗಂಟೆಗಟ್ಟಲೆ ಕೂತು, ಅಲ್ಲಿಂದ ನೇರವಾಗಿ ಸೆರೆಮನೆಗೆ ತೆರಳಿ, ನಂತರ ಮತ್ತೆ ನ್ಯೂಸ್ ಚಾನೆಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಮಾಡಿ, 'ಹುಚ್ಚ ವೆಂಕಟ್' ಸಿನಿಮಾ ರೀ ರಿಲೀಸ್ ಮಾಡಿ, 'ಪರಪಂಚ' ಚಿತ್ರಕ್ಕೆ ಹಾಡು ಹಾಡಿದ ಹುಚ್ಚ ವೆಂಕಟ್....ಕಳೆದ ಎರಡು ತಿಂಗಳಲ್ಲಿ ಮಾಡಿದ ಸಾಧನೆ.[ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಯಶ್ ಪೋಸ್ಟರ್ ಗಲಾಟೆ!

'ಮಾಸ್ಟರ್ ಪೀಸ್' ಬಿಡುಗಡೆ ಟೈಮ್ ನಲ್ಲಿ 'ಜಾತ್ರೆ' ಚಿತ್ರದ ಕಟೌಟ್, ಪೋಸ್ಟರ್ ಗಳನ್ನ ಕಿತ್ಹಾಕಿದ್ದಕ್ಕೆ ಯಶ್ ಮತ್ತೊಮ್ಮೆ ಹೆಡ್ ಲೈನ್ಸ್ ಮಾಡಿದ್ರು.[ಮುಯ್ಯಿಗೆ ಮುಯ್ಯಿ; ಯಶ್ 'ಮಾಸ್ಟರ್ ಪೀಸ್' ಕಟೌಟ್ ಪೀಸ್ ಪೀಸ್!]

ಇವರಲ್ಲಿ ವಿವಾದಾತ್ಮಕ ನಟ ಯಾರು?

'ಸಿನಿಮಾ' ಹೊರತು ಪಡಿಸಿ ಬೇಡದ ವಿಚಾರಕ್ಕೆ ಸ್ಟಾರ್ ನಟರು ಸುದ್ದಿಗೆ ಗ್ರಾಸವಾದರು. ಇವರಲ್ಲಿ ವರ್ಷದ ವಿವಾದಾತ್ಮಕ ನಟ ಪಟ್ಟ ಯಾರಿಗೆ ಕೊಡುತ್ತೀರಾ? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Many Controversies racked Sandalwood in 2015. Leading Actors such as Yash, Darshan, Jaggesh and Huccha Venkat made headlines due to several controversies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada