»   » 2015 ರ ಅತ್ತ್ಯುತ್ತಮ ಕನ್ನಡ ನಟ ಯಾರು?

2015 ರ ಅತ್ತ್ಯುತ್ತಮ ಕನ್ನಡ ನಟ ಯಾರು?

Posted By:
Subscribe to Filmibeat Kannada

ಬಾಲಿವುಡ್, ಕಾಲಿವುಡ್, ಟಾಲಿವುಡ್...ಯಾವ ಚಿತ್ರರಂಗಕ್ಕಿಂತ್ಲೂ ನಮ್ ಸ್ಯಾಂಡಲ್ ವುಡ್ ಈಗ ಕಮ್ಮಿಯಾಗೇನೂ ಉಳಿದಿಲ್ಲ. 2015 ರಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಅದರಲ್ಲಿ ಸ್ವಮೇಕ್ ಸಿನಿಮಾಗಳದ್ದೇ ಹೆಚ್ಚಿನ ಪಾರುಪತ್ಯ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಈ ವರ್ಷ ಸ್ವಮೇಕ್ ಸಿನಿಮಾಗಳಿಗೆ ಪ್ರಾಮುಖ್ಯತೆ ನೀಡಿದ್ದರು. [ವರ್ಷವಿಡೀ ಬ್ರೇಕಿಂಗ್ ನ್ಯೂಸ್ ಮಾಡಿದ ಕನ್ನಡ ನಟ ಯಾರು?]

'ವಜ್ರಕಾಯ', 'ರಣವಿಕ್ರಮ', 'ಮೈತ್ರಿ', 'ಮಾಸ್ಟರ್ ಪೀಸ್', 'ರಥಾವರ' ದಂತಹ ಸ್ವಮೇಕ್ ಚಿತ್ರಗಳು ಈ ವರ್ಷ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ವು. ಅವುಗಳಲ್ಲಿ ಮಿಂಚಿದ ಸ್ಟಾರ್ ನಟರುಗಳ ಪೈಕಿ ಯಾರಿಗೆ ನೀವು ನಂಬರ್.1 ಸ್ಥಾನ ಕೊಡ್ತೀರಾ?

2015 ರಲ್ಲಿ ಉತ್ತಮ ಅಭಿನಯ ನೀಡಿದ ನಟರ ಪಟ್ಟಿ ಕೆಳಗಿರುವ ಸ್ಲೈಡ್ ಗಳಲ್ಲಿದೆ. ಅವುಗಳಲ್ಲಿ ನಿಮ್ಮ ಪ್ರಕಾರ ಈ ವರ್ಷದ ಅತ್ತ್ಯುತ್ತಮ ನಟ ಯಾರು ಅಂತ ನಮಗೆ ತಿಳಿಸಿ.....

ಪುನೀತ್ ರಾಜ್ ಕುಮಾರ್

'ರಣವಿಕ್ರಮ' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮತ್ತು 'ಮೈತ್ರಿ' ಸಿನಿಮಾದಲ್ಲಿ ಖುದ್ದು ತಾವಾಗೇ ಕಾಣಿಸಿಕೊಂಡಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಎರಡೂ ಚಿತ್ರಗಳಲ್ಲಿ ಸಹಜ ಅಭಿನಯ ನೀಡಿದ ಅಪ್ಪು ಈ ವರ್ಷದ ಅತ್ತ್ಯುತ್ತಮ ನಟ ಅನ್ಬಹುದಾ?[ಚಿತ್ರ ವಿಮರ್ಶೆ: 'ರಣವಿಕ್ರಮ' ಪವನ್ ಇನ್ನೊಂದು ಗೂಗ್ಲಿ]

ಶಿವರಾಜ್ ಕುಮಾರ್

'ವಜ್ರಕಾಯ' ಸಿನಿಮಾದಲ್ಲಿ ಸಖತ್ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದರು. ವಯಸ್ಸು ಅರ್ಧ ಸೆಂಚುರಿ ದಾಟಿದ್ರೂ, ಡ್ಯಾನ್ಸ್ ಮತ್ತು ಸ್ಟಂಟ್ಸ್ ನಲ್ಲಿ ಶಿವಣ್ಣ ಸೂಪರ್ ಅಂತೀರಾ?[ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!]

ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ 'ಉಪ್ಪಿ-2' ತಿನ್ನಿಸಿದ್ರು. ಉಪ್ಪಿಟ್ಟಿನ ರುಚಿ ಜೊತೆ ಉಪ್ಪಿ ಅಭಿನಯ ನಿಮಗೆ ಹೇಗೆ ಅನಿಸ್ತು?[ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]

ದರ್ಶನ್

'Mr.ಐರಾವತ' ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದ ದರ್ಶನ್ ಆಕ್ಟಿಂಗ್ ಹೇಗಿತ್ತು?[ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']

ಸಂಚಾರಿ ವಿಜಯ್

'ನಾನು ಅವನಲ್ಲ...ಅವಳು' ಸಿನಿಮಾದಲ್ಲಿ ಮಂಗಳಮುಖಿಯಾಗಿ ನೀಡಿದ ಅಮೋಘ ಅಭಿನಯಕ್ಕೆ ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ಪಡೆದರು. ನೀವೂ ಸಂಚಾರಿ ವಿಜಯ್ ಆಕ್ಟಿಂಗ್ ಗೆ ಬೌಲ್ಡ್ ಆಗಿದ್ದೀರಾ?[ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']

ಸುದೀಪ್

ರೀಮೇಕ್ ಚಿತ್ರವಾಗಿದ್ದರೂ, 'ರನ್ನ' ಸಿನಿಮಾದಲ್ಲಿ ಸುದೀಪ್ ಖದರ್ ಗೆ ಫ್ಯಾನ್ಸ್ ಫಿದಾ ಆಗಿದ್ದರು. ನೀವೇನ್ ಹೇಳ್ತೀರಾ?[ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]

ಶ್ರೀಮುರಳಿ

ಈ ವರ್ಷ 'ರಥಾವರ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತು. ಹಾಗಾದ್ರೆ, ಶ್ರೀಮುರಳಿ ಅಭಿನಯ ನಿಮಗೆ ಖುಷಿ ನೀಡಿದೆ ಅಂತ ಅರ್ಥನಾ?[ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]

ಯಶ್

ಸದ್ಯ ಎಲ್ಲೆಲ್ಲೂ 'ಮಾಸ್ಟರ್ ಪೀಸ್' ಹವಾ. ದೇಶಪ್ರೇಮಿಯಾಗಿ ರಫ್ ಅಂಡ್ ಟಫ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಯಶ್ ನಿಮಗೆ ಇಷ್ಟನಾ?[ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]

ದುನಿಯಾ ವಿಜಯ್

'ಜಾಕ್ಸನ್' ಮತ್ತು 'ಆರ್.ಎಕ್ಸ್.ಸೂರಿ' ಚಿತ್ರದಲ್ಲಿನ ದುನಿಯಾ ವಿಜಯ್ ನಟನೆ ಹೇಗಿದೆ?

ಶರಣ್

ಸದಾ ಕಾಮಿಡಿ ಕಚಗುಳಿ ಇಡುವ ಶರಣ್ ರವರ 'ಬುಲೆಟ್ ಬಸ್ಯಾ' ಅವತಾರ ನಿಮಗೆ ಇಷ್ಟವಾಯ್ತಾ?

ಅಜಯ್ ರಾವ್

'ಕೃಷ್ಣಲೀಲಾ' ಸಿನಿಮಾ ಶತದಿನೋತ್ಸವ ಆಚರಿಸಿತು. ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಅಜಯ್ ರಾವ್ ನೀಡಿದ ಅಭಿನಯದ ಹೇಗಿದೆ?['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]

ಗಣೇಶ್

'ಬುಗುರಿ' ಮತ್ತು 'ಖುಷಿ ಖುಷಿಯಾಗಿ' ಸಿನಿಮಾದಲ್ಲಿ ಗಣೇಶ್ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಅವರ ಅಭಿನಯದ ಬಗ್ಗೆ ಏನ್ ಹೇಳ್ತೀರಾ.

ನಿಮ್ಮ ಪ್ರಕಾರ ಬೆಸ್ಟ್ ಹೀರೋ ಯಾರು?

ಈ ಎಲ್ಲಾ ನಟರ ಪೈಕಿ 'ಬೆಸ್ಟ್ ಹೀರೋ-2015' ಪಟ್ಟ ಯಾರಿಗೆ ನೀಡಬಹುದು? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Who is the Best Actor of Sandalwood in 2015. Tell us your choice.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada