ಓಟು ಕೇಳಲು ಮನೆ ಮನೆಗೆ ಬರ್ತಾರೆ 'ಯೋಗರಾಜ್ ಭಟ್ರು'
Recommended Video

ಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ರಾಜಕೀಯ ಗಣ್ಯರು ತಮ್ಮ ಪಕ್ಷಗಳ ಪ್ರಚಾರ ಕಾರ್ಯಕ್ಕೆ ಹೊಸ ತಂತ್ರಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ರಾಜಕೀಯಕ್ಕೂ ಸಿನಿಮಾರಂಗಕ್ಕೂ ಬಿಡದ ನಂಟು, ಈ ಬಾರಿ ನಿಮ್ಮ ಮನೆಯಂಗಳಕ್ಕೆ ಓಟನ್ನ ಕೇಳಲು ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಯೋಗರಾಜ್ ಭಟ್ ಬರಲಿದ್ದಾರೆ.
ಹಾಗಾದರೆ ಯೋಗರಾಜ್ ಭಟ್ ಚುನಾವಣೆಯಲ್ಲಿ ಭಾಗಿ ಆಗುತ್ತಾರಾ? ಅನ್ನುವ ಪ್ರಶ್ನೆ ಈಗಾಗಲೇ ನಿಮಲ್ಲಿ ಮೂಡಿರುತ್ತೆ. ಭಟ್ರು ಮತಗಳನ್ನ ಕೇಳಲು ಬರ್ತಿದ್ದಾರೆ ಆದರೆ ಯಾವುದೇ ಪಕ್ಷದ ಪರವಾಗಿಯೂ ಅಲ್ಲ. ನಿಮ್ಮ ಮತ ಅಮೂಲ್ಯವಾದದ್ದು ಅದನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಲಿದ್ದಾರೆ.
ಎಲೆಕ್ಷನ್ ಕಮೀಶನ್ ಪಂಚತಂತ್ರ ಚಿತ್ರತಂಡ ಹಾಗೂ ಯೋಗರಾಜ್ ಭಟ್ಟರನ್ನ ಈ ವರ್ಷದ ಅಸೆಂಬ್ಲಿ ಎಲೆಕ್ಷನ್ ಗೆ ಅದ್ಭುತವಾದ ಗೀತ ರಚನೆ ಮಾಡಲು ಹಾಗು ಹಾಡನ್ನು ಚಿತ್ರೀಕರಿಸಲು ಆಯ್ಕೆ ಮಾಡಿದೆ. ಅದಕ್ಕಾಗಿ ಈಗಾಗಲೇ ಭಟ್ಟರು ತಯಾರಿ ಮಾಡಿಕೊಂಡಿದ್ದು ಗೀತರಚನೆಯ ಕೆಲಸ ಶುರುವಾಗಿದೆಯಂತೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಚಿತ್ರೀಕರಣ ಮಾಡಲು ಚಿಂತನೆ ನಡೆಸಿದ್ದು ಶೂಟಿಂಗ್ ಗೂ ಚಾಲನೆ ಕೊಟ್ಟಿದ್ದಾರೆ. ಈ ಹಾಡಿಗೆ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ.

ದೃಶ್ಯ ಮಾಧ್ಯಮ ಅತ್ಯಂತ ಪ್ರಭಾವಿ ಮಾಧ್ಯಮ ಎಂದು ತಿಳಿದಿರುವ ಎಲೆಕ್ಷನ್ ಕಮೀಶನ್ ಈ ವಿಶೇಷ ಪ್ರಯೋಗಕ್ಕೆ ಮುಂದಾಗಿದೆ. ಒಂದು ಹಾಡಿನ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಯೋಚನೆ ವಿಭಿನ್ನವಾಗಿದ್ದು ಈ ಬಾರಿ ಚುನಾವಣೆಯಲ್ಲಿ ಭಟ್ಟರ ಹಾಡು ಸೌಂಡು ಮಾಡಲಿದೆ.


Click it and Unblock the Notifications











