»   » 'ದೊಡ್ಮನೆ ಹುಡ್ಗ' ಬಗ್ಗೆ ಯೋಗರಾಜ್ ಭಟ್ ಬಾಯಿಂದ ಸಿಡಿದ ನಗೆ ಬಾಂಬ್!

'ದೊಡ್ಮನೆ ಹುಡ್ಗ' ಬಗ್ಗೆ ಯೋಗರಾಜ್ ಭಟ್ ಬಾಯಿಂದ ಸಿಡಿದ ನಗೆ ಬಾಂಬ್!

Posted By:
Subscribe to Filmibeat Kannada

'ದೊಡ್ಮನೆ ಹುಡ್ಗ' ಸಿನಿಮಾ ಸೆಟ್ಟೇರಿ ವರ್ಷದ ಮೇಲಾಗಿದ್ದರೂ, ಚಿತ್ರದ ಮೊದಲ ಪತ್ರಿಕಾಗೋಷ್ಟಿ ನಡೆದದ್ದು ನಿನ್ನೆ (ಆಗಸ್ಟ್ 25). ಅದು ಬೆಂಗಳೂರಿನ ಹೋಟೆಲ್ ಸಿಟಾಡೆಲ್ ನಲ್ಲಿ.

ಪತ್ರಿಕಾಗೋಷ್ಟಿ ಹಾಗೂ ಟ್ರೈಲರ್ ಲಾಂಚ್...ಎರಡು ಒಟ್ಟೊಟ್ಟಿಗೆ ಹಮ್ಮಿಕೊಂಡಿದ್ದ ದುನಿಯಾ ಸೂರಿ, ಸಿಟಾಡೆಲ್ ಹೋಟೆಲ್ ನ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಗಡಿಬಿಡಿಯಿಂದ ಓಡಾಡುತ್ತಿದ್ದರು. ಅವರ ಮುಖದ ಮೇಲೆ ಟೆನ್ಷನ್ ಕಾಣ್ತಿತ್ತು. [ಅಂಬರೀಶ್ ಹುಟ್ಟುಹಬ್ಬಕ್ಕೆ 'ದೊಡ್ಮನೆ'ಯಿಂದ ಸಿಕ್ಕ ಉಡುಗೊರೆ ಇದು.!]


Yogaraj Bhat eases Duniya Soori's tension in a witty way

ಸೂರಿ ಪರಿಸ್ಥಿತಿಯನ್ನ ಕಣ್ಣಾರೆ ಕಂಡ ಯೋಗರಾಜ್ ಭಟ್ರು, ಸೂರಿ ರವರನ್ನ ಸಮಾಧಾನ ಮಾಡುವ ಭರದಲ್ಲಿ, ''ಯಾಕೋ ಹೆದರಿಕೊಳ್ತೀಯಾ? ಯಾಕೆ ಟೆನ್ಷನ್ ಮಾಡಿಕೊಳ್ತೀಯಾ.? ಪುನೀತ್ ಸರ್ ಇದ್ದಾರೆ, ಅಂಬರೀಶ್ ಸರ್ ಇದ್ದಾರೆ ನಿನ್ನ ಸಿನಿಮಾದಲ್ಲಿ. ಸಿನಿಮಾ ರಿಲೀಸ್ ಆಗದೇ ಇದ್ದರೂ, ಜನ ಥಿಯೇಟರ್ ಗೆ ಬಂದು ಹೋಗ್ತಾರೆ. ಟೆನ್ಷನ್ ಮಾಡಿಕೊಳ್ಳಬೇಡ'' ಅಂತ ಹೇಳ್ಬಿಟ್ರು. ['ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್]


ಭಟ್ರು ಸಿಡಿಸಿದ ಬಾಂಬ್ ಗೆ ಅಲ್ಲಿದ್ದವರ ನಗೆ ಸ್ಫೋಟ.![ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]

English summary
During the First Press meet of 'Doddmane Hudga' held at Hotel Citadel on August 25th, Director Yogaraj Bhat eases Duniya Soori's tension in a witty way.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada