Don't Miss!
- News
ಫೇಸ್ಬುಕ್ ಪ್ರೀತಿ: ಉತ್ತರ ಪ್ರದೇಶದ ಯುವಕನನ್ನು ಮದುವೆಯಾಗಲು ಸ್ವೀಡನ್ನಿಂದ ಬಂದ ಯುವತಿ
- Sports
U-19 Women's T20 World Cup: ಭಾರತ vs ಇಂಗ್ಲೆಂಡ್ ಫೈನಲ್ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿವಾದಾತ್ಮಕ ಆಡಿಯೋ ಬಳಿಕ 'ಪದವಿ ಪೂರ್ವ' ಸಿನಿಮಾಗೆ ಮುಹೂರ್ತವಿಟ್ಟ ಯೋಗರಾಜ್ ಭಟ್!
ಯೋಗರಾಜ್ ಭಟ್ ಸಿನಿಮಾಗಳನ್ನು ನೋಡೋಕೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಆದರೆ, ಈ ಬಾರಿ ಭಟ್ಟರು ಸಿನಿಮಾ ನಿರ್ದೇಶನ ಮಾಡಿಲ್ಲ. ಬದಲಿಗೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅದೇ ಸಿನಿಮಾಗಾಗಿ ಕೆಲವು ದಿನಗಳ ಹಿಂದಷ್ಟೇ ವಿವಾದಕ್ಕೂ ಸಿಲುಕಿದ್ದರು.
ಇತ್ತೀಚೆಗೆ ಯೋಗರಾಜ್ ಭಟ್ ಜೀ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್‌ಗೆ ಬೈದಿರೋ ಆಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ 'ಪದವಿ ಪೂರ್ವ' ಅನ್ನೋ ಸಿನಿಮಾದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಸಿನಿಮಾವನ್ನು ಸ್ಯಾಟಲೈಟ್ ಹಕ್ಕಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದೇ ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ.
ಭಟ್ರು-ರಾಘವೇಂದ್ರ
ವಿವಾದ:
ಟಿವಿ
ಹಕ್ಕುಗಳಿಗಾಗಿಯೇ
ಸಿನಿಮಾ
ಮಾಡ್ತಿದ್ದಾರಾ?
ಥಿಯೇಟರ್
ಕಥೆಯೇನು?
ಆಡಿಯೋ ವಿವಾದಕ್ಕೆ ಸಿಲುಕಿದ ಬಳಿಕ ಯೋಗರಾಜ್ ಭಟ್ಟರು ರೊಚ್ಚಿಗೆದ್ದಿದ್ದಾರೆ. ಅವಾಂತರ ಸೃಷ್ಟಿಯಾದ ಕೆಲವೇ ದಿನಗಳ ಬಳಿಕ 'ಪದವಿ ಪೂರ್ವ' ಸಿನಿಮಾವನ್ನು ಗ್ರ್ಯಾಂಡ್ ರಿಲೀಸ್ ಮಾಡೋಕೆ ಸಜ್ಜಾಗಿ ನಿಂತಿದ್ದಾರೆ. ಅಷ್ಟಕ್ಕೂ ಪದವಿ ಪೂರ್ವ ರಿಲೀಸ್ ಯಾವಾಗ? ಸಿನಿಮಾ ಹೈಲೈಟ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಯೂಥ್‌ಪುಲ್ ಸಿನಿಮಾ 'ಪದವಿ ಪೂರ್ವ'
ಯೋಗರಾಜ್ ಭಟ್ ನಿರ್ದೇಶಿಸಿದ 'ಪದವಿ ಪೂರ್ವ' ಸಿನಿಮಾವನ್ನು ಅವರ ಗರಡಿಯಲ್ಲಿ ಪಳಗಿದ ಹರಿಪ್ರಸಾದ್ ಜಯಣ್ಣ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಭಟ್ಟರ ಮಾರ್ಗದರ್ಶನವಿದೆ. ಅಂದ್ಹಾಗೆ ಇದು ಹದಿಹರೆಯದ ಲವ್ ಸ್ಟೋರಿ. ಹೊಸ ಪ್ರತಿಭೆಗಳನ್ನು ಇಟ್ಕೊಂಡು ಸಿನಿಮಾ ಮಾಡಿದ್ದಾರೆ. ಇದೇ ಸಿನಿಮಾ ಈಗ ಬಿಡುಗಡೆ ಸಜ್ಜಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರತಿಭೆಗಳ ಬಗ್ಗೆ ಚರ್ಚೆ ಶುರುವಾಗಿದೆ.
ಛೆ..
ಈ
ಸಿನಿಮಾಗಳಲ್ಲಿ
ಪುನೀತ್
ರಾಜ್‌ಕುಮಾರ್
ನಟಿಸಿದ್ದರೆ
ಎಷ್ಟು
ಚೆನ್ನಾಗಿರುತ್ತಿತ್ತು
ಅಲ್ವಾ!

'ಪದವಿ ಪೂರ್ವ' ಸ್ಟಾರ್ ಕಾಸ್ಟ್ ಏನು?
'ಪದವಿ ಪೂರ್ವ' ಸಿನಿಮಾ ಗಮನ ಸೆಳೆಯೋಕೆ ಮೊದಲ ಕಾರಣ ಯೋಗರಾಜ್ ಭಟ್. ಇನ್ನು ಎರಡನೇ ಕಾರಣ, ಹೊಸ ಪ್ರತಿಭೆಗಳು. ಪೃಥ್ವಿ ಶ್ಯಾಮನೂರ್ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಅಂಜಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ 'ಮಾನ್ಸೂನ್ ರಾಗ' ಹಾಗೂ 'ಭೈರಾಗಿ' ಸಿನಿಮಾಗಳಲ್ಲಿ ಮಿಂಚಿರೋ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟಿ ಯಶ ಶಿವಕುಮಾರ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅರ್ಜುನ್ ಜನ್ಯ ಮ್ಯೂಸಿಕ್
'ಪದವಿ ಪೂರ್ವ' ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ. ಸಿನಿಮಾ ಹಾಡುಗಳು ಕೂಡ ಹೈಲೈಟ್. ಹೀಗಾಗಿ ಹಾಡುಗಳ ಬಗ್ಗೆ ದೊಡ್ಡ ನಿರೀಕ್ಷೆಯೇ ಇದೆ. ಟೀನೇಜ್ ಲವ್ ಸ್ಟೋರಿಯನ್ನು ಕ್ಯಾಮರಾಮನ್ ಸಂತೋಷ್ ರೈ ಪಾತಾಜೆ ಬ್ಯೂಟಿಫುಲ್ಲಾಗಿ ಕಟ್ಟಿಕೊಟ್ಟಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ಬರೆದು, ವಿಜಯ್ ಪ್ರಕಾಶ್ ಹಾಡಿರೋ ಫ್ರೆಂಡ್‌ಶಿಪ್ ಹಾಡು ಈಗಾಗ್ಲೆ ರಿಲೀಸ್ ಆಗಿ ಜನಪ್ರಿಯವಾಗಿದೆ.
ಶಿವಣ್ಣ+
ಪ್ರಭುದೇವ+
ರಾಕ್‌ಲೈನ್+ಯೋಗ್‌ಭಟ್=ಕರಟಕ
ದಮನಕ:
ಟೈಟಲ್
or
ಸ್ಟೋರಿ?

ಫ್ರೆಶ್ ಲವ್ ಸ್ಟೋರಿ
ಅಂದ್ಹಾಗೆ, 'ಪದವಿ ಪೂರ್ವ' ಸಿನಿಮಾ ಮುಂಬರುವ ಡಿಸೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಭಟ್ಟರು ಪಣತೊಟ್ಟು ನಿಂತಿದ್ದಾರೆ. ಈ ವರ್ಷದ ಕೊನೆಯಲ್ಲಿ ಫ್ರೆಶ್ ಲವ್ ಸ್ಟೋರಿಯನ್ನು ತೆರೆಮೇಲೆ ತರಲಿದ್ದಾರೆ. ಯುವ ಪ್ರತಿಭೆಗಳ ಜೊತೆಗೆ ಶರತ್ ಲೋಹಿತಾಶ್ವ, ರಂಗಾಯಣ ರಘು ನಟಿಸಿದ್ದು, ಅತಿಥಿ ಪಾತ್ರದಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಪ್ರಚಾರ ಈಗ ಆರಂಭಿಸಿದೆ. ಸದ್ಯ ಈ ಸಿನಿಮಾ ಗೆಲ್ಲಿಸಲೇ ಬೇಕು ಅನ್ನೋ ಹಠದಲ್ಲಿರೋ ಯೋಗರಾಜ್ ಭಟ್ ಈ ಸಿನಿಮಾವನ್ನು ಯಾವ ರೀತಿ ಪ್ರಮೋಟ್ ಮಾಡುತ್ತಾರೆ ಅನ್ನೋ ಕುತೂಹಲವಿದೆ.