For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕರ ಮನದೊಂದಿಗೆ ಗಳಿಕೆಯಲ್ಲೂ ಗೆಲ್ಲುತ್ತಿದೆ 'ಲಂಕೆ'

  By ಫಿಲ್ಮಿಬೀಟ್ ಡೆಸ್ಕ್
  |

  ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರ‌ ಗಣಪತಿ ಹಬ್ಬದ ಶುಭದಿನದಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತಸ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ‌ಆಯೋಜಿಸಿತ್ತು.

  ನಮ್ಮ ‌"ಲಂಕೆ" ಯಶಸ್ಸು ಕಾಣುತ್ತಿರುವುದಕ್ಕೆ ಪ್ರಮುಖ ಕಾರಣರಾದ ಮಾಧ್ಯಮ ಹಾಗೂ ಸಿನಿ ರಸಿಕರಿಗೆ ಅನಂತ ಧನ್ಯವಾದ ತಿಳಿಸುತ್ತೇನೆ . ಚಿತ್ರ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎರಡನೇ ವಾರದಲ್ಲೂ ಹೆಚ್ಚು ಕಡಿಮೆ ಅಷ್ಟೇ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಮುಂದುವರೆಯುತ್ತಿದೆ. ಹಣ ಗಳಿಕೆಯೂ ಉತ್ತಮವಾಗಿದೆ. ಇದು ನನ್ನ ಮಾತಲ್ಲ ಪ್ರದರ್ಶಕ ಹಾಗೂ ವಿತರಕರ ಮಾತು ಎಂದು ತಿಳಿಸಿದ ಚಿತ್ರದ ನಿರ್ದೇಶಕ ರಾಮ್ ಪ್ರಸಾದ್ ನಾಯಕ ಯೋಗಿ ಸೇರಿದಂತೆ ನನ್ನ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

  ನಾನು ಚಿತ್ರ ಬಿಡುಗಡೆ ದಿನ ಚಿತ್ರಮಂದಿರಕ್ಕೆ ಬರಲಾಗಿರಲಿಲ್ಲ. ಇಂದು ಚಿತ್ರಮಂದಿರಗಕ್ಕೆ ಭೇಟಿ ನೀಡಿ ಬಂದೆ. ಇಂತಹ ಸಂದರ್ಭದಲ್ಲಿ ‌ನಮ್ಮ ಚಿತ್ರಕ್ಕೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಕಂಡು ಸಂತಸವಾಗಿದೆ. ನನ್ನೊಡನೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ. ಎಲ್ಲರಿಗೂ ಧನ್ಯವಾದ ಎಂದರು ನಾಯಕ ಯೋಗಿ.

  ಸಾಮಾನ್ಯವಾಗಿ ನಿರ್ದೇಶಕರು ನೀವು ಇಂತಹ ಪಾತ್ರ ಮಾಡಿ ಎಂದು ಹೇಳುತ್ತಾರೆ. ‌ಆದರೆ ಮೂರು ಪಾತ್ರಗಳ ಬಗ್ಗೆ ನನಗೆ ಹೇಳಿ ನಿಮಗೆ ಇಷ್ಟವಾದ ಪಾತ್ರ ಮಾಡಿ ಎಂದು ಹೇಳಿದ ಮೊದಲ ನಿರ್ದೇಶಕ ರಾಮ್ ಪ್ರಸಾದ್. ನಾನು ಉಳಿದ ಎರಡು ಪಾತ್ರಗಳನ್ನು ಹಲವು ಚಿತ್ರಗಳಲ್ಲಿ ಮಾಡಿದ್ದೆ. ಆದರೆ ಮಂಗಳಮುಖಿ ಪಾತ್ರ ಮಾಡಿದ್ದು ಇದೇ ಮೊದಲು. ನನ್ನ ಈ ಪಾತ್ರಕ್ಕೆ ಜನ ಮೆಚ್ಚುಗೆ ವ್ಯಕ್ತವಾಗುತ್ತಿರುವುದಕ್ಕೆ ಸಂತಸವಾಗಿದೆ ಎಂದರು ಹಿರಿಯ ನಟ ಶರತ್ ಲೋಹಿತಾಶ್ವ.

  ಉತ್ತಮ ಪಾತ್ರ ನೀಡಿದಕ್ಕೆ ನಿರ್ದೇಶಕರಿಗೆ ವಂದನೆಗಳು. ಯೋಗಿ ಅವರ ಜೊತೆ ನಟಿಸಿದ್ದು ವಿಶೇಷ ಅನುಭವ..ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರ ಪಾತ್ರಗಳ ಬಗ್ಗೆ ನಿರ್ದೇಶಕರು ಮಾತನಾಡಿದ್ದು ನನಗೆ ತುಂಬಾ ಸಂತೋಷವಾಯಿತು. "ಲಂಕೆ" ಜಯಭೇರಿ ಬಾರಿಸಲಿ ಎಂದರು ನಟ ಡ್ಯಾನಿ ಕುಟ್ಟಪ್ಪ.

  ನಿರ್ದೇಶಕರು ನನ್ನನ್ನು ಚಿತ್ರದ ಯಶಸ್ವಿ ಪತ್ರಿಕಾಗೋಷ್ಠಿಗೆ ಆಹ್ವಾನ ನೀಡಿದಾಗ ನನಗೆ ಆಶ್ಚರ್ಯವಾಯಿತು. ಇಂತಹ ಸುದ್ದಿ ಕೇಳಿ ಬಹಳ ದಿನಗಳಾಗಿತ್ತು. ನಮ್ಮ ಚಿತ್ರಕ್ಕೆ ಜನ ನೀಡುತ್ತಿರುವ ಬೆಂಬಲಕ್ಕೆ ಎಷ್ಟು ಧನ್ಯವಾದ ತಿಳಿಸಿದರು ಕಡಿಮೆ ಎಂದರು ಪ್ರಶಾಂತ್ ಸಿದ್ದಿ.

  English summary
  Yogi's Lanke movie is well received by people said movie team. Lanke movie team did press meet and thanked people who watching the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X