For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿಪರದೆಗೆ ಯೋಗರಾಜ್ ಭಟ್, ಅಯ್ಯೋ ದ್ಯಾವ್ರೇ!

  By Rajendra
  |

  ತಮ್ಮ ಕಾರ್ಯ ಚಟುವಟಿಕೆಯನ್ನು ಬಾಲಿವುಡ್ ವಿಸ್ತರಿಸಿರುವ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಈಗ ಮುಂಬೈಗೆ ಸ್ಥಳಾಂತರವಾಗಿರುವುದು ಗೊತ್ತೇ ಇದೆ. ಅವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಇದೊಂದು ಅಂಡರ್ ವರ್ಲ್ಡ್ ಕಥೆ.

  ಯೋಗರಾಜ್ ಮೂವೀಸ್ ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಈ ಚಿತ್ರಕ್ಕೆ ಜಯಣ್ಣ ಭೋಗೇಂದ್ರ ನಿರ್ಮಾಪಕರು. ಅಯ್ಯೋ ಇಷ್ಟಕ್ಕೂ ಚಿತ್ರದ ಹೆಸರೇ ಹೇಳಲಿಲ್ಲ ಅಂತಿದ್ದೀರಾ. ಚಿತ್ರದ ಹೆಸರು 'ದ್ಯಾವ್ರೇ'. 'ಒಂದೇ ಒಂದು ಕಿಂಡಿ ಕೊಡು ಪ್ಲೀಸ್' ಎಂಬುದು ಚಿತ್ರದ ಅಡಿಬರಹ.

  ಆಕ್ಷನ್ ಕಟ್ ಹೇಳುತ್ತಿರುವವರು ಗಡ್ಡ ವಿಜಿ. ಇವರಿಗೆ ಇದು ಚೊಚ್ಚಲ ಚಿತ್ರ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ದುನಿಯಾ ಸೂರಿ ಅವರ ಗರಡಿಯಲ್ಲಿ ಬೆಳೆದವರು. ಇದು ಜೈಲಿಗೆ ಸಂಬಂಧಿಸಿದ ಕಥೆ.

  ಅಲ್ಲಲ್ಲಿ ನಡೆದ, ಕಣ್ಣಿಗೆ ಕಂಡ ಕೆಲವು ನೈಜ ಘಟನೆಗಳೇ ಚಿತ್ರದ ಕಥಾವಸ್ತು ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರದಲ್ಲಿ ಯೋಗರಾಜ್ ಭಟ್ ಅವರು ಒಂದು ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಮೂಲಕ ಅವರು ಬೆಳ್ಳಿಪರದೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

  ಪಾತ್ರದ ಜೊತೆಗೆ ಒಂದು ಹಾಡನ್ನೂ ಬರೆದಿದ್ದಾರೆ. ಅದೇನೆಂದರೆ "ಖಾಲಿ ಪರ್ಸಲಿ ಜಿರಳೆ ಸೇರ್ಕೋಬಾರ್ದು, ಕಾಸು ಇದ್ದರೆ ಉಸಿರು ಎಳ್ಕೊಬೋದು..ನೂರ್ ರೂಪಾಯ್ ನೋಟು ತೋರಿಸು ಫಸ್ಟು, ಸೂರ್ಯ ಹುಟ್ಟೋದು ನೆಕ್ಸ್ಟು.. ದುಡ್ಡು ಮಾಡು ಗುರುವೇ ನೀ ಯಾಕೆ ಸುಮ್ಮನಿರುವೆ, ಎಲ್ರೂ ಕಳ್ಳರಿಲ್ಲಿ ನೀ ಯಾತಕಾಗಿ ಅಳುವೇ..? ಕಾಸಿಲ್ಲದಿದ್ದರೆ ಪಾಸುಬುಕ್ಕನು ಬೈಯ್ಯೋಕಾಯ್ತದ...?"

  ದ್ಯಾವ್ರೇ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತ, ಮುರಳಿ ಅವರ ನೃತ್ಯ ನಿರ್ದೇಶನವಿದೆ. ಪಾತ್ರವರ್ಗದಲ್ಲಿ ನೀನಾಸಂ ಸತೀಶ್, ಸೋನು ಗೌಡ, ಸೋನಿಯಾ ಗೌಡ, ಶ್ರುತಿ ಹರಿಹರನ್, ಗಂಧರ್ವ ಚೇತನ್, ರಾಜೇಶ್ ನಟರಾಜನ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada films renowned director Yograj Bhat debut acting through 'Dyaavre', the being directed by Vijay Gadda. It starring Sathish Neenasam, Sonu Gowda, Sonia Gowda, Sruthi Hariharan add music by Veer Samarth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X