For Quick Alerts
  ALLOW NOTIFICATIONS  
  For Daily Alerts

  ರಾಕಿ ಭಾಯ್ ಜೊತೆ ಸಿನಿಮಾ ಮಾಡಬೇಕಂತೆ ಅಮೃತಾಂಜನ್ ನಟಿ ಪಾಯಲ್!

  |

  ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಶಾರ್ಟ್ ಫಿಲ್ಮ್‌ಗಳು ನೋಡುಗರನ್ನು ರಂಜಿಸಿದೆ. ಅದರಲ್ಲೂ ಇತ್ತೀಚೆಗೆ ಅದೆಷ್ಟೋ ಪ್ರತಿಭೆಗಳು ಯೂಟ್ಯೂಬ್ ಶಾರ್ಟ್ ಮೂವಿ ಮೂಲಕವೇ ಗುರುತಿಸಿಕೊಳ್ಳುತ್ತಿದ್ದಾರೆ. 'ಅಮೃತಾಂಜನ್' ಶಾರ್ಟ್ ಫಿಲ್ಮ್ ಖ್ಯಾತಿಯ ಪಾಯಲ್ ಚಂಗಪ್ಪ ಮತ್ತು 'ಆಪರೇಷನ್ ಬೇಬಿ ಡಾಟ್ ಕಾಮ್' ಖ್ಯಾತಿಯ ಸುಧಾಕರ್ ಕೂಡ ತಮ್ಮ ನಟನೆ ಶೈಲಿ ಮೂಲಕವೇ ಕನ್ನಡಿಗರ ಮನೆಮಾತಾಗಿದ್ದಾರೆ. 'ಅಮೃತಾಂಜನ್' ಶಾರ್ಟ್ ಫಿಲ್ಮ್ ರಿಲೀಸ್ ಆಗಿ ಒಂದು ದಿನದಲ್ಲೇ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತ್ತು. ರಿಲೀಸ್ ಆದ ಒಂದೇ ದಿನಕ್ಕೆ ಸಾಕಷ್ಟು ವೈರಲ್ ಆಗಿತ್ತು. ಹಾಗೇ ಈ ಕಿರು ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಸಾಕಷ್ಟು ಪ್ರಖ್ಯಾತಿ ಪಡೆದಿದ್ದರು. ಅದರಲ್ಲಿ ಒಬ್ಬರು ಕೊಡಗಿನ ಕಲಾವಿದೆ ಪಾಯಲ್ ಚಂಗಪ್ಪ.

  ಜಾಮೀನಿನ ಮೇಲೆ ಹೊರಗಿರುವವ ನನ್ನ ಪ್ರಮಾಣಿಕತೆ ಪ್ರಶ್ನಿಸುತ್ತಾನೆ: ನಲಪಾಡ್‌ಗೆ ರಮ್ಯಾ ಪ್ರತ್ಯುತ್ತರಜಾಮೀನಿನ ಮೇಲೆ ಹೊರಗಿರುವವ ನನ್ನ ಪ್ರಮಾಣಿಕತೆ ಪ್ರಶ್ನಿಸುತ್ತಾನೆ: ನಲಪಾಡ್‌ಗೆ ರಮ್ಯಾ ಪ್ರತ್ಯುತ್ತರ

  ಹಾಗೇ ಇದೇ ತಂಡದ ಜೊತೆ 'ಆಪರೇಷನ್ ಬೇಬಿ ಡಾಟ್ ಕಾಮ್' ಸೇರಿದಂತೆ ಇತ್ತೀಚೆಗೆ ಬಂದ 'ಚರಂಡಿ ಅಲಿಯಾಸ್ ಡಿ ಚರಣ್' ಕಿರುಚಿತ್ರದಲ್ಲಿ ಸಾಕಷ್ಟು ಗಮನ ಸೆಳೆದ ಸುಧಾಕರ್ ಕೆ ಗೌಡ, ಫಿಲ್ಮಿಬೀಟ್ ಸಂದರ್ಶನದಲ್ಲಿ ಪಾಲ್ಗೊಂಡು ತಮ್ಮ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆ ಪಾಯಲ್ ಚಂಗಪ್ಪ ಅವರಿಗೆ ರಾಕಿ ಭಾಯ್ ಜೊತೆ ಸಿನಿಮಾ ಮಾಡುವ ಆಸೆ. ಜೊತೆಗೆ ತಮ್ಮ ಅಭಿರುಚಿ, ಮುಂದಿನ ಸಿನಿಮಾಗಳು, ಇಂಡಸ್ಟ್ರಿಯಲ್ಲಿ ತಮ್ಮ ಅನುಭವ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಪಾಯಲ್ ಮತ್ತು ಸುಧಾಕರ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇಷ್ಟೆ ಅಲ್ಲದೇ ತಮಾಷೆಗೆಂದು ಮಾಡಿದ ಫನ್ ಎಪ್ಪಿಸೋಡ್‌ನಲ್ಲಿ ಒಬ್ಬರಿಗೊಬ್ಬರು ಕಾಲೆಳೆದುಕೊಂಡಿದ್ದು ಮಜಾ ವಾಗಿತ್ತು.

  English summary
  Youtube Star Ambruthanjan Short Film Fame Payal Chengappa And Sudhakar Interview, Know More.
  Saturday, May 14, 2022, 9:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X