TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಯೂಟ್ಯೂಬ್ ಸಂಸ್ಥೆಯ ಗಮನ ಸೆಳೆದ 'ಯಜಮಾನ': ಸಂತಸ ಹಂಚಿಕೊಂಡ ಜಗ್ಗೇಶ್

ಅದೊಂದು ಕಾಲವಿತ್ತು. ಕನ್ನಡ ಸಿನಿಮಾಗಳು ಕರ್ನಾಟಕ ಬಿಟ್ಟರೆ ಬೇರೆ ಎಲ್ಲೂ ಪ್ರದರ್ಶನವಾಗ್ತಿರಲಿಲ್ಲ. ಕನ್ನಡಿಗರು ಬಿಟ್ಟರೇ ಬೇರೆ ಯಾರೂ ಆಸಕ್ತಿನೂ ತೂರುತ್ತಿರಲಿಲ್ಲ. ಆದ್ರೀಗ ಕಾಲ ಬದಲಾಗಿದೆ. ಇಡೀ ಭಾರತ ಮತ್ತು ವಿಶ್ವಚಿತ್ರರಂಗವೂ ಕನ್ನಡ ಚಿತ್ರಗಳ ಕಡೆ ನೋಡುವಂತಾಗಿದೆ.
ಅದಕ್ಕೆ ತಾಜಾ ಉದಾಹರಣೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ. ಈ ಹಿಂದೆ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಐದು ಭಾಷೆಯಲ್ಲಿ ತೆರೆಕಂಡು ಸ್ಯಾಂಡಲ್ ವುಡ್ ಹಿರಿಮೆಯನ್ನ ವಿಸ್ತರಿಸಿತ್ತು. ಈಗ ಯಜಮಾನನ ಸರದಿ.
ಯಜಮಾನನ ವೇಗಕ್ಕೆ ಸೌತ್ ಇಂಡಿಯಾ ಶೇಕ್: ಪ್ರಿನ್ಸ್ ಮಹೇಶ್, ರಜನಿ ರೆಕಾರ್ಡ್ ಬ್ರೇಕ್.!
ಹೌದು, ಯಜಮಾನ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಕೇವಲ 24 ಗಂಟೆಯಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದೆ. ಇದನ್ನ ಕಂಡು ಸಹಜವಾಗಿ ಯೂಟ್ಯೂಬ್ ಸಂಸ್ಥೆಯೇ ದಂಗಾಗಿದೆ. ಆ ಅಚ್ಚರಿ, ಸಂತಸವನ್ನ ಸ್ವತಃ ಯೂಟ್ಯೂಬ್ ಸಂಸ್ಥೆ ತಮ್ಮ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಮುಂದೆ ಓದಿ.....
ಅತಿಥಿ ಸತ್ಕಾರ ಮಾಡಿದ ಯೂಟ್ಯೂಬ್
ಯಜಮಾನ ಟ್ರೈಲರ್ ಮಾಡಿದ ಸಾಧನೆ ಕಂಡು ಯೂಟ್ಯೂಬ್ ಸಂಸ್ಥೆ ಶಾಕ್ ಗೆ ಒಳಗಾಗಿದೆ. ಇಷ್ಟು ದಿನ ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿತ್ತು. ಆದ್ರೀಗ, ವಿಶ್ವ ಖ್ಯಾತಿಯ ಯೂಟ್ಯೂಬ್ ಸಂಸ್ಥೆ ಕೂಡ ಟ್ವೀಟ್ ಮಾಡುವಷ್ಟು ಕನ್ನಡ ಸಿನಿಮಾಗಳು ಅಬ್ಬರವಿಟ್ಟಿದೆ. ಯಜಮಾನನ ಆರ್ಭಟಕ್ಕೆ ಯೂಟ್ಯೂಬ್ ಸಂಸ್ಥೆ ಖುಷಿಯಾಗಿದೆ.
ಯಜಮಾನನ ಈ ಎರಡು ಡೈಲಾಗ್ ಬಗ್ಗೆ ಇಂತಹದೊಂದು ಚರ್ಚೆ.!
ಕಾಲರ್ ಎತ್ತಿದ ಜಗ್ಗೇಶ್
ಕನ್ನಡ ಚಿತ್ರಗಳ ಈ ಬೆಳವಣಿಗೆ ಕಂಡು ಹಿರಿಯ ನಟ ಜಗ್ಗೇಶ್ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಜಗ್ಗಣ್ಣ ''ಹೃದಯತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿಕಂಡು.. ಹಾರಲಿ ಏರಲಿ ಕನ್ನಡದ ಬಾವುಟ.. ನಾನು ಚಿತ್ರಮಂದಿರದಲ್ಲೆ ನೋಡಿ ಬೆಂಬಲಿಸುವೆ'' ಎಂದಿದ್ದಾರೆ.
ಬರೆದಿಟ್ಟುಕೊಳ್ಳಿ, ದರ್ಶನ್ 50ನೇ ಚಿತ್ರ ಪಕ್ಕಾ ಆಯ್ತು
ವಾಹ್.... ಶೈಲಜಾ ನಾಗ್
ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಈ ಕುರಿತು ಟ್ವೀಟ್ ಮಾಡಿದ್ದು, ಅಚ್ಚರಿಯಾಗಿದ್ದಾರೆ. ಬಹುಶಃ ಕನ್ನಡ ಸಿನಿಮಾದ ಬಗ್ಗೆ ಯೂಟ್ಯೂಬ್ ಸಂಸ್ಥೆ ಟ್ವೀಟ್ ಮಾಡಿರುವುದು ಇದೇ ಮೊದಲು ಇರಬಹುದು. ಹಾಗಾಗಿ, ಆ ಕ್ರೆಡಿಟ್ ಯಜಮಾನ ಚಿತ್ರಕ್ಕೆ ಸಲ್ಲುತ್ತದೆ. ಹಾಗಾಗಿ, ಶೈಲಜಾ ನಾಗ್ ಸಂತಸ ಹೆಚ್ಚಿಸಿದೆ.
'ಯಜಮಾನ' ಟ್ರೇಲರ್ : ಶಿವನಂದಿಯಾಗಿ ಅಬ್ಬರಿಸಿದ ಡಿ ಬಾಸ್
ಕೇಕ್ ಕತ್ತರಿಸಿ ಸಂಭ್ರಮಿಸಿದ ಡಿ ಬಾಸ್
ಯಜಮಾನ ಟ್ರೈಲರ್ ಕಂಡಿರುವ ಬಹುದೊಡ್ಡ ಯಶಸ್ಸನ್ನ ದಾಸ ದರ್ಶನ್ ಅಭಿಮಾನಿಗಳ ಜೊತೆ ಸಂಭ್ರಮಿಸಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ತಂದಿದ್ದ ಕೇಕ್ ಕತ್ತರಿಸಿ ಸಿಹಿ ಹಂಚಿ ಗೆಲುವು ಹಂಚಿಕೊಂಡಿದ್ದಾರೆ.
11 ಮಿಲಿಯನ್ ದಾಟಿದೆ ವೀಕ್ಷಣೆ
ಕೇವಲ 24 ಗಂಟೆಯಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದೆ ಎಂದು ಹೇಳಲಾಗ್ತಿರುವ ಯಜಮಾನ ಟ್ರೈಲರ್ ಸದ್ಯ 11.5 ಮಿಲಿಯನ್ ವೀಕ್ಷಣೆ ಕಂಡು ಮುನ್ನಗ್ಗುತ್ತಿದೆ. ಯೂಟ್ಯೂಬ್ ವೀವ್ಸ್ ನಲ್ಲಿ ಏನಾದರೂ ಗೊಂದಲವಾಗಿದೆಯಾ ಗೊತ್ತಿಲ್ಲ. ಬಟ್, ನಿನ್ನೆಯಿಂದ ಡಿ ಬೀಟ್ಸ್, ಡಿ ಕಂಪನಿ, ಹಾಗೂ ಟ್ರೈಲರ್ ಕವರ್ ಇಮೇಜ್ ನಲ್ಲೂ 10 ಮಿಲಿಯನ್ ಅತಿ ವೇಗವಾಗಿ ದಾಟಿದೆ ಎಂಬುದರ ಬಗ್ಗೆ ಹೇಳಲಾಗಿತ್ತು.