For Quick Alerts
  ALLOW NOTIFICATIONS  
  For Daily Alerts

  ಮತ್ತೆ ಚಿತ್ರಮಂದಿರಕ್ಕೆ ಬಂದ ರಾಬರ್ಟ್, ಯುವರತ್ನ

  |

  ಕರ್ನಾಟಕ ರಾಜ್ಯಾದ್ಯಂತ ಚಿತ್ರಮಂದಿರಗಳು ಮತ್ತೆ ತೆರೆದಿದೆ. ಕೋವಿಡ್ ಎರಡನೇ ಅಲೆ ಹಿನ್ನೆಲೆ ಬಾಗಿಲು ಹಾಕಿದ್ದ ಥಿಯೇಟರ್‌ಗಳು ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

  ಜುಲೈ 19 ರಿಂದ ರಾಜ್ಯಾದ್ಯಂತ ಸಿನಿಮಾ ಮಂದಿರಗಳು ಶೇಕಡಾ 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕೆಲಸ ಆರಂಭಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಇಂದು ಬೆಳಗ್ಗೆಯಿಂದ ಚಿತ್ರಪ್ರದರ್ಶನ ಆರಂಭವಾಗಿದೆ.

  ಸದ್ಯದ ವರದಿ ಪ್ರಕಾರ, ಮೈಸೂರಿನಲ್ಲಿ ಸ್ಟಾರ್ ನಟರ ಸಿನಿಮಾಗಳನ್ನು ರಿ-ರಿಲೀಸ್ ಮಾಡುವ ಮೂಲಕ ಥಿಯೇಟರ್ ಪುನರಾರಂಭಿಸಲಾಗಿದೆ. ನಟ ದರ್ಶನ್ ನಟನೆಯಲ್ಲಿ ತೆರೆಕಂಡಿದ್ದ ರಾಬರ್ಟ್, ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಯುವರತ್ನ ಹಾಗೂ ಪ್ರಜ್ವಲ್ ದೇವರಾಜ್ ನಟನೆಯಲ್ಲಿ ರಿಲೀಸ್ ಆಗಿದ್ದ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾ ಮೈಸೂರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

  ರಾಜ್ಯದ ಹಲವು ಚಿತ್ರಮಂದಿರಗಳು ಇಂದಿನಿಂದ ಪ್ರದರ್ಶನ ಶುರು ಮಾಡಿದ್ದು, ಹಳೆಯ ಸಿನಿಮಾಗಳೊಂದಿಗೆ ಶೋ ಆರಂಭಿಸಿದೆ. ಇನ್ನು ಕೆಲವು ಚಿತ್ರಮಂದಿರಗಳು ಪೂರ್ವ ತಯಾರಿ ನಡೆಸುತ್ತಿವೆ. ಚಿತ್ರಮಂದಿರಗಳನ್ನು ಹೊಸ ರೂಪಕ್ಕೆ ತರಲು ಕೆಲಸ ಮಾಡುತ್ತಿವೆ.

  ಇನ್ನು ಬುಕ್ ಮೈ ಶೋನಲ್ಲಿ ಯಾವ ಸಿನಿಮಾಗಳ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಹಾಗೂ ಪ್ರಸ್ತುತ ಪ್ರದರ್ಶನ ಕಾಣುತ್ತಿರುವ ಚಿತ್ರಗಳ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಟ್ಟಿಲ್ಲ. ನಿಧಾನವಾಗಿ ಈ ಪ್ರಕ್ರಿಯೆಗೆ ಚಾಲನೆ ಸಿಗಬಹುದು.

  ಚಿತ್ರಮಂದಿರಗಳಿಗೆ ಅವಕಾಶ ಸಿಕ್ಕಿದ ಹಿನ್ನೆಲೆ ನಿರ್ದೇಶಕ ಸಿಂಪಲ್ ಸುನಿ ವಿಶೇಷವಾಗಿ ಟ್ವೀಟ್ ಮಾಡಿ ಪ್ರೇಕ್ಷಕರನ್ನು ಸ್ವಾಗತಿಸಿದ್ದಾರೆ.

  ರಿಲೀಸ್‌ಗೆ ರೆಡಿಯಿರುವ ಸಿನಿಮಾಗಳು

  Recommended Video

  ಪಂಚೆಯುಟ್ಟು ಮಳೆಯನ್ನು ಲೆಕ್ಕಿಸದೆ ಭತ್ತದ ಪೈರು ನಾಟಿ ಮಾಡಿದ ರಕ್ಷಿತ್ | Filmibeat Kannada

  ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ, ಸುದೀಪ್ ನಟನೆಯ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ, ಶಿವಣ್ಣ ಅಭಿನಯದ ಭಜರಂಗಿ 2, ಸಂಚಾರಿ ವಿಜಯ್ ನಟನೆಯ ತಲೆದಂಡ, ಜಗ್ಗೇಶ್ ನಟನೆಯ ತೋತಾಪುರಿ, ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್,ಶರಣ್ ಅಭಿನಯದ ಅವತಾರ ಪುರುಷ ಸೇರಿದಂತೆ ಹಲವು ಸಿನಿಮಾಗಳು ಚಿತ್ರೀಕರಣ ಮುಗಿಸಿ ಸಜ್ಜಾಗಿದೆ.

  English summary
  Karnataka Theatres Reopen: Yuvarathnaa, Roberrt & Inspector Vikram Movies Re-released in Mysuru today.
  Monday, July 19, 2021, 12:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X