For Quick Alerts
  ALLOW NOTIFICATIONS  
  For Daily Alerts

  ಜಮೀರ್ ಪುತ್ರನ ಚೊಚ್ಚಲ ಚಿತ್ರ 'ಬನಾರಸ್' ವಿತರಣಾ ಹಕ್ಕು ಡಿ ಬೀಟ್ಸ್ ಪಾಲು!

  |

  ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಚೊಚ್ಚಲ ಚಿತ್ರ ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತ್ತೊಬ್ಬ ರಾಜಕೀಯ ಮುಖಂಡನ ಪುತ್ರ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿರೋದ್ರಿಂದ ಈ ಸಿನಿಮಾ ಬಗ್ಗೆ ಸಹಜವಾಗಿ ಕುತೂಹಲ ಕೆರಳಿಸಿದೆ.

  ಈಗಾಗಲೇ 'ಬನಾರಸ್' ಸಿನಿಮಾದ ಟ್ರೈಲರ್ ಹಾಗೂ ಸಾಂಗ್ ಸಿನಿಪ್ರಿಯರ ಮನಗೆದ್ದಿದೆ. ಅದರಲ್ಲೂ 'ಬೆಲ್ ಬಾಟಂ' ಹಾಗೂ 'ಬ್ಯೂಟಿಫುಲ್ ಮನಸ್ಸುಗಳು' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣಕ್ಕೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

  ಈ ಬೆನ್ನಲ್ಲೇ 'ಬನಾರಸ್' ಸಿನಿಮಾ ತಂಡ ಮತ್ತೊಂದು ಸುದ್ದಿಯನ್ನು ನೀಡಿದೆ. ಈಗಾಗಲೇ ಈ ಸಿನಿಮಾದ 'ಮಾಯಗಂಗೆ' ಸಾಂಗ್ ಸೂಪರ್‌ ಹಿಟ್ ಆಗಿತ್ತು. ಇನ್ನೊಂದು ಕಡೆ ಟ್ರೈಲರ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಈಗಾಗಲೇ ಈ ಟ್ರೈಲರ್‌ಗೆ ಮಿಲಿಯನ್‌ಗೂ ಅಧಿಕ ವೀವ್ಸ್ ಸಿಕ್ಕಿದೆ.

  'ಬನಾರಸ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸದ್ಯ ಕರ್ನಾಟಕದಲ್ಲಿ ನಿರೀಕ್ಷೆಯನ್ನು ಮೂಡಿಸಿದೆ. ಹೀಗಾಗಿಯೇ ಡಿ ಬೀಟ್ಸ್ ಸಂಸ್ಥೆ ಈ ಸಿನಿಮಾವನ್ನು ಡಿಸ್ಟ್ರಿಬ್ಯೂಟ್ ಮಾಡುವುದಕ್ಕೆ ಮುಂದಾಗಿದೆ. ಈ ಸಂಸ್ಥೆ ಸಿನಿಮಾವನ್ನು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದೆ.

  ಸ್ಯಾಂಡಲ್‌ವುಡ್‌ನಲ್ಲಿ ಅನುಭವವಿರುವ ನಿರ್ಮಾಪಕಿ ಶೈಲಜಾ ನಾಗ್, ಹಾಗೂ ನಟ-ನಿರ್ಮಾಪಕ ಬಿ ಸುರೇಶ್ ಅವರ ಡಿ ಬೀಟ್ಸ್ ಬನಾರಸ್‌ಗೆ ಸಾಥ್ ನೀಡಿದೆ. ಈ ಕಾರಣಕ್ಕೆ 'ಬನಾರಸ್'ವನ್ನು ಇವರಿಬ್ಬರೂ ಯಾವ ರೀತಿ ರಿಲೀಸ್ ಮಾಡುತ್ತಾರೆ ಅನ್ನೋ ಕುತೂಹಲವಿದೆ.

  ಸದ್ಯ 'ಬನಾರಸ್' ಸಿನಿಮಾವನ್ನು ವಿತರಣೆ ಮಾಡುವ ಸಂಸ್ಥೆ ಯಾವುದು ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ. ನಿರೀಕ್ಷೆ ಮಾಡಿದಂತೆ ಡಿ ಬೀಟ್ಸ್ ವಿತರಣಾ ಹಕ್ಕನ್ನು ಖರೀದಿಸಿದ್ದು, ಅತ್ಯಂತ ವ್ಯವಸ್ಥಿತವಾಗಿ ಚಿತ್ರವನ್ನು ಕರ್ನಾಟಕ ಬಿಡುಗಡೆ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಅದಕ್ಕೆ ತಕ್ಕಂತೆಯೇ 'ಬನಾರಸ್' ಬಿಡುಗಡೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

  Zaid Khan Debut Movie Banaras Distribution Rights Sold to D Beats

  'ಬನಾರಸ್' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ ಅಷ್ಟೇ. ಹೀಗಾಗಿ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಪ್ರಚಾರ ಮಾಡುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ನಾಯಕಿ ಸೋನಲ್ ಮೊಂತೇರೋ ಕೂಡಾ ಜೊತೆಯಾಗಿದ್ದಾರೆ.

  ಕರ್ನಾಟಕದಲ್ಲಿ ಡಿ ಬೀಟ್ಸ್ ವಿತರಣೆ ಮಾಡುವುದಕ್ಕೆ ಮುಂದಾಗಿದೆ. ಇನ್ನೊಂದು ಕಡೆ ಉಳಿದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಬಗ್ಗೆ ಮಾತುಕತೆ ಮುಂದುವರೆದಿದೆ. ದೊಡ್ಡ ದೊಡ್ಡ ಸಂಸ್ಥೆಗಳೇ ವಿತರಣಾ ಹಕ್ಕುಗಳನ್ನು ಖರೀದಿ ಮಾಡಲು ಮುಂದೆ ಬಂದಿದ್ದು, ಯಾವ ರೀತಿ ಸದ್ದು ಮಾಡುತ್ತೆ ಅನ್ನೋದನ್ನು ಸ್ಯಾಂಡಲ್‌ವುಡ್ ಎದುರು ನೋಡುತ್ತಿದೆ.

  English summary
  Zaid Khan Debut Movie Banaras Distribution Rights Sold to D Beats, Know More.
  Friday, October 7, 2022, 23:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X