For Quick Alerts
  ALLOW NOTIFICATIONS  
  For Daily Alerts

  ಪಾತಾಳ ಲೋಕ ಟ್ರೈಲರ್ ನೋಡಿ, ಇದು ಅಮೆಜಾನ್ ಪ್ರೈಮ್ ಕ್ರೈಂ ಥ್ರಿಲ್ಲರ್

  |

  ಅತ್ಯಂತ ನಿರೀಕ್ಷಿತ ಅಮೆಜಾನ್ ಒರಿಜಿನಲ್ ಸೀರೀಸ್ ಪಾತಾಲ್ ಲೋಕ್‍ನ ಟ್ರೇಲರ್ ಬಿಡುಗಡೆ ಮಾಡಿದ ಅಮೆಜಾನ್ ಪ್ರೈಮ್ ವೀಡಿಯೋ ಪಾತಾಲ್ ಲೋಕ್, ಮೇ 15ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತಿರುವ 9-ಭಾಗಗಳ ಅಮೆಜಾನ್ ಒರಿಜಿನಲ್ ಸೀರೀಸ್ ಆಗಿದೆ. ಈ ಸರಣಿಯು, ಸುಪ್ರಸಿದ್ಧ ಪತ್ರಕರ್ತನೊಬ್ಬನ ಕೊಲೆಪ್ರಯತ್ನವನ್ನು ಶೋಧಿಸುತ್ತಿರುವ ಪ್ರಾಮಾಣಿಕ ಪೆÇೀಲೀಸ್‍ನೊಬ್ಬನ ಕಥೆಯಾಗಿದೆ. ಈ ಕೌತುಕಮಯ ಕೇಸ್, ಅವನನ್ನು "ಪಾತಾಳ ಲೋಕ"ದ ಕರಾಳ ಜಗತ್ತಿಗೆ ಕರೆದೊಯ್ಯುತ್ತದೆ.

  ವಂದೇ ಮಾತರಂ‌ ಗೀತೆಯೊಂದಿಗೆ ದೀಪ ಬೆಳಗಿಸಿದ ಗಾಯಕ ವಿಜಯ್ ಪ್ರಕಾಶ್ | Filmibeat Kannada

  ಸುದೀಪ್ ಶರ್ಮ ರಚನೆಯ ಪಾತಾಲ್ ಲೋಕ್‍ನಲ್ಲಿ ಜೈದೀಪ್ ಅಹ್ಲವತ್, ನೀರಜ್ ಕಬಿ, ಗುಲ್ ಪನಾಗ್, ಮತ್ತು ಅಭಿಷೇಕ್ ಬ್ಯಾನರ್ಜಿ ಮುಂತಾದವರು ನಟಿಸಿದ್ದಾರೆ. ಅವಿನಾಶ್ ಅರುಣ್ ನಿರ್ದೇಶಿಸಿ ಕ್ಲೀನ್ ಸ್ಲೇಟ್ ಫಿಲ್ಮ್‍ಝ್ ತಯಾರಿಕೆಯ ಈ 9-ಭಾಗಗಳ ಅಮೆಜಾನ್ ಒರಿಜಿನಲ್ ಸೀರೀಸ್‍ಅನ್ನು ಪ್ರೈಮ್ ಸದಸ್ಯರು, ಮೇ 15ರಿಂದ 200 ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೀಕ್ಷಿಸಬಹುದು.

  ಅಮೆಜಾನ್ ಸೀರೀಸ್ ಪಾತಾಳ್ ಲೋಕ್ ಅನಾವರಣಗೊಳಿಸಿದ ಅನುಷ್ಕಾ

  ಪ್ರೈಂ ನೀಡುತ್ತದೆ ಅದ್ಭುತ ಮೌಲ್ಯ, ಇತ್ತೀಚಿನ ಮತ್ತು ಪ್ರತ್ಯೇಕ ಚಲನಚಿತ್ರ, ಟಿವಿ ಕಾರ್ಯಕ್ರಮ, ಸ್ಟಾಂಡಪ್ ಹಾಸ್ಯ, ಅಮೆಜಾನ್ ಒರಿಜಿನಲ್ಸ್, ಜಾಹೀರಾತು ರಹಿತ ಸಂಗೀತ ಪ್ರೈಂ ಮ್ಯೂಸಿಕ್ ಮೂಲಕ, ಗಳ ಅನಿಯಮಿತ ಸ್ಟ್ರೀಮಿಂಗ್, ಭಾರತದ ಅತಿದೊಡ್ಡ ಪ್ರಮಾಣದ ವಸ್ತುಗಳ ಉಚಿತ ಕ್ಷಿಪ್ರ ಬಟವಾಡೆ, ಉನ್ನತ ಡೀಲ್ ಗಳಿಗೆ ಪ್ರವೇಶ, ಪ್ರೈಂ ರೀಡಿಂಗ್ ನೊಂದಿಗೆ ಅನಿಯಮಿತ ಪುಸ್ತಕಗಳು, ಎಲ್ಲಾ ರೂ. 129 ಪ್ರತಿ ತಿಂಗಳಿಗೆ ಲಭ್ಯ.

  ಮೂರನೇ ಭಾರತೀಯ ಒರಿಜಿನಲ್

  ಮೂರನೇ ಭಾರತೀಯ ಒರಿಜಿನಲ್

  ಅಮೆಜಾನ್ ಪ್ರೈಮ್ ವೀಡಿಯೋ ಇಂದು 2020ರ ತನ್ನ ಮೂರನೇ ಭಾರತೀಯ ಒರಿಜಿನಲ್ ಆದ ಅತ್ಯಂತ ನಿರೀಕ್ಷಿತ ಅಮೆಜಾನ್ ಒರಿಜಿನಲ್ ಸೀರೀಸ್ ಪಾತಾಳ್ ಲೋಕ್‍ನ ಟ್ರೇಲರ್ ಬಿಡುಗಡೆ ಮಾಡಿದೆ. ಕ್ಲೀನ್ ಸ್ಲೇಟ್ ನಿರ್ಮಾಣದ ಈ ಆತಂಕಕಾರಿ ಅಪರಾಧ ನಾಟಕ, ಅತ್ಯಂತ ಹೈಪ್ರೊಫೈಲ್ ಕೇಸ್ ಒಪ್ಪಿಸಲಾಗಿರುವ ಒಬ್ಬ ನಿತ್ರಾಣ ದೆಹಲಿ ಪೊಲೀಸ್ ಇನ್ಸ್ ಪೆಕ್ಟರ್ ಹಾಥಿ ರಾಮ್ ಚೌಧುರಿಯ ಸುತ್ತ ಸುತ್ತುತ್ತದೆ. ಸುಪ್ರಸಿದ್ಧ ಪತ್ರಕರ್ತನೊಬ್ಬನ ಕೊಲೆಪ್ರಯತ್ನಕ್ಕಾಗಿ ನಾಲ್ವರು ಶಂಕಿತರನ್ನು ಬಂಧಿಸಲಾಗುತ್ತದೆ.

  ಈ ಕೇಸ್, ಮೇಲ್ನೋಟಕ್ಕೆ ಕಾಣಿಸುವ ಯಾವುದೂ ಸರಿಯಿಲ್ಲದಂತಹ ಕುತಂತ್ರಯುಕ್ತ ಜಟಿಲತೆ ಪಡೆದುಕೊಳ್ಳುತ್ತದೆ. ತತ್ಪರಿಣಾಮವಾಗಿ, ಚೌಧರಿ "ಪಾತಾಳ ಲೋಕದ" ಕರಾಳ ಅಪಾಯಕಾರೀ ವಿಕ್ಷುಬ್ದ ಮಾರ್ಗಗಳಿಗೆ ಕರೆದೊಯ್ಯುತ್ತದೆ.

  ನಿರ್ಮಾಪಕಿ ಅನುಷ್ಕಾ ಶರ್ಮ

  ನಿರ್ಮಾಪಕಿ ಅನುಷ್ಕಾ ಶರ್ಮ

  ''ಸ್ವರ್ಗ ಲೋಕ, ಭೂ ಲೋಕ ಹಾಗೂ ಪಾತಾಳ ಲೋಕ ಎಂಬ ಪುರಾಣದ ಕಲ್ಪನೆಯನ್ನು ಪ್ರಜಾಪ್ರಭುತ್ವದ ನಾಲ್ಕು ಅಂಗಗಳ ಮೂಲಕ ತೋರಿಸುವ ಪ್ರಯತ್ನ ಇದಾಗಿದೆ. ಕ್ರೈಂ ಡ್ರಾಮಾಗೆ ಸುದೀಪ್ ಶರ್ಮ ಕಥೆ ಒದಗಿಸಿದ್ದಾರೆ. ಈ ಸರಣಿ ನೋಡಿದ ಮೇಲೆ ನಿಮ್ಮ ಜಗತ್ತನ್ನು ನೋಡುವ ರೀತಿ ಬದಲಾಗಲಿದೆ, 200 ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಾಗಲಿರುವ ಪಾತಾಳ್ ಲೋಕ್, ಪ್ರೈಮ್ ಸದಸ್ಯರಿಗೆ ಮೇ 15ರಿಂದ ಸ್ಟ್ರೀಮಿಂಗ್‍ಗೆ ಲಭ್ಯವಾಗುತ್ತದೆ" ಎಂದು ನಿರ್ಮಾಪಕಿ ನಟಿ ಅನುಷ್ಕಾ ಹೇಳಿದ್ದಾರೆ.

  ಕಥಾ ಹಂದರ

  ಕಥಾ ಹಂದರ

  ಪ್ರಮುಖ ಪತ್ರಕರ್ತನೊಬ್ಬನ ಕೊಲೆಪ್ರಯತ್ನದಲ್ಲಿ ನಾಲ್ವರು ಶಂಕಿತರನ್ನು ಹಿಡಿದಾಗ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಅವನ ಜೀವಿತಾವಧಿಯ ಕೇಸ್ ಒಂದು ದೊರಕುತ್ತದೆ. ಈ ಕೇಸ್, ಮೇಲ್ನೋಟಕ್ಕೆ ಕಾಣಿಸುವ ಯಾವುದೂ ಸರಿಯಿಲ್ಲದಂತಹ ಕುತಂತ್ರಯುಕ್ತ ಜಟಿಲತೆ ಪಡೆದುಕೊಳ್ಳುತ್ತದೆ. ಅದರ ಅನುಸರಣೆಯಲ್ಲಿ ಅವನು ಪಾತಾಳ ಲೋಕದ ಕರಾಳ ಪ್ರಪಂಚಕ್ಕೆ ಕಾಲಿರಿಸಿ, ಆ ನಾಲ್ವರು ಶಂಕಿತರ ಗತಕಾಲದ ಬಗ್ಗೆ ಬೆಚ್ಚಿಬೀಳಿಸುವ ಶೋಧನೆಗಳನ್ನು ಮಾಡುತ್ತಾನೆ.

  ಪಾತಾಳ್ ಲೋಕ್‍ನ ರಚನಕಾರ ಸುದೀಪ್

  ಪಾತಾಳ್ ಲೋಕ್‍ನ ರಚನಕಾರ ಸುದೀಪ್

  ಪಾತಾಳ್ ಲೋಕ್‍ನ ರಚನಕಾರ ಸುದೀಪ್ ಶರ್ಮಾ, "ಪಾತಾಳ್ ಲೋಕ್ ಪ್ರತಿಯೊಬ್ಬ ರಚನಕಾರನ ಕನಸು. ಹೃದ್ಭಾಗದಲ್ಲಿ ಇದೊಂದು ಭಾರತೀಯ ಕಥೆಯಾಗಿದ್ದರೂ, ಅದ್ಭುತವಾದ ಜಾಗತಿಕ ಅಪೀಲ್ ಹೊಂದಿದೆ. ಇದಕ್ಕೆ ಕಾರಣ, ಅದು ಹೇಳಲಿರುವ ಕಥೆ ಮತ್ತು ಅದರ ಪಾತ್ರಗಳು. ಕ್ಲೀನ್ ಸ್ಲೇಟ್ ಫಿಲ್ಮ್ಸ್ ಜೊತೆಗೆ, ನಮ್ಮ ಕಾಲದ ಅತ್ಯುತ್ತಮ ರಚನಕಾರರಿಗೆ ತವರೂರಾದ, ಕೆಲವು ಪ್ರಶಸ್ತಿ ವಿಜೇತ ಕಂಟೆಂಟ್‍ಗಳನ್ನು ತಯಾರಿಸುತ್ತಿರುವ ಜಾಗತಿಕ ಸ್ಟ್ರೀಮಿಂಗ್ ಸೇವೆಯಾದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ನನ್ನ ಡಿಜಿಟಲ್ ಪಾದಾರ್ಪಣೆ ಮಾಡುತ್ತಿದ್ದೇನೆ. ಪಾತಾಲ್ ಲೋಕ್, ಮೊದಲಿನಿಂದ ಕೊನೆಯವರೆಗೂ ವಿಶ್ವಾದ್ಯಂತದ ವೀಕ್ಷಕರನ್ನು ಅವರ ಆಸನಗಳ ತುದಿಯಲ್ಲಿರಿಸಲು ಯಶಸ್ವಿಯಾಗುತ್ತದೆ ಎಂಬ ಭರವಸೆ ನನಗಿದೆ." ಎಂದರು.

  ಪ್ರೈಮ್ ನಲ್ಲಿ ಮತ್ತೆ ಏನು ನೋಡಬಹುದು, ಕೇಳಬಹುದು

  ಪ್ರೈಮ್ ನಲ್ಲಿ ಮತ್ತೆ ಏನು ನೋಡಬಹುದು, ಕೇಳಬಹುದು

  ಪಾತಾಳ್ ಲೋಕ್, ಪ್ರಶಸ್ತಿ ವಿಜೇತ ಅಮೆಜಾನ್ ಒರಿಜಿನಲ್ ಸರಣಿಯಾದ ದಿ ಫಾಮಿಲಿ ಮ್ಯಾನ್, ಮಿರ್ಜಾಪುರ, ಇನ್ಸೈಡ್ ಎಡ್ಜ್, ಕಾಮಿಕ್ಸ್ತಾನ್, ಮೇಡ್ ಇನ್ ಹೆವೆನ್ ಮತ್ತು ಟಾಮ್ ಕ್ಲಾನ್ಸಿ ಅವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸಲ್ ಒಳಗೊಂಡಂತೆ ಜಾಗತಿಕವಾಗಿ ಮೆಚ್ಚುಗೆ ಪಡೆದ ಹಾಗು ಪ್ರಶಸ್ತಿ ವಿಜೇತ ಜಾಗತಿಕ ಅಮೆಜಾನ್ ಒರಿಜಿನಲ್ ಸೀರೀಸ್ ಪ್ರೈಮ್ ವೀಡಿಯೋ ಕ್ಯಾಟಲಾಗ್‍ನಲ್ಲಿವೆ.

  ಸಾವಿರಾರು ಹಾಲಿವುಡ್ ಹಾಗು ಬಾಲಿವುಡ್ ಟಿವಿ ಶೋಗಳು ಹಾಗು ಚಲನಚಿತ್ರಗಳನ್ನು ಸೇರಿಕೊಳ್ಳಲಿದ್ದು ಇವೆಲ್ಲವೂ ಜಾಹೀರಾತು ರಹಿತ ವಿಶ್ವಮಟ್ಟದ ಗ್ರಾಹಕ ಅನುಭವದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿದೆ. ಈ ಸೇವೆಯಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಕಾರ್ಯಕ್ರಮಗಳು ಲಭ್ಯವಿದೆ

  30-ದಿನಗಳ ಉಚಿತ ಟ್ರಯಲ್‍ ಲಭ್ಯ

  30-ದಿನಗಳ ಉಚಿತ ಟ್ರಯಲ್‍ ಲಭ್ಯ

  ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆ್ಯಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು. ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಪ್ರೈಮ್ ಸದಸ್ಯರು ಪಾತಾಳ್ ಲೋಕ್‍ನ ಎಲ್ಲಾ ಎಪಿಸೋಡ್‍ಗಳನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‍ಗಳಿಗೆ ಡೌನ್‍ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‍ಲೈನ್‍ನಲ್ಲಿ ವೀಕ್ಷಿಸಬಹುದು.

  ಪ್ರೈಮ್ ವೀಡಿಯೋ, ಭಾರತದಲ್ಲಿ ಪ್ರೈಮ್ ಸದಸ್ಯರಿಗೆ ರೂ.999 ವಾರ್ಷಿಕ ಅಥವಾ ರೂ. 129 ಮಾಸಿಕ ದರದಲ್ಲಿ ಲಭ್ಯವಿದೆ. ಹೊಸ ಗ್ರಾಹಕರು ಅಮೆಜಾನ್ ಪ್ರೈಮ್ ವೆಬ್ ತಾಣಕ್ಕೆ ಭೇಟಿ ನೀಡಿ 30-ದಿನಗಳ ಉಚಿತ ಟ್ರಯಲ್‍ಗೆ ಚಂದಾ ಪಡೆದುಕೊಳ್ಳಬಹುದು.

  English summary
  Paatal Lok is a 9-part Amazon Original Series releasing globally on May 15. The series follows the story of an honest cop investigating an assassination attempt on a well-known journalist. The thrilling chase leads him to the dark alleys of netherworld - the 'Paatal Lok'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X