ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರೀಸ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ
ಬಾಲಿವುಡ್ ಖ್ಯಾತ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನಿರ್ಮಿಸಿರುವ ಹೊಸ ವೆಬ್ ಸೀರೀಸ್ ಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.
ಅನುಷ್ಕಾ ಶರ್ಮಾ ತನ್ನ ಪ್ರೊಡಕ್ಷನ್ ಹೌಸ್ ಮುಖೇನ, 'ಪಾತಾಳ್ ಲೋಕ್' ಹೆಸರಿನ ಕ್ರೈಂ, ಥ್ರಿಲ್ಲರ್ ಕತೆಯುಳ್ಳ ವೆಬ್ ಸೀರೀಸ್ ಅನ್ನು ನಿರ್ಮಿಸಿದ್ದಾರೆ. ಅದು ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗುತ್ತಿದೆ.
ಆದರೆ ಈ ವೆಬ್ ಸೀರೀಸ್ ಕೆಲವು ಸಮುದಾಯದವರ ಭಾವನೆಗಳಿಗೆ ಧಕ್ಕೆ ತರುತ್ತಿದೆ, ಹಾಗಾಗಿ ಕೆಲವು ಸೀನ್‌ಗಳನ್ನು ಡಿಲೀಟ್ ಮಾಡಬೇಕು, ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಬೇಕು ಎಂದು ಒತ್ತಾಯಿಸಿ ಅರ್ಜಿ ಸಲ್ಲಿಸಲಾಗಿದೆ.

ಭಾರತೀಯ ಗೂರ್ಖಾ ಯುವ ಪರಿಷದ್ ನಿಂದ ದೂರು
ಗೂರ್ಖಾ ಸಮುದಾಯವನ್ನು ಪ್ರತಿನಿಧಿಸುವ ಭಾರತೀಯ ಗೂರ್ಖಾ ಯುವ ಪರಿಷದ್ ಹೆಸರಿನ ಸಂಘಟನೆ ನ್ಯಾಯಾಲಯಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಗುಜರಾಯಿಸಿದ್ದು, ಪಾತಾಳ್ ಲೋಕ್ ವೆಬ್ ಸೀರೀಸ್‌ನ ಕೆಲವು ಸಂಭಾಷಣೆ ಗೋರ್ಖಾ ಸಮುದಾಯಕ್ಕೆ ಮಾನ ಹಾನಿ ಮಾಡುತ್ತಿವೆ ಎಂದಿದೆ.

ಗೂರ್ಖಾ ಸಮುದಾಯಕ್ಕೆ ಅಪಮಾನ
ವೆಬ್ ಸೀರೀಸ್ ನಲ್ಲಿ ಮಹಿಳೆಯ ಪಾತ್ರವೊಂದಕ್ಕೆ 'ನೇಪಾಳಿ' ಎಂದು ಕರೆಯಲಾಗಿದೆ ಅಲ್ಲದೆ ಲೈಂಗಿಕ ಸೂಚಕ ಪದಗಳನ್ನು ಬಳಸಲಾಗಿದೆ. ಇದು ನೇಪಾಳಿಗರ, ಗೋರ್ಖಾ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಭಾರತೀಯ ಗೋರ್ಖಾ ಯುವ ಪರಿಷದ್ ಆಪಾದಿಸಿದೆ.

ಈಶಾನ್ಯ ರಾಜ್ಯದ ಜನರ ಬಗ್ಗೆ ಹಗುರ ಮಾತು?
ಈಶಾನ್ಯ ರಾಜ್ಯಗಳ ಜನರ ಬಗ್ಗೆ ತುಚ್ಛವಾಗಿ ಮಾತನಾಡುವ ಕೆಲವು ಸಂಭಾಷಣೆಗಳೂ ಸಹ ಪಾತಾಳ್ ಲೋಕ್ ವೆಬ್ ಸೀರೀಸ್ ನಲ್ಲಿವೆ ಎನ್ನಲಾಗುತ್ತಿದ್ದು, ಅವನ್ನೂ ಸಹ ತೆಗೆದು ಹಾಕಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಅನುಷ್ಕಾ ಶರ್ಮಾ ರ ಮೊದಲ ವೆಬ್ ಸೀರೀಸ್
ಅನುಷ್ಕಾ ಶರ್ಮಾ ಈ ವೆಬ್ ಸೀರೀಸ್ ನಿರ್ಮಿಸಿದ್ದು, ಇದು ಅವರ ನಿರ್ಮಾಣದ ಮೊದಲ ವೆಬ್ ಸೀರೀಸ್ ಆಗಿದೆ. ಶಾರುಖ್ ಖಾನ್ ಸಹ ಎರಡು ವೆಬ್ ಸೀರೀಸ್ ನಿರ್ಮಿಸಿದ್ದಾರೆ. ಅವು ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











